ಕೊಹ್ಲಿ ಪೋಸ್ಟ್ ಗೆ ‘ಹೆಲ್ಲೋ ಬಿಲ್ಲಿ’ ಎಂದು ಕಾಮೆಂಟ್ ಮಾಡಿದ ಅನುಷ್ಕಾ ಶರ್ಮಾ
Team Udayavani, Nov 23, 2021, 4:04 PM IST
ಮಂಗಳವಾರ ಬೆಳಿಗ್ಗೆ ಅಭ್ಯಾಸದ ನಂತರವೂ ವಿರಾಟ್ ಕೊಹ್ಲಿ ಕೂಲಾಗಿದ್ದಾರೆ. ಇದಕ್ಕೆ ಕಾರಣ ಇವರಿಗೆ ದೊರಕಿದ ಹೊಸ ಫ್ರೆಂಡ್. ಭಾರತೀಯ ಕ್ರಿಕೆಟ್ ತಂಡದ ನಾಯಕ ಮುದ್ದಾದ ಬೆಕ್ಕನ್ನು ಹಿಡಿದುಕೊಂಡು ಅದರೊಂದಿಗೆ ಕಳೆದ ಅನುಭವವನ್ನು ಹಂಚಿಕೊಳ್ಳುವ ಮೂಲಕ ಕ್ರಿಕೇಟ್ ಅಭ್ಯಾಸಕ್ಕೆ ಹೊಸ ಮೆರಗು ನೀಡಿದ್ದಾರೆ.
View this post on Instagram
ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ಅವರು ಆ ಮುದ್ದಾದ ಕಿಟ್ಟಿ ಬಗ್ಗೆ ಬರೆದುಕೊಂಡಿದ್ದಾರೆ ಮತ್ತು ಅವರ ಹೊಸ ಸ್ನೇಹಿತನೊಂದಿಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.ಕೆಲ ಹೊತ್ತಿನಲ್ಲೇ ಈ ಪೋಸ್ಟ್ ಭಾರಿ ವೈರಲ್ ಆಗಿದೆ.
ಅಭ್ಯಾಸದ ವೇಳೆ ದೊರೆತ ಈ ಕೂಲ್ ಬೆಕ್ಕಿನಿಂದ ನಿಮಗೆಲ್ಲಾ ಒಂದು ಹಲೋ ಎಂದು ವಿರಾಟ್ ಬರೆದಿದ್ದಾರೆ. ಈ ಪೋಸ್ಟ್ ಕೇವಲ ಒಂದು ಗಂಟೆಯ ಒಳಗೆ 1.2 ಮಿಲಿಯನ್ಗಿಂತಲೂ ಹೆಚ್ಚು ಲೈಕ್ ಗಳನ್ನು ಪಡೆದಿದೆ ಮತ್ತು ರಾಶಿ ಕಾಮೆಂಟ್ಗಳನ್ನೂ ಪಡೆದುಕೊಂಡಿದೆ.
ಅನುಷ್ಕಾ ಕೂಡ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿ ಹಲೋ ಬಿಲ್ಲಿ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಹಲವರು ತಮಾಷೆ ಮಾಡಿದ್ದು ಜೊತೆಗೆ ಒಬ್ಬ ಬಳಕೆದಾರ, “ಆ ಬೆಕ್ಕು ಅದೃಷ್ಟದ ಬೆಕ್ಕು” ಎಂದು ಬರೆದರೆ, “ಹಾಯ್ ಕಿಟ್ಟಿ ಕ್ಯಾಟ್” ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ