ಗಾಯಾಳಾಗಿ ಹೊರಬಿದ್ದವರ‌ ಜಾಗಕ್ಕೆ ಬದಲಿ ಆಟಗಾರ?

Team Udayavani, Jul 18, 2019, 5:57 AM IST

ಲಂಡನ್‌: ಬೌನ್ಸರ್‌ನಿಂದ ತಲೆಗೆ ಗಂಭೀರ ಏಟು ತಿಂದು ಆಸ್ಟ್ರೇಲಿಯ ಕ್ರಿಕೆಟಿಗ ಫಿಲಿಪ್‌ ಹ್ಯೂಸ್‌ ಮೃತಪಟ್ಟದ್ದು ಕ್ರೀಡಾಲೋಕದ ದುರಂತಗಳಲ್ಲೊಂದು.2014ರಲ್ಲಿ ನಡೆದ ಈ ಘಟನೆ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು.ಇಂತಹ ಘಟನೆಗಳು ಕ್ರಿಕೆಟ್‌ನಲ್ಲಿ ಮರುಕಳಿಸಬಾರದು ಎನ್ನುವುದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಉದ್ದೇಶ.

ಹಾಗಾಗಿ, ಇದೇ ಮೊದಲ ಸಲ ಗಾಯಗೊಂಡು ಹೊರ ನಡೆದ ಕ್ರಿಕೆಟಿಗನಿಗೆ ಪರ್ಯಾಯವಾಗಿ ಬದಲಿ ಆಟಗಾರನಿಗೆ ಆಡುವ ಅವಕಾಶ ನೀಡುವ ಬಗ್ಗೆ ಐಸಿಸಿ ಚಿಂತನೆ ನಡೆಸಿದಿದೆ. ಮುಂದಿನ ಆ್ಯಶಸ್‌ ಸರಣಿಯಿಂದ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ. ಆ ಬಳಿಕ ವಿಶ್ವದ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.

ಆಟಗಾರರ ಪ್ರಾಣ ರಕ್ಷಣೆ ಮುಖ್ಯ
ತಲೆಗೆ ಬೌನ್ಸರ್‌ ಏಟು ಬಿದ್ದರೂ ಚಿಕಿತ್ಸೆ ಪಡೆದು ಬಂದು ಬಳಿಕ ಬ್ಯಾಟಿಂಗ್‌ ಮುಂದುವರಿಸುವುದನ್ನು ನೋಡಿದ್ದೇವೆ. ಆದರೆ ಇಂಥ ಸಂದರ್ಭದಲ್ಲಿ ಬದಲಿ ಆಟಗಾರನನ್ನು ಸೇರಿಸಿಕೊಳ್ಳಲು ನಿಯಮಾವಳಿಯಲ್ಲಿ ಅವಕಾಶ ಇಲ್ಲ. ಹೀಗಾಗಿ ತಲೆಗೆ ಚೆಂಡಿನೇಟು ತಿಂದ ಆಟಗಾರ ಮತ್ತೆ ಕ್ರೀಸ್‌ಗೆ ಇಳಿಯುವ ಅನಿವಾರ್ಯತೆ ಎದುರಾಗುವುದುಂಟು.

ಈ ಬಗ್ಗೆ ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಆಟಗಾರರ ಪ್ರಾಣ ರಕ್ಷಣೆಗಾಗಿ ಬದಲಿ ಆಟಗಾರನ ವ್ಯವಸ್ಥೆ ಅನಿವಾರ್ಯ ಎನ್ನುವುದು ಚರ್ಚೆಗೆ ಬಂದಿದೆ. ಹೀಗಾಗಿ ಮಹತ್ವದ ನಿರ್ಣಯ ಹೊರಬಿದ್ದಿದೆ.


ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ