ವಿಂಬಲ್ಡನ್ ಪಂದ್ಯ ಆಡಿದ 4.5 ತಿಂಗಳ ಗರ್ಭಿಣಿ
Team Udayavani, Jul 6, 2017, 3:45 AM IST
ಲಂಡನ್: ಲಕ್ಸೆಂಬರ್ಗ್ನ 4.5 ತಿಂಗಳ ಗರ್ಭಿಣಿ ಮಾಂಡಿ ಮಿನೆಲ್ಲಾ ಅವರು ವಿಂಬಲ್ಡನ್ ಟೆನಿಸ್ ಕೂಟದ ಮೊದಲ ಸುತ್ತಿನಲ್ಲಿ ಆಡುವ ಮೂಲಕ ಸುದ್ದಿಯಾಗಿದ್ದಾರೆ. ಇಟಲಿಯ ಫ್ರಾನ್ಸಿಸ್ಕಾ ಶಿಯಾವೋನ್ ವಿರುದ್ಧ ನಡೆದ ಮೊದಲ ಸುತ್ತಿನಲ್ಲಿ ಮಿನೆಲ್ಲಾ 1-6, 1-6 ಸೆಟ್ಗಳಿಂದ ಸೋಲನ್ನು ಕಂಡಿದ್ದಾರೆ. 31ರ ಹರೆಯದ ಅವರು ಸೆರೆನಾ ವಿಲಿಯಮ್ಸ್ ಮತ್ತು ವಿಕ್ಟೋರಿಯಾ ಅಜರೆಂಕಾ ಜತೆ ಟೆನಿಸ್ ಅಮ್ಮಂದಿರ ಸಾಲಿಗೆ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ.
ವಿಂಬಲ್ಡನ್ ಈ ಋತುವಿನ ನನ್ನ ಕೊನೆಯ ಕೂಟವಾಗಿದೆ ಎಂದು ಮಿನೆಲ್ಲಾ ಹೇಳಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಸಿಂಗಲ್ಸ್ನಲ್ಲಿ ಸೋತಿರುವ ಮಿನೆಲ್ಲಾ ಅವರು ವನಿತೆಯರ ಡಬಲ್ಸ್ನಲ್ಲಿ ಲಾತ್ವಿಯಾದ ಅನಾಸ್ತಾಸಿಜಾ ಸೆವಾಸ್ಟೋವಾ ಅವರ ಜತೆ ಆಡಲಿದ್ದಾರೆ.