ರೋವ್ಮನ್‌ ಪೊವೆಲ್‌ ಸಿಡಿಲಬ್ಬರದ ಶತಕ: 3ನೇ ಟಿ20 ಪಂದ್ಯ ಗೆದ್ದ ವೆಸ್ಟ್‌ ಇಂಡೀಸ್‌


Team Udayavani, Jan 27, 2022, 7:33 PM IST

ರೋವ್ಮನ್‌ ಪೊವೆಲ್‌ ಸಿಡಿಲಬ್ಬರದ ಶತಕ: 3ನೇ ಟಿ20 ಪಂದ್ಯ ಗೆದ್ದ ವೆಸ್ಟ್‌ ಇಂಡೀಸ್‌

ಬ್ರಿಜ್‌ಟೌನ್‌ (ಬಾರ್ಬಡಾಸ್‌): ರೋವ್ಮನ್‌ ಪೊವೆಲ್‌ ಬಾರಿಸಿದ 51 ಎಸೆತಗಳ ಶತಕ ಪರಾಕ್ರಮದಿಂದ 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ಮೇಲೆ ಸವಾರಿ ಮಾಡಿದ ವೆಸ್ಟ್‌ ಇಂಡೀಸ್‌ 2-1 ಮುನ್ನಡೆ ಸಾಧಿಸಿದೆ.

ಇಲ್ಲಿನ “ಕೆನ್ಸಿಂಗ್ಟನ್‌ ಓವಲ್‌’ನಲ್ಲಿ ನಡೆದ ಬೃಹತ್‌ ಮೊತ್ತದ ಮೇಲಾಟದಲ್ಲಿ ಕೆರಿಬಿಯನ್‌ ಪಡೆ 20 ರನ್ನುಗಳಿಂದ ಗೆದ್ದು ಬಂದಿತು.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ ಪೇರಿಸಿದ ರನ್‌ 5ಕ್ಕೆ 224. ಇದರಲ್ಲಿ ಮಧ್ಯಮ ಕ್ರಮಾಂಕದ ರೋವ್ಮನ್‌ ಪೊವೆಲ್‌ ಪಾಲು 107 ರನ್‌. ನಿಕೋಲಸ್‌ ಪೂರಣ್‌ 70 ರನ್‌ ಹೊಡೆದರು. ದಿಟ್ಟ ರೀತಿಯಲ್ಲೇ ಜವಾಬಿತ್ತ ಇಂಗ್ಲೆಂಡ್‌ 9 ವಿಕೆಟಿಗೆ 204 ರನ್‌ ಗಳಿಸಿತು.

ಮೊದಲ ಟಿ20 ಶತಕ:

4ನೇ ಕ್ರಮಾಂಕದಲ್ಲಿ ಆಡಲಿಳಿದ ರೋವ್ಮನ್‌ ಪೊವೆಲ್‌ 53 ಎಸೆತಗಳಿಂದ 107 ರನ್‌ ಚಚ್ಚಿದರು. ಈ ವಿಸ್ಫೋಟಕ ಬ್ಯಾಟಿಂಗ್‌ ವೇಳೆ ಸಿಡಿದದ್ದು ಬರೋಬ್ಬರಿ 10 ಸಿಕ್ಸರ್‌. ಬೌಂಡರಿ ಕೇವಲ 4. ಅವರ ಚೊಚ್ಚಲ ಟಿ20 ಶತಕ 51 ಎಸೆತಗಳಿಂದ ದಾಖಲಾಯಿತು.

ಪೊವೆಲ್‌ಗೆ ನಿಕೋಲಸ್‌ ಪೂರಣ್‌ ಅಮೋಘ ಬೆಂಬಲವಿತ್ತರು. ಇವರಿಬ್ಬರ 11 ಓವರ್‌ ಜತೆಯಾಟದಲ್ಲಿ 122 ರನ್‌ ಹರಿದು ಬಂತು. ಪೂರಣ್‌ 43 ಎಸೆತಗಳಿಂದ 70 ರನ್‌ ಬಾರಿಸಿದರು. ಇದು 5 ಸಿಕ್ಸರ್‌, 4 ಬೌಂಡರಿಗಳನ್ನೊಳಗೊಂಡಿತ್ತು.

ಇಂಗ್ಲೆಂಡ್‌ ಪರ ಆರಂಭಕಾರ ಟಾಮ್‌ ಬ್ಯಾಂಟನ್‌ 73 ರನ್‌ (39 ಎಸೆತ, 6 ಸಿಕ್ಸರ್‌, 3 ಬೌಂಡರಿ) ಮತ್ತು ಫಿಲಿಪ್‌ ಸಾಲ್ಟ್ 57 ರನ್‌ ಸಿಡಿಸಿದರು (24 ಎಸೆತ, 5 ಸಿಕ್ಸರ್‌, 3 ಬೌಂಡರಿ). ಆದರೆ ಇವರಿಗೆ ತಂಡವನ್ನು ದಡ ಮುಟ್ಟಿಸಲಾಗಲಿಲ್ಲ.

ಈ ಪಂದ್ಯದಲ್ಲಿ ಒಟ್ಟು 228 ರನ್‌ ಹರಿದು ಬಂತು. ಇದು ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಒಟ್ಟುಗೂಡಿದ ಅತ್ಯಧಿಕ ಮೊತ್ತವಾಗಿದೆ.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-5 ವಿಕೆಟಿಗೆ 224 (ರೋವ್ಮನ್‌ 107, ಪೂರಣ್‌ 70, ರಶೀದ್‌ 25ಕ್ಕೆ 1). ಇಂಗ್ಲೆಂಡ್‌-9 ವಿಕೆಟಿಗೆ 204 (ಬ್ಯಾಂಟನ್‌ 73, ಸಾಲ್ಟ್ 57, ಶೆಫ‌ರ್ಡ್‌ 50ಕ್ಕೆ 3). ಪಂದ್ಯಶ್ರೇಷ್ಠ: ರೋವ್ಮನ್‌ ಪೊವೆಲ್‌.

ಟಾಪ್ ನ್ಯೂಸ್

siddaramaih

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಂಟಿಯಾಗುತ್ತಿದ್ದಾರೆಯೇ? ಹೈಕಮಾಂಡ್ ನೀಡಿದ ಸಂದೇಶವೇನು?

gadang-rakkamma

ವಿಕ್ರಾಂತ್‌ ರೋಣ ಹವಾ ಶುರು; ಇಂದು ಗಡಂಗ್‌ ರಕ್ಕಮ್ಮ… ಹಾಡು ರಿಲೀಸ್‌

ಉಜಿರೆ ಎಸ್ ಡಿಎಂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ. ಯಶೋವರ್ಮ ನಿಧನ

ಉಜಿರೆ ಎಸ್ ಡಿಎಂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ.ಯಶೋವರ್ಮ ನಿಧನ

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ: ಮೀನುಗಾರರ ರಕ್ಷಣೆ

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ: ಮೀನುಗಾರರ ರಕ್ಷಣೆ

thumbnail 2

ನೆಲಸಮವಾದ ದೇವಾಲಯಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ: ಸದ್ಗುರು

thumb 1

ಪ್ರಧಾನಿ ಮೋದಿಯೊಂದಿಗೆ ಹಿಂದಿಯಲ್ಲಿ ಮಾತನಾಡಿದ ಜಪಾನಿನ ಮಕ್ಕಳು; ವಿಡಿಯೋ

ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್‌ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರು

ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್‌ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇನ್ನು ಕ್ವಾಲಿಫೈಯರ್‌, ಎಲಿಮಿನೇಟರ್‌ ಕಾತರ

ಇನ್ನು ಕ್ವಾಲಿಫೈಯರ್‌, ಎಲಿಮಿನೇಟರ್‌ ಕಾತರ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

BCCI

ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿ: ಭಾರತ ತಂಡದಲ್ಲಿ ಉಮ್ರಾನ್ ಮಲಿಕ್

ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್

ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

Watch: ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ; ಜಪಾನ್ ಮಕ್ಕಳ ಹಿಂದಿ ಸಂಭಾಷಣೆಯ ವಿಡಿಯೋ ವೈರಲ್

Watch: ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ; ಜಪಾನ್ ಮಕ್ಕಳ ಹಿಂದಿ ಸಂಭಾಷಣೆಯ ವಿಡಿಯೋ ವೈರಲ್

tree

ಹೆದ್ದಾರಿ ಅಭಿವೃದ್ಧಿ: ಮರಗಳ ತೆರವಿಗೆ ಕ್ಷಣಗಣನೆ

3

ಮನೆ ಮನೆಗಳಲ್ಲಿ ಕುಂಬಾರಿಕೆಗೆ ಹೆಜ್ಜೆ

siddaramaih

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಂಟಿಯಾಗುತ್ತಿದ್ದಾರೆಯೇ? ಹೈಕಮಾಂಡ್ ನೀಡಿದ ಸಂದೇಶವೇನು?

narega

ಕಡಬ: 2ನೇ ಬಾರಿ ಜಿಲ್ಲೆಯಲ್ಲೇ ಗುರಿ ಮೀರಿದ ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.