ಮುಂದಿನ ಪಂದ್ಯ ಗೆಲ್ಲಲು ಹೀಗೆ ಮಾಡು! ಅಜಿಂಕ್ಯ ರಹಾನೆಗೆ ಜಾಫರ್ ರಹಸ್ಯ ಸಂದೇಶ!
Team Udayavani, Dec 22, 2020, 8:37 AM IST
ಮುಂಬಯಿ: ಆಸ್ಟ್ರೇಲಿಯ ಎದುರಿನ ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಅಜಿಂಕ್ಯ ರಹಾನೆ ಅವರಿಗೆ ಮಾಜಿ ಆರಂಭಕಾರ ವಾಸಿಮ್ ಜಾಫರ್ ರಹಸ್ಯ ಸಂದೇಶವೊಂದನ್ನು ರವಾನಿಸಿದ್ದಾರೆ.
ಇದು ಇಂಗ್ಲಿಷ್ನ 16 ಶಬ್ದಗಳನ್ನು ಒಳಗೊಂಡಿದ್ದು, ಇವನ್ನು ಒಂದರ ಕೆಳಗೊಂದರಂತೆ ಬರೆದಿದ್ದಾರೆ. ಇದರ ಮೊದಲ ಅಕ್ಷರಗಳನ್ನೆಲ್ಲ ಒಟ್ಟುಗೂಡಿಸಿದರೆ “ಪಿಕ್ ಗಿಲ್ ಆ್ಯಂಡ್ ರಾಹುಲ್’ ಎಂದಾಗುತ್ತದೆ. ಅರ್ಥಾತ್, ಮುಂದಿನ ಟೆಸ್ಟ್ ಪಂದ್ಯಕ್ಕೆ ಶುಭ್ಮನ್ ಗಿಲ್ ಮತ್ತು ಕೆ.ಎಲ್. ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಿ ಎಂದು ಅವರು ಈಮೂಲಕ ಸೂಚಿಸಿದ್ದಾರೆ.
“ಡಿಯರ್ ಅಜಿಂಕ್ಯ ರಹಾನೆ, ಇಲ್ಲಿ ನಿಮಗಾಗಿ ಒಂದು ಸಂದೇಶವಿದೆ. ಗುಡ್ ಲಕ್ ಫಾರ್ ಬಾಕ್ಸಿಂಗ್ ಡೇ ಟೆಸ್ಟ್’ ಎಂದು ಜಾಫರ್ ಹಾರೈಸಿದ್ದಾರೆ.
ಇದನ್ನೂ ಓದಿ:ಅಬುಧಾಬಿ ಟಿ10 ಕ್ರಿಕೆಟ್ ಕೂಟಕ್ಕೆ ಬಿಗ್ ಹಿಟ್ಟರ್
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಭಾರತೀಯ ನಾಯಕ ವಿರಾಟ್ ಕೊಹ್ಲಿ ಸರಣಿಯ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
ಅಡಿಲೇಡ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಎಂಟು ವಿಕೆಟ್ ಅಂತರದ ಸೋಲನುಭವಿಸಿತ್ತು.