ವಿರಾಟ್ ಕೊಹ್ಲಿ, ಸ್ಮೃತಿ ಮಂದನಾಗೆ ಸಿಯೆಟ್ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ

ಒಟ್ಟು ಒಂಬತ್ತು ಪ್ರಶಸ್ತಿಯಲ್ಲಿ ಏಳು ಭಾರತದ ಪಾಲಿಗೆ

Team Udayavani, May 14, 2019, 2:58 PM IST

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 2019ನೇ ಸಾಲಿನ ಸಿಯೆಟ್ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ. ಭಾರತೀಯ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದನಾ ಮಹಿಳಾ ಅತ್ಯುತ್ತಮ ಆಟಗಾರ್ತಿ  ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ವಿರಾಟ್ ಕೊಹ್ಲಿ ಮತ್ತೊಂದು ಪ್ರಶಸ್ತಿ ಪಡೆದಿದ್ದು, ಅತ್ಯುತ್ತಮ ಬ್ಯಾಟ್ಸಮನ್ ಪ್ರಶಸ್ತಿಯೂ ಭಾರತೀಯ ನಾಯಕನ ಪಾಲಾಗಿದೆ. ಜಸ್ಪ್ರೀತ್ ಬುಮ್ರಾಗೆ ಬೆಸ್ಟ್ ಬೌಲರ್ ಪ್ರಶಸ್ತಿ ದಕ್ಕಿದೆ.

ಪ್ರಶಸ್ತಿ ಪಟ್ಟಿಯಲ್ಲಿ ಭಾರತೀಯರೇ ಸಿಂಹಪಾಲು ಪಡೆದಿದ್ದು, ಒಟ್ಟು ಒಂಬತ್ತು ಪ್ರಶಸ್ತಿಯಲ್ಲಿ ಏಳು ಭಾರತೀಯರ ಪಾಲಾಗಿದೆ. ಅತ್ಯುತ್ತಮ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿ ಚೇತೇಶ್ವರ ಪೂಜಾರ ಪಾಲಾದರೆ, ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಉಪನಾಯಕ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ.

ಚೈನಾಮನ್ ಬೌಲರ್ ಕುಲದೀಪ್ ಯಾದವ್  ವರ್ಷದ ಅತ್ಯದ್ಭುತ ಪ್ರದರ್ಶನ ಪ್ರಶಸ್ತಿ ಪಡೆದರೆ, ಆಸ್ಟ್ರೇಲಿಯಾ ದ ಆರೋನ್ ಫಿಂಚ್ ವರ್ಷದ ಟಿ-ಟ್ವೆಂಟಿ ಆಟಗಾರ, ಅಫಘಾನಿಸ್ತಾನದ ರಶೀದ್ ಖಾನ್ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಬೌಲರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1983ರ ವಿಶ್ವಕಪ್ ತಂಡದಲ್ಲಿದ್ದ ಭಾರತೀಯ ಮಾಜಿ ಆಟಗಾರ ಮೊಹಿಂದರ್ ಅಮರನಾಥ್ ಅವರನ್ನು ಜೀವಮಾನ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

  • ಹೊಸದಿಲ್ಲಿ: ಚೀನ ವಿರುದ್ಧ 0-5 ಅಂತರದಿಂದ ಹೀನಾಯ ಸೋಲು ಕಂಡ ಭಾರತವು ಸುದಿರ್ಮನ್‌ ಕಪ್‌ ಕೂಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಿಂದ ಹೊರಬಿತ್ತು. "ಡಿ' ಬಣದ...

  • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

  • ಹೊಸದಿಲ್ಲಿ: ವೆಸ್ಟ್‌ ಇಂಡೀಸ್‌ ತಂಡ ಇತ್ತೀಚೆಗಿನ ಕೆಲ ವರ್ಷದಿಂದ ತುಸು ಬಲಹೀನ ವಾಗಿರುವಂತೆ ಕಂಡಿರಬಹುದು. ಹಾಗೆಂದು ವಿಶ್ವಕಪ್‌ನ ಕೂಟದಲ್ಲಿ ದೈತ್ಯ ಆಟಗಾರರನ್ನೊಳಗೊಂಡಿರುವ...

  • ಗುವಾಹಾಟಿ: ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಶಿವ ಥಾಪ ಮತ್ತು ಏಶ್ಯನ್‌ ಗೇಮ್ಸ್‌ ಚಿನ್ನ ವಿಜೇತ ಅಮಿತ್‌ ಪಂಘಾಲ್‌ ನಿರೀಕ್ಷೆಯಂತೆ ಇಂಡಿಯನ್‌ ಓಪನ್‌ ಬಾಕ್ಸಿಂಗ್‌...

  • ಚಿಂಚಿಯೋನ್‌: ದಕ್ಷಿಣ ಕೊರಿಯ ವಿರುದ್ಧದ ಮೂರು ಪಂದ್ಯಗಳ ಹಾಕಿ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ. ಇದರೊಂದಿಗೆ...

ಹೊಸ ಸೇರ್ಪಡೆ