ವೇಟ್ಲಿಫ್ಟಿಂಗ್: ಭಾರತಕ್ಕೆ 8ನೇ ಸ್ಥಾನ
Team Udayavani, Aug 26, 2018, 3:51 PM IST
ಜಕಾರ್ತಾ : ಭಾರತದ ಲಿಫ್ಟರ್ ಏಶ್ಯಾಡ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಶನಿವಾರ ನಡೆದ ಪುರುಷರ 94 ಕೆಜಿ ವಿಭಾಗದ ಫೈನಲ್ನಲ್ಲಿ ವಿಕಾಸ್ ಒಟ್ಟು 335ಕೆಜಿ ತೂಕ ಎತ್ತುವ ಮೂಲಕ 8ನೇ ಸ್ಥಾನಕ್ಕೆ ಇಳಿದರು. ಎರಡು ವಿಫಲ ಯತ್ನಗಳ ಬಳಿಕ ಸ್ನ್ಯಾಚ್ನಲ್ಲಿ ಅವರು 145 ಕೆಜಿ ತೂಕ ಎತ್ತುವಲ್ಲಿ ಯಶಸ್ವಿಯಾದರು. ಕ್ಲಿನ್ ಮತ್ತು ಜರ್ಕ್ ವಿಭಾಗದಲ್ಲಿ ಒಟ್ಟು 190 ಕೆಜಿ ತೂಕ ಎತ್ತಿದ ವಿಕಾಸ್ 197ಕೆಜಿ ತೂಕ ಎತ್ತುವಲ್ಲಿ ಸಫಲರಾಗಲಿಲ್ಲ. ವಿಕಾಸ್ ಠಾಕೂರ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ 351 ಕೆಜಿ ತೂಕ ಎತ್ತಿ ಕಂಚಿನ ಪದಕ ಗೆದ್ದಿದ್ದರು.
ಒಲಿಂಪಿಕ್ ಚಾಂಪಿಯನ್ ಇರಾನ್ನ ಶೋರಬ್ ಮೊರಾಡಿ ಒಟ್ಟು 410 ಕೆಜಿ ತೂಕ ಎತ್ತುವ ಮೂಲಕ ಗೇಮ್ಸ್ ದಾಖಲೆ ನಿರ್ಮಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡರೆ ಕತಾರ್ನ ಇಲಾºಕ್ ಫಾರೆಸ್ 381 ಕೆಜಿ ತೂಕ ಎತ್ತಿ ಬೆಳ್ಳಿ ಪದಕ ಪಡೆದರು. ಥಾçಲೆಂಡ್ನ ಸುಂಪ್ರಾದಿತ್ ಸಾರತ್ 380 ಕೆಜಿ ತೂಕ ಎತ್ತಿ ಕಂಚಿನ ಪದಕ ಗೆದ್ದರು.