Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು
Team Udayavani, Sep 18, 2024, 12:29 PM IST
ಮುಂಬಯಿ: ಟೀಮ್ ಇಂಡಿಯಾ(Team India) ಕೋಚ್ ಗೌತಮ್ ಗಂಭೀರ್ (Gautam Gambhir) ಹಾಗೂ ವಿರಾಟ್ ಕೊಹ್ಲಿ(Virat Kohli) ಮತ್ತೆ ಹಳೆಯ ಸ್ನೇಹಿತರಾಗಿ ಆತ್ಮೀಯರಾಗಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಎಲ್ಲಾ ಮಸಾಲ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಒಂದು ಕಾಲದಲ್ಲಿ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಪರವಾಗಿ ಜತೆಯಾಗಿ ಆಡಿದವರು. 2011ರ ಏಕದಿನ ವಿಶ್ವಕಪ್‌ನಲ್ಲಿ ಆಡಿದ ಆಟದಿಂದಿಡಿದು ಟಿ-20, ಟೆಸ್ಟ್‌ನಲ್ಲೂ ಗಂಭೀರ್ – ಕೊಹ್ಲಿ ಮಾಡಿರುವ ಸಾಧನೆ ಒಂದೆರೆಡಲ್ಲ. ಇಬ್ಬರು ಉತ್ತಮ ಸ್ನೇಹಿತರು. ಆದರೆ ಐಪಿಎಲ್ ಸಂದರ್ಭದಲ್ಲಿ ಮೈದಾನದಲ್ಲಾದ ಒಂದಷ್ಟು ಸನ್ನಿವೇಶದಿಂದ ಇಬ್ಬರು ಪರಸ್ಪರ ಶತ್ರುವಿನಂತೆ ಕಾಣಿಸಿಕೊಂಡಿದ್ದರು.
ಕೆಕೆಆರ್ – ಆರ್ ಸಿಬಿ ನಡುವಿನ ಪಂದ್ಯ ಹಾಗೂ ಗಂಭೀರ್ ಲಕ್ನೋ ತಂಡದ ಮೆಂಟರ್ ಆಗಿದ್ದ ಸಂದರ್ಭದಲ್ಲಾದ ಕೆಲ ಸನ್ನಿವೇಶಗಳು ವಿರಾಟ್ – ಗಂಭೀರ್ ನಡುವಿನ ಸ್ನೇಹಿತರ ಬಾಂಧವ್ಯಕ್ಕೆ ಒಂದಷ್ಟು ಹಾನಿಯುಂಟು ಮಾಡಿತ್ತು.
ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆದ ಬಳಿಕ ಕೊಹ್ಲಿ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಮತ್ತೆ ಹಳೆಯ ಟೀಮ್ ಮೇಟ್ಸ್ ನಂತೆ ಇಬ್ಬರು ಅಭ್ಯಾಸದ ವೇಳೆ ಕಾಣಿಸಿಕೊಂಡಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಮುನ್ನ ಗೌತಿ ಹಾಗೂ ಕೊಹ್ಲಿ ಆತ್ಮೀಯತೆಯ ಚಿಟ್ ಚಾಟ್ ವಿಡಿಯೋವೊಂದನ್ನು ಬಿಸಿಸಿಐ ಹಂಚಿಕೊಂಡಿದೆ.
A Very Special Interview 🙌
Stay tuned for a deep insight on how great cricketing minds operate. #TeamIndia’s Head Coach @GautamGambhir and @imVkohli come together in a never-seen-before freewheeling chat.
You do not want to miss this! Shortly on https://t.co/Z3MPyeKtDz pic.twitter.com/dQ21iOPoLy
— BCCI (@BCCI) September 18, 2024
ವಿಡಿಯೋದಲ್ಲಿ 2011ರಲ್ಲಿ ಏಕದಿನ ವಿಶ್ವಕಪ್ ನಲ್ಲಿ ಗಂಭೀರ್ ಹಾಗೂ ಕೊಹ್ಲಿ ಅವರು ಆಡಿದ ಅಮೋಘ ಇನ್ನಿಂಗ್ಸ್ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಇಬ್ಬರು ಗಳಿಸಿದ ರನ್ ಸುರಿಮಳೆಗಳ ಝಲಕ್ ನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಗಂಭೀರ್ ಮಾತನಾಡುತ್ತಾ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಳಿಸಿದ ರನ್‌ಗಳ ಬಗ್ಗೆ ಶ್ಲಾಘಿಸಿ ನ್ಯೂಜಿಲೆಂಡ್ ವಿರುದ್ಧ ತಾನು ನೇಪಿಯರ್ ನಲ್ಲಿ ಆಡಿದ ಇನ್ನಿಂಗ್ಸ್ ಕುರಿತು ನೆನಪಿಸಿಕೊಂಡಿದ್ದಾರೆ.
ಇದಲ್ಲದೆ ಆಸ್ಟ್ರೇಲಿಯಾ ವಿರುದ್ಧ ಮೈದಾನದಲ್ಲಿ ನಡೆದಿದ್ದ ಕೆಲ ಸನ್ನಿವೇಶಗಳ ಇಬ್ಬರು ಮಾತನಾಡಿದ್ದಾರೆ.
ಸದ್ಯ ಈ ಸಂದರ್ಶನದ ಝಲಕ್ ಬಿಡಲಾಗಿದ್ದು, ಶೀಘ್ರದಲ್ಲಿ ಬಿಸಿಸಿಐ.ಟಿವಿಯಲ್ಲಿ ಸಂಪೂರ್ಣ ಸಂದರ್ಶನ ಪ್ರಸಾರವಾಗಲಿದೆ.
ಭಾರತ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್, ಮೂರು 3 T20I ಪಂದ್ಯಗಳನ್ನು ಆಡಲಿದೆ. ಟೆಸ್ಟ್ ಸರಣಿ ಗುರುವಾರ(ಸೆ.19) ದಿಂದ ಆರಂಭಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Series; ನ್ಯೂಜಿ ಲ್ಯಾಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ
Ramp Walk ಮಾಡಿ ಗಮನ ಸೆಳೆದ ಮನು ಭಾಕರ್ : ವಿಡಿಯೋ ನೋಡಿ
1st Test; ಪಾಕಿಸ್ಥಾನಕ್ಕೆ ತವರಿನಲ್ಲೇ ಶಾಕ್:ಇಂಗ್ಲೆಂಡ್ ಗೆ ಇನಿಂಗ್ಸ್ & 47 ರನ್‌ಗಳ ಜಯ
Women’s T20 World Cup;ಇಂದು ಆಸ್ಟ್ರೇಲಿಯಕ್ಕೆ ಪಾಕ್ ಸವಾಲು
Ranji Trophy ಕ್ರಿಕೆಟ್ ಇಂದಿನಿಂದ : ಕರ್ನಾಟಕಕ್ಕೆ ಮಧ್ಯಪ್ರದೇಶ ಎದುರಾಳಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mysore- Film City: ಮೈಸೂರಿಗೆ ಚಿತ್ರನಗರಿ ಕಿರೀಟ
Renukaswamy Case: ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್.. ಬೆಂಗಳೂರು ಶಿಫ್ಟ್ ಆಗ್ತಾರಾ?
Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹಲವರಿಗೆ ಗಾಯ
Mysore: ರಾಜ ಪ್ರಭುತ್ವದ ನಾಡ ಕುಸ್ತಿ: ರಾಜಾಶ್ರಯ ಪಡೆದು ಉತ್ತುಂಗಕ್ಕೇರಿದ್ದ ನಾಡಿನ ಗಂಡುಕಲೆ
Subramanya: ಮನೆ ಮನೆಗೆ ಕೇರ್ಪಡ ದೇವಳದ ಹುಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.