ಕ್ರಿಕೆಟಿಗರ ವೇತನ ಹೆಚ್ಚಳಕ್ಕೆ ಒತ್ತಾಯ
Team Udayavani, Nov 29, 2017, 2:24 PM IST
ಹೊಸದಿಲ್ಲಿ: ಕೇವಲ 5 ವರ್ಷದ ಐಪಿಎಲ್ ನೇರ ಪ್ರಸಾರದಿಂದಲೇ ಬಿಸಿಸಿಐ 2,500 ಕೋಟಿ ರೂ. ಗಳಿಸುವುದನ್ನು ಉಲ್ಲೇಖೀಸಿ ಕ್ರಿಕೆಟಿಗರ ವೇತನ ಹೆಚ್ಚಿಸಿ ಎಂಬ ಬೇಡಿಕೆಯೊಂದನ್ನು ಬಿಸಿಸಿಐ ಮುಂದೆ ಇಡಲು ಸಿದ್ಧತೆಗಳಾಗುತ್ತಿವೆ. ಇಂಥದೊಂದು ಬೇಡಿಕೆ ಸ್ವತಃ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಂದಲೇ ಕೇಳಿಬಂದಿರುವುದು ವಿಶೇಷ!
ನಾಯಕ ಕೊಹ್ಲಿ, ಮಾಜಿ ನಾಯಕ ಧೋನಿ, ತರಬೇತುದಾರ ರವಿಶಾಸ್ತ್ರಿ ಸೇರಿ ಬಿಸಿಸಿಐಯನ್ನು ಒತ್ತಾಯಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸದ್ಯ ಬಿಸಿಸಿಐಯಲ್ಲಿ ಎ ದರ್ಜೆಯ ಗುತ್ತಿಗೆ ಹೊಂದಿರುವ ಆಟಗಾರರಿಗೆ 2 ಕೋಟಿ ರೂ. ನೀಡಲಾಗುತ್ತಿದೆ. ಬಿ ದರ್ಜೆಗೆ ಒಂದು ಕೋಟಿ ರೂ., ಸಿ ದರ್ಜೆಗೆ 50 ಲಕ್ಷ ರೂ. ವೇತನವಿದೆ. ಆದರೀಗ ವಿವಿಧ ನೇರ ಪ್ರಸಾರದ ಆದಾಯದಿಂದಲೇ 3,000 ಕೋಟಿ ರೂ.ಗೂ ಅಧಿಕ ಹಣ ಹರಿದು ಬರುತ್ತಿದೆ. ಇನ್ನು ಬೇರೆ ಬೇರೆ ಮೂಲಗಳಿಂದಲೂ ಬಿಸಿಸಿಐಗೆ ಕೋಟಿಗಟ್ಟಲೆ ಆದಾಯವಿದೆ. ಆದ್ದರಿಂದ ಕ್ರಿಕೆಟಿಗರು ವೇತನ ಹೆಚ್ಚಳಕ್ಕಾಗಿ ಮನವಿ ಸಲ್ಲಿಸುವುದರಲ್ಲಿ ತಪ್ಪೇನಿಲ್ಲ ಎಂದು ಕೆಲವು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ