ಕೊಹ್ಲಿ ಮಗು ಮೇಲೆ ಅತ್ಯಾಚಾರ ಬೆದರಿಕೆ; ದೆಹಲಿ ಪೊಲೀಸರಿಗೆ ಡಿಸಿಡಬ್ಲ್ಯೂ
Team Udayavani, Nov 2, 2021, 6:46 PM IST
ನವದೆಹಲಿ: ಟಿ20 ವಿಶ್ವ ಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋಲನುಭವಿಸಿದ ಹಿನ್ನೆಲೆಯಲ್ಲಿ ಕೊಹ್ಲಿ-ಅನುಷ್ಕಾ ದಂಪತಿ ಮಗಳಿಗೆ ಆನ್‌ಲೈನ್‌ನ ಮೂಲಕ ಕೆಲವು ನೆಟ್ಟಿಗರು ಅತ್ಯಾಚಾರ ಬೆದರಿಕೆ ಹಾಕಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯೂ), ಪ್ರಕರಣ ಕುರಿತಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.
ಕೇವಲ ಒಂಭತ್ತು ತಿಂಗಳ ಮಗುವಿನ ಮೇಲೆ ಇಂಥ ಬೆದರಿಕೆಗಳು ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್ ಮಾಡಿರುವ ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಲಿವಾಲ್, “ಭಾರತ ಕ್ರಿಕೆಟ್ ತಂಡ ಸಾಕಷ್ಟು ಬಾರಿ ನಾವು ಹೆಮ್ಮೆ ಪಡುವಂತೆ ಮಾಡಿದೆ. ಒಂದು ಸೋಲಿಗೆ ಅವರಿಗೆ ಈ ರೀತಿ ಬೆದರಿಕೆ ಹಾಕುವುದು ಸರಿಯಲ್ಲ’ ಎಂದಿರುವ ಅವರು, “ಪೊಲೀಸರು ದಾಖಲಿಸಿರುವ ಎಫ್ಐಆರ್, ಆರೋಪಿಗಳ ಮಾಹಿತಿ, ವಶಕ್ಕೆ ಪಡೆದವರು ಮಾಹಿತಿ ಜೊತೆ ಆರೋಪಿಗಳ ವಿರುದ್ಧ ಯಾವ ರೀತಿಯಲ್ಲಿ ಕ್ರಮ ತೆಗದುಕೊಳ್ಳಲಾಗುತ್ತಿದೆ ಎನ್ನುವುದಕ್ಕೆ ಉತ್ತರವನ್ನು ನ. 8ರೊಳಗೆ ಕೊಡಿ’ ಎಂದು ದೆಹಲಿ ಪೊಲೀಸ್ ಇಲಾಖೆಗೆ ಸ್ವಾತಿ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೈದರಾಬಾದ್ಗೆ ದೂರದಲ್ಲಿ ಪ್ಲೇ ಆಫ್ ಆಸೆ; ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಗೆಲುವು
ಕ್ರಿಸ್ ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್ ಫೇಮ್ ಪ್ರಶಸ್ತಿ
ಕೋವಿಡ್ ಕಾರಣದಿಂದಾಗಿ ಏಷ್ಯನ್ ಪ್ಯಾರಾ ಗೇಮ್ಸ್ ಮುಂದೂಡಿಕೆ
ಕೋಲ್ಕತಾ ನೈಟ್ರೈಡರ್ ಬ್ಯಾಟರ್ ಅಜಿಂಕ್ಯ ರಹಾನೆ ಐಪಿಎಲ್ನಿಂದ ಹೊರಕ್ಕೆ
ಟ್ರಯಲ್ಸ್ ವೇಳೆ ರೆಫ್ರಿ ಮೇಲೆ ಹಲ್ಲೆ: ಕುಸ್ತಿಪಟು ಸತೇಂದರ್ ಮಲಿಕ್ ಗೆ ಜೀವಾವಧಿ ನಿಷೇಧ