ಆನಂದ್ಗೆ ತಾಲ್ ಮೆಮೋರಿಯಲ್ ರ್ಯಾಪಿಡ್ ಚೆಸ್ ಪ್ರಶಸ್ತಿ
Team Udayavani, Mar 6, 2018, 7:30 AM IST
ಮಾಸ್ಕೋ: 11ನೇ ತಾಲ್ ಮೆಮೋರಿಯಲ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಭಾರತದ ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿದ್ದಾರೆ.
ಕೂಟದ ಅಂತಿಮ ಸುತ್ತಿನಲ್ಲಿ ಆನಂದ್ ಇಸ್ರೇಲ್ನ ಬೊರಿಸ್ ಗಾಲ#ಂಡ್ ವಿರುದ್ಧ ಡ್ರಾ ಸಾಧಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ 6 ಅಂಕ ಗಳಿಸಿ ಪ್ರಶಸ್ತಿ ಗೆದ್ದರು. ಒಟ್ಟು 10 ಆಟಗಾರರನ್ನು ಒಳಗೊಂಡ ರೌಂಡ್ ರಾಬಿನ್ ಮಾದರಿಯ ಕೂಟ ಇದಾಗಿತ್ತು. ಒಟ್ಟು 9 ಪಂದ್ಯ ಆಡಿದ ಆನಂದ್ 4ರಲ್ಲಿ ಜಯ, 4ರಲ್ಲಿ ಡ್ರಾ ಸಾಧಿಸಿ ಒಂದು ಪಂದ್ಯ ದಲ್ಲಷ್ಟೇ ಸೋಲನುಭವಿಸಿದರು. ಅಂತಿಮ ಪಂದ್ಯದಲ್ಲಿ ಆನಂದ್ ಮತ್ತು ಬೊರಿಸ್ ಗಾಲ#ಂಡ್ ನಡುವೆ ತೀವ್ರ ಸ್ಪರ್ಧೆ ಇತ್ತು. ಆದರೆ, ಬಹಳ ಜಾಗರೂಕತೆಯಿಂದ ಆಡಿದ
ಆನಂದ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.