ವಿಂಬಲ್ಡನ್: ಜೊಕೋವಿಕ್ಗೆ ಪ್ರಶಸ್ತಿ
Team Udayavani, Jul 15, 2019, 5:31 AM IST
ಲಂಡನ್: ಎರಡು ಬಾರಿ ಮ್ಯಾಚ್ ಪಾಯಿಂಟ್ ರಕ್ಷಿಸಿದ ನೊವಾಕ್ ಜೊಕೋವಿಕ್ ಅವರು ಸ್ವಿಸ್ನ ತಾರೆ ರೋಜರ್ ಫೆಡರರ್ ಅವರನ್ನು ಐದು ಸೆಟ್ಗಳ ಮ್ಯಾರಥಾನ್ ಸೆಣಸಾಟದಲ್ಲಿ ಕೆಡಹಿ ಐದನೇ ಬಾರಿ ವಿಂಬಲ್ಡನ್ ಟೆನಿಸ್ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ನಾಲ್ಕು ತಾಸು ಮತ್ತು 57 ನಿಮಿಷಗಳ ಸುದೀರ್ಘ ಅವಧಿಯ ಕಾದಾಟದಲ್ಲಿ ಜೊಕೋವಿಕ್ 7-6 (7-5), 1-6, 7-6 (7-4), 4-6, 13-12 (7-3) ಸೆಟ್ಗಳಿಂದ ಜಯಭೇರಿ ಬಾರಿಸಿದರು. ಇದು ಅತ್ಯಂತ ದೀರ್ಘ ಅವಧಿಯ ವಿಂಬಲ್ಡನ್ ಫೈನಲ್ ಪಂದ್ಯವಾಗಿದೆ. ಮಾತ್ರವಲ್ಲದೇ ಫೈನಲ್ ಸೆಟ್ ಅನ್ನು ಮೊದಲ ಬಾರಿ ಟೈಬ್ರೇಕರ್ ಮೂಲಕ ನಿರ್ಧರಿಸಲಾಗಿದೆ.
ಈ ಸೋಲಿನಿಂದ ಫೆಡರರ್ ಅವರಿಗೆ ಪ್ರಶಸ್ತಿ ಗೆದ್ದ ಅತೀ ಹಿರಿಯ ಆಟಗಾರ ಎಂದೆನಿಸಿಕೊಳ್ಳಲು ಸಾಧ್ಯವಾಗಲಿಲ್ಲ.