ಏಕೈಕ ಟಿ20: ಆತಿಥೇಯ ಇಂಗ್ಲೆಂಡ್ ಮಣಿಸಿದ ವಿಂಡೀಸ್
Team Udayavani, Sep 18, 2017, 6:15 AM IST
ಚೆಸ್ಟರ್ ಲಿ ಸ್ಟ್ರೀಟ್(ಇಂಗ್ಲೆಂಡ್): ಸಂಘಟಿತ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ತಂಡ ಏಕೈಕ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ 21 ರನ್ಗಳಿಂದ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 176 ರನ್ ಬಾರಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 19.3 ಓವರ್ಗಳಲ್ಲಿ 155 ರನ್ ಬಾರಿಸಿ ಆಲೌಟ್ ಆಯಿತು.
ವೆಸ್ಟ್ ಇಂಡೀಸ್ ಪರ ಎವಿನ್ ಲೇವಿಸ್ 28 ಎಸೆತದಲ್ಲಿ 51 ರನ್ ಬಾರಿಸಿದರು. ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ 21 ಎಸೆತದಲ್ಲಿ 3 ಬೌಂಡರಿ, 4 ಸಿಕ್ಸರ್ ಸೇರಿದಂತೆ 40 ರನ್ ಬಾರಿಸಿ ಔಟ್ ಆದರು. ಇವರಿಬ್ಬರು ಮೊದಲ ವಿಕೆಟಿಗೆ 6.3 ಓವರ್ಗಳಲ್ಲಿ 77 ರನ್ ಪೇರಿಸಿದ್ದರಿಂದ ವಿಂಡೀಸ್ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಯಿತು.
ಗುರಿ ಬೆನ್ನುಹತ್ತಿದ ಇಂಗ್ಲೆಂಡ್ ತಂಡದ ಪರ ಅಲೆಕ್ಸ್ ಹೆಲ್ಸ್ 17 ಎಸೆತದಲ್ಲಿ 43 ರನ್ ಮತ್ತು ಜೋಸ್ ಬಟ್ಲರ್ 30 ರನ್ ಬಾರಿಸಿದರು. ಇವರ ಹೋರಾಟ ಗೆಲುವಿಗೆ ಸಾಕಾಗಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ಸೋಲು ಕಾಣುವಂತಾಯಿತು.
ಸಂಕ್ಷಿಪ್ತ ಸ್ಕೋರ್:
ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 9 ವಿಕೆಟಿಗೆ 176 (ಎವಿನ್ ಲೇವಿಸ್ 51, ಗೇಲ್ 40, ರೋಮ್ಯಾನ್ ಪಾವೆಲ್ 28, ರಶೀದ್ 25ಕ್ಕೆ 3, ಲಿಯಮ್ ಪ್ಲಂಕೆಟ್ 27ಕ್ಕೆ 3), ಇಂಗ್ಲೆಂಡ್ 19.3 ಓವರ್ಗಳಲ್ಲಿ 155 (ಅಲೆಕ್ಸ್ ಹೆಲ್ಸ್ 43, ಜೋಸ್ ಬಟ್ಲರ್ 30, ಜಾನಿ ಬೇರ್ಸ್ಟೋ 27, ಕಾರ್ಲೋಸ್ ಬ್ರಾತ್ವೇಟ್ 20ಕ್ಕೆ 3, ಕೆಸ್ರಿಕ್ ವಿಲಿಯಮ್ಸ್ 35ಕ್ಕೆ 3, ಸುನೀಲ್ ನಾರಾಯಣ್ 15ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ