ಟಿ ಟ್ವೆಂಟಿ: ಕೇವಲ 25 ರನ್ ಸಾಕು ವಿರಾಟ್ ಕೊಹ್ಲಿಯ ಈ ಹೊಸ ದಾಖಲೆಗೆ

Team Udayavani, Dec 8, 2019, 1:40 PM IST

ತಿರುವನಂತಪುರ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯಕ್ಕೆ ತಿರುವನಂತಪುರ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದ ಟೀಂ ಇಂಡಿಯಾ ಎರಡನೆ ಪಂದ್ಯ ಜಯಿಸುವ ವಿಶ್ವಾಸವಿದೆ. ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಮೊದಲ ಪಂದ್ಯದಲ್ಲಿ ಅಜೇಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಕೇವಲ 25 ರನ್ ಗಳಿಸಿದರೆ ಸಾಕು ಹೊಸತೊಂದು ದಾಖಲೆ ಬರೆಯಲಿದ್ದಾರೆ. ತವರಿನ ಟಿ ಟ್ವೆಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈಗಾಗಲೇ 975 ರನ್ ಗಳಿಸಿರುವ ವಿರಾಟ್ ಇನ್ನು 25 ರನ್ ಗಳಿಸಿದರೆ ತವರಿನ ಟಿ ಟ್ವೆಂಟಿಯಲ್ಲಿ ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.

ತವರಿನ ಚುಟುಕು ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಕೇವಲ ಮೂರನೇ ಆಟಗಾರನೆಂಬ ಗರಿಮೆ ಕೊಹ್ಲಿ ಪಾಲಿಗಾಗಲಿದೆ. ಕಿವೀಸ್ ಆಟಗಾರರಾದ ಮಾರ್ಟಿನ್ ಗಪ್ಟಿಲ್ (1430) ಮತ್ತು ಕಾಲಿನ್ ಮನ್ರೋ (1000) ಈಗಾಗಲೆ ಈ ಸಾಧನೆ ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ