ನೀವಿಲ್ಲದೇ ನಮಗೇನಿದೆ.. ? ಧೋನಿ ಬಗ್ಗೆ ಚಾಹಲ್ ಹೇಳಿದ್ದೇನು ?

ಧೋನಿ ಇಲ್ಲದೆ ಚಾಹಲ್, ಕುಲದೀಪ್ ಗೆ ಆಡಲು ಸಾದ್ಯವಿಲ್ಲವಂತೆ

Team Udayavani, May 21, 2019, 3:52 PM IST

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಶ್ವ ಶ್ರೇಷ್ಠ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಎಂತಹ ಚಾಣಾಕ್ಷ ಆಟಗಾರ ಎಂದು ಎಲ್ಲರಿಗೂ ಗೊತ್ತು. ವಿಕೆಟ್ ಹಿಂದರೆ ನಿಂತರೆ ಬೌಲರ್ ಗಳಿಗೆ ಯಾವ ಲೈನ್ ಲೆಂಥ್ ನಲ್ಲಿ ಬಾಲ್ ಹಾಕಬೇಕು ಎಂದು ನಿಖರವಾಗಿ ಹೇಳುವಷ್ಟು ಚೆನ್ನಾಗಿ ಪಂದ್ಯವನ್ನು ಅರ್ಥ ಮಾಡಿಕೊಳ್ಳುತ್ತಾರೆ ಮಾಹೀ.

ಭಾರತದ ಅಗ್ರ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಧೋನಿ ಬಗ್ಗೆ ಮಾತನಾಡಿದ್ದು, ಏನೇ ಆಗಲಿ ಬೌಲಿಂಗ್ ಮಾಡುವಾಗ ನನಗೆ ಮತ್ತು ಕುಲದೀಪ್ ಯಾದವ್ ಗೆ ಧೋನಿ ಮಾರ್ಗದರ್ಶನ ಅಗತ್ಯವಾಗಿ ಬೇಕು. ಅವರು ಪಂದ್ಯವನ್ನು ಅರಿಯುವ ಸಾಮರ್ಥ್ಯ, ಅದರಿಂದ ನಮಗೆ ನೀಡುವ ಸಲಹೆಗಳು ನಮಗೆ ಯಾವತ್ತೂ ಕೈಕೊಡುವುದಿಲ್ಲ ಎಂದು ಧೋನಿ ಗುಣಗಾನ ಮಾಡಿದರು.

ನಮ್ಮ ಯೋಜನೆಗಳು ಕೈ ಕೊಟ್ಟಾಗ ಯಾವತ್ತೂ ನಮಗೆ ಧೋನಿ ಭಾಯ್ ಸಲಹೆ ನೀಡುತ್ತಾರೆ. ನಾನು ತಂಡಕ್ಕೆ ಮೊದಲು ಬಂದಾಗಲೂ ಹೀಗೆ ಮಾಡುತ್ತಿದ್ದರು. ಈಗಲೂ ಹಾಗೆಯೇ ಸಲಹೆ ನೀಡುತ್ತಾರೆ. ಅದಕ್ಕೆ ಮಾಹೀ ಭಾಯ್ ಯಾವತ್ತೂ ನಮಗೆ ಅಗತ್ಯ ಎಂದರು.

ಯುಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಭಾರತ ತಂಡದ ಪ್ರಮುಖ ಸ್ಪಿನ್ನರ್ ಗಳಾಗಿದ್ದಾರೆ. ಈ ಇಬ್ಬರು ರಿಸ್ಟ್ ಸ್ಪಿನ್ನರ್ಸ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಚಾಹಲ್ 41 ಏಕದಿನ ಪಂದ್ಯಗಳಿಂದ 72 ವಿಕೆಟ್ ಪಡೆದಿದ್ದರೆ, ಕುಲದೀಪ್ 44 ಪಂದ್ಯಗಳಿಂದ 87 ವಿಕೆಟ್ ಪಡೆದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ