ಏಕದಿನ ಕ್ರಿಕೆಟ್ ನಲ್ಲಿ 12 ಸಾವಿರ ರನ್: ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ಕಿಂಗ್ ಕೊಹ್ಲಿ
Team Udayavani, Dec 2, 2020, 10:03 AM IST
ಕ್ಯಾನ್ ಬೆರಾ: ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22 ಸಾವಿರ ರನ್ ಪೂರ್ತಿಗೊಳಿಸಿದ ವಿರಾಟ್ ಕೊಹ್ಲಿ, ಈಗ ಮತ್ತೂಂದು ಸಾಧನೆಯ ಹೊಸ್ತಿಲಲ್ಲಿದ್ದಾರೆ. ಇಂದು 23 ರನ್ ಮಾಡಿದ ಅವರು ಏಕದಿನ ಕ್ರಿಕೆಟ್‌ನಲ್ಲಿ 12 ಸಾವಿರ ರನ್ ಪೂರೈಸಿದರು. ಜತೆಗೆ ಅತೀ ವೇಗದಲ್ಲಿ ಈ ಸಾಧನೆಗೈದ ದಾಖಲೆಗೂ ಪಾತ್ರರಾದರು.
ಭರ್ತಿ 250 ಪಂದ್ಯಗಳನ್ನಾಡಿರುವ ಕೊಹ್ಲಿ 241 ಇನ್ನಿಂಗ್ಸ್‌ಗಳಿಂದ 11,977 ರನ್ ಬಾರಿಸಿದ್ದ, ಇಂದಿನ ಪಂದ್ಯದಲ್ಲಿ ಉಳಿದ 23 ರನ್ ಮಾಡಿದ ಅವರು ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದಿದ್ದಾರೆ.
ಸಚಿನ್ ತೆಂಡುಲ್ಕರ್ 309ನೇ ಪಂದ್ಯದ 300ನೇ ಇನ್ನಿಂಗ್ಸ್‌ನಲ್ಲಿ 12 ಸಾವಿರ ರನ್ ಪೂರ್ತಿಗೊಳಿಸಿದ್ದರು. ಇದು 12 ಸಾವಿರ ರನ್ನುಗಳ ಅತೀ ವೇಗದ ದಾಖಲೆಯಾಗಿದೆ. ಕೊಹ್ಲಿ ಇದನ್ನು 50ಕ್ಕೂ ಹೆಚ್ಚು ಪಂದ್ಯಗಳಷ್ಟು ಬೇಗ ಪೂರೈಸಿರುವುದು ವಿಶೇಷ.
ಇದನ್ನೂ ಓದಿ:ಅಂತಿಮ ಏಕದಿನ: ಟಾಸ್ ಗೆದ್ದ ಭಾರತ, ಇಬ್ಬರು ಆಟಗಾರರು ಪದಾರ್ಪಣೆ
ಮೊದಲೆರಡು ಪಂದ್ಯ ಸೋತಿರುವ ಟೀಂ ಇಂಡಿಯಾ ವೈಟ್ ವಾಷ್ ಭೀತಿಯಿಂದ ತಪ್ಪಿಸಿಕೊಳ್ಳಲು ಇಂದು ಗೆಲ್ಲುವುದು ಅನಿವಾರ್ಯವಾಗಿದೆ. ಇಂದಿನ ಪಂದ್ಯದಲ್ಲಿ ಭಾರತ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಐಪಿಎಲ್ ಹೀರೋ ಟಿ ನಟರಾಜನ್ ಪದಾರ್ಪಣೆ ಮಾಡಿದರೆ, ಶುಭ್ಮನ್ ಗಿಲ್, ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಇಂದು ಆಡುತ್ತಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444