ಚೆಂಡು ವಿರೂಪ: ವಿಂಡೀಸ್‌ ಕ್ರಿಕೆಟಿಗ ಪೂರಣ್‌ಗೆ 4 ಪಂದ್ಯ ನಿಷೇಧ

Team Udayavani, Nov 13, 2019, 11:55 PM IST

ಲಕ್ನೋ: ಚೆಂಡನ್ನು ವಿರೂಪಗೊಳಿಸಲು ಪ್ರಯತ್ನಿಸಿದ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗ ನಿಕೋಲಸ್‌ ಪೂರಣ್‌ ಅವರಿಗೆ ಐಸಿಸಿ 4 ಪಂದ್ಯಗಳ ನಿಷೇಧ ವಿಧಿಸಿದೆ.
ಸೋಮವಾರ ಅಫ್ಘಾನಿಸ್ಥಾನ-ವೆಸ್ಟ್‌ ಇಂಡೀಸ್‌ ನಡುವೆ ಲಕ್ನೋದಲ್ಲಿ ನಡೆದ 3ನೇ ಟಿ20 ಪಂದ್ಯದ ವೇಳೆ ಪೂರಣ್‌ ಚೆಂಡು ವಿರೂಪಗೊಳಿಸಲು ಯತ್ನಿಸಿದ್ದರು ಎನ್ನಲಾಗಿದೆ. ಇದು ಟೀವಿ ದೃಶ್ಯಾವಳಿಯಲ್ಲಿ ದಾಖಲಾಗಿತ್ತು.

ಐಸಿಸಿ ಇದನ್ನೇ ಸಾಕ್ಷಿಯನ್ನಾಗಿ ಪರಿಗಣಿಸಿದೆ. ಪಂದ್ಯದ ರೆಫ್ರಿ ಕ್ರಿಸ್‌ ಬ್ರಾಡ್‌ ಎದುರು ವಿಚಾರಣೆಗೆ ಹಾಜರಾದ ಪೂರಣ್‌ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ತಿಳಿಸಿದೆ.

ನಿಷೇಧದಿಂದಾಗಿ ಅಫ್ಘಾನಿಸ್ಥಾನ ವಿರುದ್ಧ ಲಕ್ನೋದಲ್ಲಿ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಯಿಂದ ಪೂರಣ್‌ ಹೊರಗುಳಿಯಲಿದ್ದಾರೆ. ಬಳಿಕ ಭಾರತ ವಿರುದ್ಧ ಆಡಲಾಗುವ ಮೊದಲ ಟಿ20 ಪಂದ್ಯವನ್ನೂ ತಪ್ಪಿಸಿಕೊಳ್ಳಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ