ವಾಸಿಂ ಜಾಫರ್ ಮುಂಬೈ ತಂಡದಲ್ಲಿ ಆರಂಭಿಕರಾಗಿ ರೋಹಿತ್, ಗಾವಸ್ಕರ್
Team Udayavani, Apr 11, 2020, 6:55 PM IST
ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ, ರಣಜಿ ಕ್ರಿಕೆಟ್ ನ ಲೆಜೆಂಡ್ ವಾಸಿಂ ಜಾಫರ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸಕ್ರಿಯರಾಗಿದ್ದಾರೆ. ಸದ್ಯ ಲಾಕ್ ಡೌನ್ ಕಾರಣ ಮನೆಯಲ್ಲಿರುವ ಜಾಫರ್ ತನ್ನ ಕನಸಿನ ಮುಂಬೈ ತಂಡವನ್ನು ಪ್ರಕಟಿಸಿದ್ದಾರೆ.
ಮುಂಬೈ ಪರ ರಣಜಿ ಕ್ರಿಕೆಟ್ ನಲ್ಲಿ ಸಾಕಷ್ಟು ಸಾಧನೆ ಮಾಡಿರುವ ವಾಸಿಂ ಜಾಫರ್, 1970ರ ನಂತರದ ಮುಂಬೈ ಆಟಗಾರರನ್ನು ಸೇರಿಸಿ ಒಂದು ತಂಡವನ್ನು ಪ್ರಕಟಿಸಿದ್ದು ರೋಹಿತ್ ಶರ್ಮಾ ಮತ್ತು ಸುನೀಲ್ ಗಾವಸ್ಕರ್ ಆರಂಭಿಕರಾಗಿದ್ದಾರೆ.
ಸುನೀಲ್ ಗಾವಸ್ಕರ್ ನಾಯಕನಾಗಿದ್ದು, ಸಿ. ಪಂಡಿತ್ ವಿಕೆಟ್ ಕೀಪರ್ ಆಗಿದ್ಧಾರೆ. ಉಳಿದಂತೆ ಸಚಿನ್ ತಂಡೂಲ್ಕರ್, ವಿನೋದ್ ಕಾಂಬ್ಳಿ ಸ್ಥಾನ ಪಡೆದಿದ್ದಾರೆ.
ಜಾಫರ್ ಟೀಂ: ಸುನೀಲ್ ಗಾವಸ್ಕರ್, ರೋಹಿತ್ ಶರ್ಮಾ, ದಿಲೀಪ್ ವೆಂಗ್ ಸರ್ಕಾರ್, ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ, ಸಿ ಪಂಡಿತ್, ಸಾಯಿರಾಜ್ ಬಹುತಳೆ/ ರಮೇಶ್ ಪೊವಾರ್, ಅಜಿತ್ ಅಗರ್ಕರ್ / ಅಬ್ದುಲ್ ಇಸ್ಮಾಯಿಲ್, ಜಹೀರ್ ಖಾನ್, ಎ ಕುರುವಿಲ್ಲ, ಪಿ. ಶಿವಾಲ್ಕರ್.