ಮೊದಲ ಡಬ್ಲ್ಯುಟಿಎ ಪ್ರಶಸ್ತಿ ಗೆದ್ದ ವಾಂಗ್ ಕ್ವಿಯಾಂಗ್
Team Udayavani, Jul 30, 2018, 3:16 PM IST
ಜಿಯಾಂಗ್ಕ್ಸಿ (ಚೀನ): ಚೀನದ ದ್ವಿತೀಯ ಶ್ರೇಯಾಂಕದ ಆಟಗಾರ್ತಿ ವಾಂಗ್ ಕ್ವಿಯಾಂಗ್ ಮೊದಲ ಡಬ್ಲ್ಯುಟಿಎ ಟೆನಿಸ್ ಪ್ರಶಸ್ತಿ ಜಯಿಸಿದ್ದಾರೆ. ಅವರು ರವಿವಾರ “ಜಿಯಾಂಗ್ಕ್ಸಿ ಓಪನ್ ಟೆನಿಸ್ ಪಂದ್ಯಾವಳಿ’ಯಲ್ಲಿ ಚಾಂಪಿಯನ್ ಆಗಿ ಮಚೂಡಿಬಂದರು.
ಫೈನಲ್ ಹಣಾಹಣಿಯ ವೇಳೆ ಎದುರಾಳಿ ಜೆಂಗ್ ಸೈಸೈ ಗಾಯಾಳಾಗಿ ಪಂದ್ಯ ತ್ಯಜಿಸಿದ್ದರಿಂದ ಕ್ವಿಯಾಂಗ್ ನಿರೀಕ್ಷೆಗಿಂತಲೂ ಸುಲಭದಲ್ಲೇ ಪ್ರಶಸ್ತಿ ಒಲಿಸಿಕೊಂಡರು. ಆಗ ಸೈಸೈ 5-7, 0-4ರ ಹಿನ್ನಡೆಯಲ್ಲಿದ್ದರು.
26ರ ಹರೆಯದ ವಾಂಗ್ ಡಬ್ಲ್ಯುಟಿಎ ಕೂಟಗಳಲ್ಲಿ ಪ್ರಶಸ್ತಿ ಗೆದ್ದ ಚೀನದ 8ನೇ ಆಟಗಾರ್ತಿಯಾಗಿದ್ದಾರೆ.