ಭಾರತ ಅತೀ ದೊಡ್ಡ ಮ್ಯಾಚ್ ವಿನ್ನರ್ ನ್ನು ಹೆಸರಿಸಿದ ಲಕ್ಷ್ಮಣ್: ಯಾರು ಆ ಆಟಗಾರ

Team Udayavani, Nov 19, 2019, 4:02 PM IST

ಹೊಸದಿಲ್ಲಿ: ಭಾರತದ ಮಾಜಿ ಆಟಗಾರ ವೆರಿ ವೆರಿ ಸ್ಪೆಷಲ್ ಬ್ಯಾಟ್ಸಮನ್, ವಿವಿಎಸ್ ಲಕ್ಷ್ಮಣ್, ತನ್ನ ಜೊತೆ ಆಡಿದ ಆಟಗಾರರಲ್ಲಿ ಅತೀ ದೊಡ್ಡ ಮ್ಯಾಚ್ ವಿನ್ನರ್ ಅನ್ನು ಹೆಸರಿಸಿದ್ದಾರೆ.

ವಿ ವಿ ಎಸ್ ಲಕ್ಷ್ಷಣ್ ಅವರು ಸಚಿನ್ ತಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿರೇಂದ್ರ ಸೆಹವಾಗ್, ಯುವರಾಜ್ ಸಿಂಗ್ ಮುಂತಾದ ಘಟಾನುಘಟಿಗಳ ಜೊತೆ ವಿವಿಎಸ್ ಕ್ರೀಸ್ ಹಂಚಿದ್ದಾರೆ. ಆದರೆ ಭಾರತದ ಅತೀ ದೊಡ್ಡ ಮ್ಯಾಚ್ ವಿನ್ನರ್ ಆಗಿ ಹೆಸರಿಸಿದ್ದು ಕರ್ನಾಟಕದ ಬೌಲರ್ ಅನ್ನು.

ವಿವಿಎಸ್ ಲಕ್ಷ್ಮಣ್ ಪ್ರಕಾರ ಭಾರತದ ಅತೀ ದೊಡ್ಡ ಮ್ಯಾಚ್ ವಿನ್ನರ್ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿವಿಎಸ್ ನನ್ನ ನೆಚ್ಚಿನ ಗೆಳೆಯ ಅನಿಲ್ ಕುಂಬ್ಳೆ ಬಹುಷ: ಭಾರತದ ಅತೀ ದೊಡ್ಡ ಮ್ಯಾಚ್ ವಿನ್ನರ್. ನನ್ನ ಜೊತೆ ಆಡಿದವರಲ್ಲಿ ಅತೀ ದೊಡ್ಡ ಮ್ಯಾಚ್ ವಿನ್ನರ್ ಎಂದು ಕೊಂಡಾಡಿದ್ದಾರೆ.

ಲಕ್ಷ್ಮಣ್ ಮತ್ತು ಕುಂಬ್ಳೆ ಸುಮಾರು 84 ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರವಾಗಿ ಒಟ್ಟಿಗೆ ಆಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ