ಹೊರಬೀಳುವ ಆತಂಕದಲ್ಲಿ ವೇಲ್ಸ್‌; ಇರಾನ್‌ ವಿರುದ್ಧ 2-0 ಗೋಲುಗಳಿಂದ ಸೋಲು

ನಿಗದಿತ 90 ನಿಮಿಷ ದಾಟಿದ ಮೇಲೆ ಇರಾನ್‌ ಚಮತ್ಕಾರ

Team Udayavani, Nov 25, 2022, 10:21 PM IST

ಹೊರಬೀಳುವ ಆತಂಕದಲ್ಲಿ ವೇಲ್ಸ್‌; ಇರಾನ್‌ ವಿರುದ್ಧ 2-0 ಗೋಲುಗಳಿಂದ ಸೋಲು

ಅಲ್‌ ರಯ್ಯಾನ್‌: ಬಿ ಗುಂಪಿನ ಮಹತ್ವದ ಪಂದ್ಯದಲ್ಲಿ ವೇಲ್ಸ್‌ ವಿರುದ್ಧ ಇರಾನ್‌ 2-0 ಗೋಲುಗಳಿಂದ ಜಯ ಸಾಧಿಸಿದೆ. ಇದು ವೇಲ್ಸ್‌ ಎದುರಿಸಿದ ಮೊದಲ ಸೋಲು. ಇದಕ್ಕೂ ಹಿಂದಿನ ಪಂದ್ಯದಲ್ಲಿ ಅದು ಡ್ರಾ ಸಾಧಿಸಿತ್ತು.

ಕೂಟದಿಂದ ಹೊರಬೀಳುವ ಅಪಾಯದಲ್ಲಿರುವ ವೇಲ್ಸ್‌ಗೆ ಇನ್ನು ಒಂದು ಪಂದ್ಯ ಮಾತ್ರ ಬಾಕಿಯಿದೆ. ಬಲಿಷ್ಠ ಇಂಗ್ಲೆಂಡ್‌ ವಿರುದ್ಧದ ಆ ಪಂದ್ಯದಲ್ಲಿ ವೇಲ್ಸ್‌ ಗೆಲ್ಲಲೇಬೇಕಿದೆ. ಗೆದ್ದರೂ ಅದು ಅಗ್ರ 2 ತಂಡಗಳಲ್ಲಿ ಒಂದಾಗುವುದು ಬಹಳ ಕಷ್ಟವೇ ಇದೆ. ಇನ್ನು ಇರಾನ್‌ ಗೆಲುವು ಸಾಧಿಸಿರುವುದರಿಂದ ಅಗ್ರ 2 ತಂಡಗಳಲ್ಲಿ ಒಂದಾಗಿ ಪ್ರೀಕ್ವಾರ್ಟರ್‌ ಫೈನಲ್‌ಗೇರುವ ಅವಕಾಶವೊಂದು ಅದರೆದುರಿಗಿದೆ.

ಇಡೀ ಪಂದ್ಯದ ಹಣೆಬರೆಹ ನಿರ್ಧಾರವಾಗಿದ್ದೇ ನಿಗದಿತ 90 ನಿಮಿಷಗಳ ಅನಂತರ! ಅರ್ಥಾತ್‌ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಯಾವುದೇ ಗೋಲುಗಳಿಸದೇ ಡ್ರಾ ಸಾಧಿಸಿದ್ದವು. ನಿಗದಿತ ಅವಧಿ ಮುಗಿದ ಮೇಲೆ ಹೆಚ್ಚುವರಿಯಾಗಿ ನೀಡಲ್ಪಟ್ಟ 11 ನಿಮಿಷಗಳಲ್ಲಿ ಇರಾನ್‌ ಚಮತ್ಕಾರ ಮಾಡಿತು. ರೊಜ್ಬೆಹ್‌ ಚೆಶ್ಮಿ 90+8ನೇ ನಿಮಿಷದಲ್ಲಿ ದಿಢೀರನೆ ಚೆಂಡನ್ನು ಗೋಲುಪೆಟ್ಟಿಗೆಯೊಳಕ್ಕೆ ಸೇರಿಸಿಯೇಬಿಟ್ಟರು. ಅದು ಇರಾನ್‌ ಗೆಲ್ಲುವ ಸಾಧ್ಯತೆಯನ್ನು ಖಚಿತಪಡಿಸಿತ್ತು.

ವೇಲ್ಸ್‌ ಈ ಆಘಾತದಿಂದಲೇ ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾಗ ಅದಕ್ಕೆ ಇನ್ನೊಂದು ಆಘಾತ ಎದುರಾಯಿತು. ಇದಂತೂ ತೀರಾ ಅನಿರೀಕ್ಷಿತ. ಪಂದ್ಯ ಸರಿಯಾಗಿ 90+11ನೇ ನಿಮಿಷದಲ್ಲಿ ಮುಗಿಯಿತು. ಆ ಹಂತದಲ್ಲಿ ನುಗ್ಗಿಬಂದ ರಾಮಿನ್‌ ರೆಝಾಯಿನ್‌, ವೇಲ್ಸ್‌ ಟೆರೆಮಿ ಬಳಿಯಿಂದ ಚೆಂಡನ್ನು ಕಸಿದುಕೊಂಡು ಟಕ್ಕನೆ ಹೊಡೆತ ಬಾರಿಸಿದರು. ಮತ್ತೊಂದು ಗೋಲು. ವೇಲ್ಸ್‌ ಬಳಿ ಯಾವುದೇ ಉತ್ತರವೇ ಇರಲಿಲ್ಲ.

ಪಂದ್ಯದ ದ್ವಿತೀಯಾರ್ಧದಲ್ಲಿ ವೇಲ್ಸ್‌ ಪ್ರಮುಖ ಆಟಗಾರ ಮೂರ್‌ ಗೋಲು ಬಾರಿಸಲು ಬಹಳ ಯತ್ನಿಸಿದರು. ಆದರೆ ವೇಲ್ಸ್‌ನ ಇತರರು ಸೂಕ್ತವಾಗಿ ಸ್ಪಂದಿಸಲಿಲ್ಲ. ಮೂರ್‌ರನ್ನೇ ಇರಾನ್‌ ಆಟಗಾರರು ಸಹಜವಾಗಿ ಗುರಿಯಾಗಿಸಿಕೊಂಡಿದ್ದರು. ಈ ಹಂತದಲ್ಲಿ ಗ್ಯಾರೆತ್‌ ಬೇಲ್‌ ಕೂಡ ವಿಫ‌ಲರಾದರು. ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ವೇಲ್ಸ್‌ಗೆ ಸೋಲು ತಪ್ಪಿಸಿದ್ದೇ ಬೇಲ್‌ ಎನ್ನುವುದನ್ನು ಮರೆಯಬಾರದು.

ಮೊದಲರ್ಧದಲ್ಲಿ ಯಾವುದೇ ತಂಡಗಳು ಗೋಲು ಬಾರಿಸಲು ಬಲವಾದ ಯತ್ನ ಮಾಡಿದಂತೆ ಕಂಡುಬರಲಿಲ್ಲ. ಇಲ್ಲಿ ಇರಾನ್‌ ತಂತ್ರವೊಂದು ಕೆಲಸ ಮಾಡಿತು. ಆ ತಂಡ ಅಜ್ಮೌನ್ ಎಂಬ ಆಟಗಾರನನ್ನು ಕಣಕ್ಕಿಳಿಸಿತ್ತು. ಅಜ್ಮೌನ್ ಅವಕಾಶವನ್ನು ಪೂರ್ಣ ಬಳಸಿಕೊಂಡು ಎದುರಾಳಿಯನ್ನು ಕಕ್ಕಾಬಿಕ್ಕಿ ಮಾಡಿದರು. ಕೆಲವೊಮ್ಮೆ ಗೋಲು ಬಾರಿಸಿಯೇ ಬಿಟ್ಟರು ಎಂಬ ಸನ್ನಿವೇಶ ಸೃಷ್ಟಿಸಿದ್ದರು. ಬಹಳ ಬಾರಿ ಎದುರಾಳಿಯಿಂದ ಚೆಂಡನ್ನು ಕಸಿದುಕೊಂಡು, ಗೋಲಿನ ಅಪಾಯ ತಪ್ಪಿಸಿದರು.

ಟಾಪ್ ನ್ಯೂಸ್

bison

ಕಾಲುವೆಯಲ್ಲಿ ಹರಿದು ಬಂದ ಕಾಡುಕೋಣ..!

2-bantwala

ಸರಪಾಡಿ ರಥಬೀದಿ ಬಳಿ ಧರೆಗುರುಳಿದ ಅಶ್ವತ್ಥ ಮರ

Odisha Man Walks Kilometres With Wife’s Body On Shoulders In Andhra

ಹೆಗಲ ಮೇಲೆ ಹೆಂಡತಿಯ ಶವ ಹೊತ್ತು ಆಂಧ್ರದಿಂದ ಒಡಿಶಾಗೆ ನಡೆದ!

kite

ನಾಳೆಯಿಂದ ಗಾಳಿಪಟ ಉತ್ಸವ

topiaca

ವಿಶ್ವದ ಅತೀ ಎತ್ತರದ ಮರಗೆಣಸಿನ ಗಿಡ: ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ನಲ್ಲಿ ದಾಖಲು

thumb-1

ಎರಡು ವರ್ಷದ ಬಳಿಕ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ ಎಂ.ಎಸ್.ಧೋನಿ

gururaj karjagi

ಡಾ| ಗುರುರಾಜ ಕರ್ಜಗಿ ದಿಕ್ಸೂಚಿ ಭಾಷಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb-1

ಎರಡು ವರ್ಷದ ಬಳಿಕ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ ಎಂ.ಎಸ್.ಧೋನಿ

ಬಾರ್ಡರ್- ಗಾವಸ್ಕರ್ ಟ್ರೋಫಿ ಆರಂಭ

ಬಾರ್ಡರ್- ಗಾವಸ್ಕರ್ ಟ್ರೋಫಿ ಆರಂಭ: ಟೀಂ ಇಂಡಿಯಾಗೆ ಇಬ್ಬರು ಪದಾರ್ಪಣೆ

Australia net bowler mahesh pithiya met ashwin

ಆರ್‌.ಅಶ್ವಿ‌ನ್‌ ಕಾಲು ಮುಟ್ಟಿ ನಮಸ್ಕರಿಸಿದ ಆಸೀಸ್ ನೆಟ್ ಬೌಲರ್ ಮಹೇಶ್‌ ಪಿಥಿಯ

ಸ್ಪಿನ್‌ ತಂತ್ರವೇ ಗೆಲುವಿನ ಮಂತ್ರ: ಇಂದಿನಿಂದ ಭಾರತ-ಆಸ್ಟ್ರೇಲಿಯ ಟೆಸ್ಟ್‌ ಸರಣಿ

ಸ್ಪಿನ್‌ ತಂತ್ರವೇ ಗೆಲುವಿನ ಮಂತ್ರ: ಇಂದಿನಿಂದ ಭಾರತ-ಆಸ್ಟ್ರೇಲಿಯ ಟೆಸ್ಟ್‌ ಸರಣಿ

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಓವಲ್‌ ಆತಿಥ್ಯ

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಓವಲ್‌ ಆತಿಥ್ಯ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

bison

ಕಾಲುವೆಯಲ್ಲಿ ಹರಿದು ಬಂದ ಕಾಡುಕೋಣ..!

2-bantwala

ಸರಪಾಡಿ ರಥಬೀದಿ ಬಳಿ ಧರೆಗುರುಳಿದ ಅಶ್ವತ್ಥ ಮರ

Odisha Man Walks Kilometres With Wife’s Body On Shoulders In Andhra

ಹೆಗಲ ಮೇಲೆ ಹೆಂಡತಿಯ ಶವ ಹೊತ್ತು ಆಂಧ್ರದಿಂದ ಒಡಿಶಾಗೆ ನಡೆದ!

kite

ನಾಳೆಯಿಂದ ಗಾಳಿಪಟ ಉತ್ಸವ

topiaca

ವಿಶ್ವದ ಅತೀ ಎತ್ತರದ ಮರಗೆಣಸಿನ ಗಿಡ: ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ನಲ್ಲಿ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.