ಐಪಿಎಲ್ ಗಿಂತ ಪಿಎಸ್ ಎಲ್ ನಲ್ಲಿ ಉತ್ತಮ ಬೌಲರ್ ಗಳಿದ್ದಾರೆ: ವಾಸೀಂ ಅಕ್ರಮ್
Team Udayavani, Jun 6, 2020, 11:37 AM IST
ಲಾಹೋರ್: ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ನಂತೆ ಪಾಕಿಸ್ಥಾನದಲ್ಲೂ ಪಿಎಸ್ ಎಲ್ ಲೀಗ್ (ಪಾಕಿಸ್ಥಾನ ಸೂಪರ್ ಲೀಗ್) ನಡೆಯುತ್ತದೆ. ಭದ್ರತೆಯ ಕಾರಣ ದುಬೈನಲ್ಲಿ ನಡೆಯುತ್ತಿರುತ್ತಿದ್ದ ಪಿಎಸ್ ಎಲ್ ಕಳೆದ ಆವೃತ್ತಿ ಪಾಕಿಸ್ಥಾನದಲ್ಲೇ ನಡೆದಿತ್ತು. ಸದ್ಯ ವಾಸೀಂ ಅಕ್ರಮ್ ಐಪಿಎಲ್ ಮತ್ತು ಪಿಎಸ್ ಎಲ್ ನಡುವಿನ ಅಂತರದ ಬಗ್ಗೆ ಮಾತನಾಡಿದ್ದಾರೆ.
ಐಪಿಎಲ್ ಮತ್ತು ಪಿಎಸ್ ಎಲ್ ಎರಡರಲ್ಲೂ ಕೆಲಸ ಮಾಡಿರುವ ಅನುಭವವಿರುವ ವಾಸೀಂ ಅಕ್ರಮ್, ಭಾರತದ ಕೂಟಕ್ಕಿಂತ ಪಾಕಿಸ್ಥಾನದ ಲೀಗ್ ನಲ್ಲಿ ಉತ್ತಮ ಬೌಲರ್ ಗಳಿದ್ದಾರೆ ಎಂದಿದ್ದಾರೆ.
ನಾನು ಐದು ವರ್ಷಗಳ ಕಾಲ ಪಿಎಸ್ ಎಲ್ ನ ಭಾಗವಾಗಿದ್ದೇನೆ. ಈ ಸಮಯದಲ್ಲಿ ಹಲವಾರು ವಿದೇಶಿ ಆಟಗಾರರ ಜೊತೆಗೆ ಕೆಲಸ ಮಾಡಿದ್ದೇನೆ. ಈ ಸಮಯದಲ್ಲಿ ಎರಡು ಲೀಗ್ ಗಳ ನಡುವಿನ ವ್ಯತ್ಯಾಸದ ಬಗ್ಗೆ ಕೇಳಿದ್ದೇನೆ. ಆಗ ಅವರು ಪಿಎಸ್ ಎಲ್ ನಲ್ಲಿ ಬೌಲಿಂಗ್ ನ ಗುಣಮುಟ್ಟ ಉತ್ತಮವಾಗಿರುತ್ತದೆ ಎಂದಿದ್ದಾರೆ ಎಂದು ಅಕ್ರಮ್ ಹೇಳಿಕೊಂಡಿದ್ದಾರೆ.
ಪಾಕ್ ಮಾಜಿ ಆಟಗಾರ ಬಾಸಿತ್ ಅಲಿ ಜೊತೆಗಿನ ಯೂಟ್ಯೂಬ್ ಸಂಭಾಷಣೆಯಲ್ಲಿ ವಾಸೀಂ ಅಕ್ರಮ್ ಈ ಮಾತುಗಳನ್ನು ಆಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
Bhuvanam gaganam Teaser: ಭುವನಂ ಗಗನಂ ಟೀಸರ್ ಬಂತು