ವಿರಾಟ್ ಕೊಹ್ಲಿ ಉತ್ತರಾಧಿಕಾರಿಯನ್ನು ಘೋಷಿಸಲು ಆರ್ಸಿಬಿ ಯಾಕೆ ವಿಳಂಬ ಮಾಡುತ್ತಿದೆ?
Team Udayavani, Mar 1, 2022, 2:50 PM IST
ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿವೆ. ಮಾರ್ಚ್ 26ರಂದು ಮೊದಲ ಪಂದ್ಯದ ನಡೆಯಲಿದೆ. ತಂಡಗಳು ತಯಾರಿಯಲ್ಲಿ ತೊಡಗಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರ ಇದುವರೆಗೂ ತಮ್ಮ ನಾಯಕನನ್ನು ಹೆಸರಿಸಿಲ್ಲ.
ಸೋಮವಾರ ಪಂಜಾಬ್ ಕಿಂಗ್ಸ್ ಕೂಡಾ ತನ್ನ ನಾಯಕನನ್ನು ನೇಮಿಸಿದೆ. ಕೆ.ಎಲ್.ರಾಹುಲ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ಆಯ್ಕೆ ಮಾಡಿದೆ. ಹೀಗಾಗಿ ನಾಯಕನನ್ನು ಘೋಷಿಸದ ಪಟ್ಟಿಯಲ್ಲಿ ಆರ್ ಸಿಬಿ ಒಂದೇ ಉಳಿದಿದೆ.
2021ರ ಐಪಿಎಲ್ ಬಳಿಕ ವಿರಾಟ್ ಕೊಹ್ಲಿ ಆರ್ ಸಿಬಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಫ್ರಾಂಚೈಸಿ ಹೊಸ ನಾಯಕನ ಹುಡುಕಾಟದಲ್ಲಿದೆ. ಸದ್ಯ ಗ್ಲೆನ್ ಮ್ಯಾಕ್ಸ್ ವೆಲ್, ಫಾಫ್ ಡುಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ನಾಯಕತ್ವದ ರೇಸ್ ನಲ್ಲಿದ್ದಾರೆ.
ಇದನ್ನೂ ಓದಿ:ಐಪಿಎಲ್ ಆರಂಭಕ್ಕೂ ಮೊದಲೇ ಗುಜರಾತ್ ಟೈಟನ್ಸ್ ಗೆ ಶಾಕ್ ನೀಡಿದ ಇಂಗ್ಲೆಂಡ್ ಆಟಗಾರ!
“ಶೀಘ್ರದಲ್ಲೇ ನಾಯಕನ ಹೆಸರು ನಿಮಗೆ ಗೊತ್ತಾಗಲಿದೆ. ಸಂಜಯ್ ಬಂಗಾರ್, ಮೈಕ್ ಹೆಸನ್ ಹಾಗೂ ಮಾಲಕರು ಸಭೆ ನಡೆಸಿದ್ದು, ಶೀಘ್ರದಲ್ಲೇ ಹೆಸರು ಪ್ರಕಟಿಸುತ್ತೇವೆ” ಎಂದು ಆರ್ ಸಿಬಿ ಮೂಲಗಳು ತಿಳಿಸಿವೆ.
ಕಳೆದ ಬಾರಿಯೂ ಆರ್ ಸಿಬಿ ಪರವಾಗಿ ಆಡಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ ತನ್ನ ವಿವಾಹ ಸಮಾರಂಭದ ಕಾರಣದಿಂದ ಗ್ಲೆನ್ ಎಪ್ರಿಲ್ 6ರವರೆಗೆ ಲಭ್ಯವಾಗುವುದಿಲ್ಲ.
ಐಪಿಎಲ್ 2022 ನಾಯಕರು
ಚೆನ್ನೈ ಸೂಪರ್ ಕಿಂಗ್ಸ್ – ಎಂಎಸ್ ಧೋನಿ
ಡೆಲ್ಲಿ ಕ್ಯಾಪಿಟಲ್ಸ್ – ರಿಷಬ್ ಪಂತ್
ಗುಜರಾತ್ ಟೈಟಾನ್ಸ್ – ಹಾರ್ದಿಕ್ ಪಾಂಡ್ಯ
ಕೋಲ್ಕತ್ತಾ ನೈಟ್ ರೈಡರ್ಸ್ – ಶ್ರೇಯಸ್ ಅಯ್ಯರ್
ಲಕ್ನೋ ಸೂಪರ್ ಜೈಂಟ್ಸ್ – ಕೆಎಲ್ ರಾಹುಲ್
ಮುಂಬೈ ಇಂಡಿಯನ್ಸ್ – ರೋಹಿತ್ ಶರ್ಮಾ
ಪಂಜಾಬ್ ಕಿಂಗ್ಸ್ – ಮಯಾಂಕ್ ಅಗರ್ವಾಲ್
ರಾಜಸ್ಥಾನ್ ರಾಯಲ್ಸ್ – ಸಂಜು ಸ್ಯಾಮ್ಸನ್
ಸನ್ರೈಸರ್ಸ್ ಹೈದರಾಬಾದ್ – ಕೇನ್ ವಿಲಿಯಮ್ಸನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ