ಡಿಆರ್ಎಸ್ ವಿರುದ್ಧ ವಿರಾಟ್ ಕೊಹ್ಲಿ ಅಸಮಾಧಾನ
Team Udayavani, Mar 12, 2019, 12:45 AM IST
ಮೊಹಾಲಿ: ಆಸ್ಟ್ರೇಲಿಯ ವಿರುದ್ಧ ಮೊಹಾಲಿ ಪಂದ್ಯದ ಸೋಲಿನ ಬೆನ್ನಲ್ಲೇ ಡಿಆರ್ಎಸ್ ವಿರುದ್ಧ ಭಾರತದ ನಾಯಕ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೂಮ್ಮೆ ಡಿಆರ್ಎಸ್ನ ಬಣ್ಣ ಬಯಲಾಗಿದೆ ಎಂದು ಕಿಡಿಕಾರಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಅವರು, “ಚಾಹಲ್ ಎಸೆತದಲ್ಲಿ ಟರ್ನರ್ ಔಟಾಗಿದ್ದು ಖಚಿತವಾಗಿತ್ತು. ಹಾಗಾಗಿಯೇ ಡಿಆರ್ಎಸ್ಗೆ ಮನವಿ ಮಾಡಿದ್ದೆವು. ಆದರೆ ಅಲ್ಲಿ ನಾಟೌಟ್ ತೀರ್ಪು ಬಂದದ್ದನ್ನು ನೋಡಿ ಆಶ್ಚರ್ಯವಾಯಿತು. ಈ ಎಲ್ಲ ಬೆಳವಣಿಗೆಗಳಿಂದ ಡಿಆರ್ಎಸ್ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಪದೇ ಪದೇ ಇಂತಹ ತಪ್ಪುಗಳು ಆಗುತ್ತಿರುವುದರಿಂದ ಬೇಸರವಾಗಿದೆ’ ಎಂದರು.
ಪಂದ್ಯದ 44ನೇ ಓವರ್ ವೇಳೆ ಬ್ಯಾಟಿಂಗ್ ನಡೆಸುತ್ತಿದ್ದ ಟರ್ನರ್, ಚಾಹಲ್ ಎಸೆತದಲ್ಲಿ ಕೀಪರ್ ಪಂತ್ಗೆ ಕ್ಯಾಚ್ ನೀಡಿದ್ದರು. ಬ್ಯಾಟ್ಗೆ ಬಡಿದು ಚೆಂಡು ಕೀಪರ್ ಕೈ ಸೇರಿತ್ತು. ಆಗ ಟರ್ನರ್ 41 ರನ್ ಗಳಿಸಿದ್ದರು. ನಾಟೌಟ್ ಎಂದು ತೀರ್ಪು ಬಂದಿದ್ದರಿಂದ ಮತ್ತೆ ಬ್ಯಾಟ್ ಮುಂದುವರಿಸಿದ ಟರ್ನರ್ ಪಂದ್ಯವನ್ನೇ ತಿರುಗಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ