Udayavni Special

ನ್ಯೂಜಿಲ್ಯಾಂಡ್‌ ಹಿಡಿತದಲ್ಲಿ ವೆಲ್ಲಿಂಗ್ಟನ್‌ ಟೆಸ್ಟ್‌

ದ್ವಿತೀಯ ಇನ್ನಿಂಗ್ಸ್‌ನಲ್ಲೂ ಭಾರತದ ಅಗ್ರ ಕ್ರಮಾಂಕ ವೈಫ‌ಲ್ಯ

Team Udayavani, Feb 24, 2020, 6:54 AM IST

wellington-test

ವೆಲ್ಲಿಂಗ್ಟನ್‌: ಪ್ರವಾಸಿ ಭಾರತ ತಂಡದೆದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಸುಭದ್ರ ಸ್ಥಿತಿಯಲ್ಲಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ದಾಖಲಿಸಿದ ಆತಿಥೇಯ ತಂಡ ಗೆಲ್ಲುವುದು ಖಚಿತವಾಗಿದೆ.

ಬೌಲರ್‌ಗಳ ಅಮೋಘ ಬ್ಯಾಟಿಂಗ್‌ನಿಂದಾಗಿ ನ್ಯೂಜಿಲ್ಯಾಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 348 ರನ್‌ ಗಳಿಸಿ ಆಲೌಟಾಯಿತು. ಈ ಮೂಲಕ ಆತಿಥೇಯ ತಂಡ 183 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯಿತು. ಇದಕ್ಕುತ್ತರವಾಗಿ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಭಾರತ ಮತ್ತೆ ಬ್ಯಾಟಿಂಗ್‌ನಲ್ಲಿ ಎಡವಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 144 ರನ್‌ ಗಳಿಸಿದೆ. ಮುನ್ನಡೆ ಸಾಧಿಸಲು ಭಾರತ ಇನ್ನೂ 39 ರನ್‌ ಗಳಿಸಬೇಕಾಗಿದೆ. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು, ಭಾರತ ನಾಲ್ಕನೇ ದಿನವಿಡೀ ಆಡಿ ದೊಡ್ಡ ಮೊತ್ತ ಪೇರಿಸಿದರೆ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲು ಪ್ರಯತ್ನಿಸಬಹುದು.

ಮತ್ತೆ ಎಡವಿದ ಭಾರತ
ಮೊದಲ ಇನ್ನಿಂಗ್ಸ್‌ನಲ್ಲಿ ಸಂಪೂರ್ಣ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದ ಭಾರತೀಯ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಮತ್ತೆ ಕುಸಿತಕ್ಕೆ ಒಳಗಾಗಿದೆ. ಅಗ್ರ ಕ್ರಮಾಂಕದ ಆಟಗಾರರು ಟ್ರೆಂಟ್‌ ಬೌಲ್ಟ್ ಅವರ ಉನ್ನತ ಗುಣಮಟ್ಟದ ಸ್ವಿಂಗ್‌ ದಾಳಿಯನ್ನು ನಿಭಾಯಿಸಲು ವಿಫ‌ಲ ರಾಗಿದ್ದಾರೆ. ರನ್‌ ಗಳಿಸದಿದ್ದರೂ ಬಹಳಷ್ಟು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಅಗ್ರ ಕ್ರಮಾಂಕದ ಆಟಗಾರರು ಯಶಸ್ವಿಯಾಗಿದ್ದಾರೆ.

ಮಾಯಾಂಕ್‌ ಅಗರ್ವಾಲ್‌ ಅವರನ್ನು ಬಿಟ್ಟರೆ ಪೃಥ್ವಿ ಶಾ, ಚೇತೇಶ್ವರ ಪೂಜಾರ ಮತ್ತು ಕೊಹ್ಲಿ ರನ್‌ ಗಳಿಸಲು ಬಹಳಷ್ಟು ಒದ್ದಾಡಿದರು. ಪೂಜಾರ 11 ರನ್‌ ತೆಗೆಯಲು 81 ಎಸೆತ ಎದುರಿಸಿದ್ದರೆ, ಕೊಹ್ಲಿ 43 ಎಸೆತಗಳಿಂದ 19 ರನ್‌ ಹೊಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 34 ರನ್‌ ಗಳಿಸಿದ್ದ ಅಗರ್ವಾಲ್‌ ಮತ್ತೆ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ 58 ರನ್‌ ಹೊಡೆದರು.

ರಹಾನೆ-ವಿಹಾರಿ ಆಸರೆ
ಮೂರನೇ ದಿನದ ಅಂತಿಮ ಅವಧಿಯಲ್ಲಿ ಆಡಿದ ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ಅವರು ಮುರಿಯದ ಐದನೇ ವಿಕೆಟಿಗೆ ಈಗಾಗಲೇ 31 ರನ್‌ ಪೇರಿಸಿದ್ದಾರೆ. ಇವರಿಬ್ಬರು ನಾಲ್ಕನೇ ದಿನ ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದರೆ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಒಳ್ಳೆಯ ಮೊತ್ತ ಪೇರಿಸಬಹುದು. ರಹಾನೆ 25 ಮತ್ತು ವಿಹಾರಿ 15 ರನ್ನುಗಳಿಂದ ನಾಲ್ಕನೇ ದಿನ ಆಟ ಮುಂದುವರಿಸಲಿದ್ದಾರೆ.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಟೆಸ್ಟ್‌ ಸರಣಿಯಲ್ಲಿ ಆಡಲಿಳಿದ ಬೌಲ್ಟ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಮೇಲೆ ಎರಗಿ ಈಗಾಗಲೇ ಮೂರು ವಿಕೆಟ್‌ ಉರುಳಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿ ಮಿಂಚಿದ ಜಾಮೀಸನ್‌
ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಉರುಳಿಸಿದ್ದ ಕೈಲ್‌ ಜಾಮೀಸನ್‌ ಬ್ಯಾಟಿಂಗ್‌ನಲ್ಲೂ ಗಮನಾರ್ಹ ನಿರ್ವಹಣೆ ನೀಡಿದ್ದಾರೆ. ಅವರ ಸಹಿತ ಗ್ರ್ಯಾಂಡ್‌ಹೋಮ್‌, ಬೌಲ್ಟ್ ಅವರ ಬಿರುಸಿನ ಆಟದಿಂದಾಗಿ ನ್ಯೂಜಿಲ್ಯಾಂಡ್‌ 348 ರನ್‌ ಪೇರಿಸಿ ಆಲೌಟಾಯಿತು. ಈ ಮೂಲಕ 183 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ದಾಖಲಿಸಿತು. ಮಿಂಚಿನ ಬ್ಯಾಟಿಂಗ್‌ ಪ್ರದರ್ಶಿಸಿದ ಜಾಮೀಸನ್‌ 45 ಎಸೆತಗಳಿಂದ 4 ಸಿಕ್ಸರ್‌ ಮತ್ತು 1 ಬೌಂಡರಿ ನೆರವಿನಿಂದ 44 ರನ್‌ ಗಳಿಸಿದ್ದರು.

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌ 165
ನ್ಯೂಜಿಲ್ಯಾಂಡ್‌ ಪ್ರಥಮ ಇನ್ನಿಂಗ್ಸ್‌
(ನಿನ್ನೆ 5 ವಿಕೆಟಿಗೆ 216)
ಬ್ರಾಡ್ಲಿ ವಾಟಿÉಂಗ್‌ ಸಿ ಪಂತ್‌ ಬಿ ಬುಮ್ರಾ 14
ಗ್ರ್ಯಾಂಡ್‌ಹೋಮ್‌ ಸಿ ಪಂತ್‌ ಬಿ ಅಶ್ವಿ‌ನ್‌ 43
ಟಿಮ್‌ ಸೌಥಿ ಸಿ ಶಮಿ ಬಿ ಇಶಾಂತ್‌ 6
ಕೈಲ್‌ ಜಾಮೀಸನ್‌ ಸಿ ವಿಹಾರಿ ಬಿ ಅಶ್ವಿ‌ನ್‌ 44
ಅಜಾಜ್‌ ಪಟೇಲ್‌ ಔಟಾಗದೆ 4
ಟ್ರೆಂಟ್‌ ಬೌಲ್ಟ್ ಸಿ ಪಂತ್‌ ಬಿ ಇಶಾಂತ್‌ 38
ಇತರ 8
ಒಟ್ಟು (ಆಲೌಟ್‌) 348
ವಿಕೆಟ್‌ ಪತನ: 6-216, 7-225, 8-296, 9-310.
ಬೌಲಿಂಗ್‌: ಜಸ್‌ಪ್ರೀತ್‌ ಬುಮ್ರಾ 26-5-88-1
ಇಶಾಂತ್‌ ಶರ್ಮ 22.2-6-68-5
ಮೊಹಮ್ಮದ್‌ ಶಮಿ 23-2-91-1
ಆರ್‌. ಅಶ್ವಿ‌ನ್‌ 29-1-99-3
ಭಾರತ ದ್ವಿತೀಯ ಇನ್ನಿಂಗ್ಸ್‌
ಪೃಥ್ವಿ ಶಾ ಸಿ ಲಾಥಂ ಬಿ ಬೌಲ್ಟ್ 14
ಅಗರ್ವಾಲ್‌ ಸಿ ವಾಟಿÉಂಗ್‌ ಬಿ ಸೌಥಿ 58
ಚೇತೇಶ್ವರ್‌ ಪೂಜಾರ ಬಿ ಬೌಲ್ಟ್ 11
ವಿರಾಟ್‌ ಕೊಹ್ಲಿ ಸಿ ವಾಟಿÉಂಗ್‌ ಬಿ ಬೌಲ್ಟ್ 19
ಅಜಿಂಕ್ಯ ರಹಾನೆ ಬ್ಯಾಟಿಂಗ್‌ 25
ಹನುಮ ವಿಹಾರಿ ಬ್ಯಾಟಿಂಗ್‌ 15
ಇತರ 2
ಒಟ್ಟು (4 ವಿಕೆಟಿಗೆ) 144
ವಿಕೆಟ್‌ ಪತನ: 1-27, 2-78, 3-96, 4-113.
ಬೌಲಿಂಗ್‌: ಟಿಮ್‌ ಸೌಥಿ 15-5-41-1
ಟ್ರೆಂಟ್‌ ಬೌಲ್ಟ್ 16-6-27-3
ಗ್ರ್ಯಾಂಡ್‌ಹೋಮ್‌ 14-5-25-0
ಕೈಲ್‌ ಜಾಮೀಸನ್‌ 17-7-33-0
ಅಜಾಜ್‌ ಪಟೇಲ್‌ 3-0-18-0

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಚಿವರ ಸಭೆಯಲ್ಲಿ ಅನರ್ಹ ಶಾಸಕ: ರಾಮುಲು ಜೊತೆ ವೇದಿಕೆಯಲ್ಲಿ ಪ್ರತಾಪ್ ಗೌಡ ಪಾಟೀಲ್

ಸಚಿವರ ಸಭೆಯಲ್ಲಿ ಅನರ್ಹ ಶಾಸಕ: ರಾಮುಲು ಜೊತೆ ವೇದಿಕೆಯಲ್ಲಿ ಪ್ರತಾಪ್ ಗೌಡ ಪಾಟೀಲ್

ಅಮೆರಿಕ ಕೋವಿಡ್-19 ಸಮರ: ಮಾವನಿಗೆ ಅಳಿಯನ ಸಾಥ್‌

ಅಮೆರಿಕ ಕೋವಿಡ್-19 ಸಮರ: ಮಾವನಿಗೆ ಅಳಿಯನ ಸಾಥ್‌

1720 To 2020! ಪ್ರತಿ 100 ವರ್ಷಕ್ಕೊಮ್ಮೆ ಮನುಷ್ಯ ಜನಾಂಗಕ್ಕೆ ಭೀತಿ ಹುಟ್ಟಿಸೋ ಮಹಾಮಾರಿ

1720 To 2020! ಪ್ರತಿ 100 ವರ್ಷಕ್ಕೊಮ್ಮೆ ಮನುಷ್ಯ ಜನಾಂಗಕ್ಕೆ ಭೀತಿ ಹುಟ್ಟಿಸೋ ಮಹಾಮಾರಿ

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

ಸ್ವತಃ ಮಾಸ್ಕ್ ಧರಿಸದೆ ಜನರಿಗೆ ಮಾಸ್ಕ್ ವಿತರಿಸಿದ ಸಚಿವ ಶ್ರೀರಾಮುಲು

ಸ್ವತಃ ಮಾಸ್ಕ್ ಧರಿಸದೆ ಜನರಿಗೆ ಮಾಸ್ಕ್ ವಿತರಿಸಿದ ಸಚಿವ ಶ್ರೀರಾಮುಲು

ಸ್ಮಾರ್ಟ್‌ಫೋನ್‌ ಭವಿಷ್ಯ ಸ್ಮಾರ್ಟಾಗಿಲ್ಲ

ಸ್ಮಾರ್ಟ್‌ಫೋನ್‌ ಭವಿಷ್ಯ ಸ್ಮಾರ್ಟಾಗಿಲ್ಲ; 2 ಬಿ. ಡಾಲರ್‌ ನಷ್ಟದ ಭಯ

ಕೋವಿಡ್ ಆತಂಕದ ನಡುವೆ ಗಡಿಯಲ್ಲಿ ಒಳನುಸುಳಲು ಯತ್ನಿಸಿದ 9 ಉಗ್ರರ ಹತ್ಯೆಗೈದ ಸೇನಾಪಡೆ

ಕೋವಿಡ್ ಆತಂಕದ ನಡುವೆ ಗಡಿಯಲ್ಲಿ ಒಳನುಸುಳಲು ಯತ್ನಿಸಿದ 9 ಉಗ್ರರ ಹತ್ಯೆಗೈದ ಸೇನಾಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

‘ಆತ ಮೊದಲು ತಂಡಕ್ಕೆ ಬಂದಾಗ ಇಂಝಮಾಮ್ ಹಕ್ ನೆನಪಾಗಿತ್ತು’ ಟೀಂ ಇಂಡಿಯಾ ಸ್ಟಾರ್ ಬಗ್ಗೆ ಯುವಿ

‘ಆತ ಮೊದಲು ತಂಡಕ್ಕೆ ಬಂದಾಗ ಇಂಝಮಾಮ್ ಹಕ್ ನೆನಪಾಗಿತ್ತು’ ಟೀಂ ಇಂಡಿಯಾ ಸ್ಟಾರ್ ಬಗ್ಗೆ ಯುವಿ

ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಭಾರತ-ಪಾಕಿಸ್ಥಾನ ನಡುವಣ ರೋಚಕ ಪಂದ್ಯಗಳ ಪ್ರಸಾರ

ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಭಾರತ-ಪಾಕಿಸ್ಥಾನ ನಡುವಣ ರೋಚಕ ಪಂದ್ಯಗಳ ಪ್ರಸಾರ

ಮತ್ತೆ ತಂದೆಯಾಗಲಿರುವ 89ರ ಹರೆಯದ ಬೆರ್ನಿ ಎಕ್ಲೆಸ್ಟೋನ್‌

ಮತ್ತೆ ತಂದೆಯಾಗಲಿರುವ 89ರ ಹರೆಯದ ಬೆರ್ನಿ ಎಕ್ಲೆಸ್ಟೋನ್‌

ವೃದ್ಧನಿಗೆ ಊಟ ಕೊಟ್ಟ ಪೊಲೀಸರು

ವೃದ್ಧನಿಗೆ ಊಟ ಕೊಟ್ಟ ಪೊಲೀಸರು

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಸಚಿವರ ಸಭೆಯಲ್ಲಿ ಅನರ್ಹ ಶಾಸಕ: ರಾಮುಲು ಜೊತೆ ವೇದಿಕೆಯಲ್ಲಿ ಪ್ರತಾಪ್ ಗೌಡ ಪಾಟೀಲ್

ಸಚಿವರ ಸಭೆಯಲ್ಲಿ ಅನರ್ಹ ಶಾಸಕ: ರಾಮುಲು ಜೊತೆ ವೇದಿಕೆಯಲ್ಲಿ ಪ್ರತಾಪ್ ಗೌಡ ಪಾಟೀಲ್

ಪೊಲೀಸರಿಗೆ ಕಲ್ಲೇಟು: ಮತ್ತೆ 10 ಮಂದಿ ಸೆರೆ

ಪೊಲೀಸರಿಗೆ ಕಲ್ಲೇಟು: ಮತ್ತೆ 10 ಮಂದಿ ಸೆರೆ

ಕಾಯಕ ನಿಷ್ಠೆ ಮೆರೆಯುತ್ತಿರುವ ವೈದ್ಯರು, ದಾದಿಯರು

ಕಾಯಕ ನಿಷ್ಠೆ ಮೆರೆಯುತ್ತಿರುವ ವೈದ್ಯರು, ದಾದಿಯರು

ಕಾಲುಜಾರಿ ಕಾಲುವೆಗೆ ಬಿದ್ದು ಮಹಿಳೆ ಸಾವು

ಕಾಲುಜಾರಿ ಕಾಲುವೆಗೆ ಬಿದ್ದು ಮಹಿಳೆ ಸಾವು

ಮಾಸ್ಕ್ ವಿತರಣೆಗೆ ಚಾಲನೆ

ಮಾಸ್ಕ್ ವಿತರಣೆಗೆ ಚಾಲನೆ