ಈ ವರ್ಷ ಟೆನಿಸ್ ಡೌಟ್: ಲೂಯಿಸ್
Team Udayavani, Apr 4, 2020, 5:38 AM IST
ಲಂಡನ್: 2020ರ ಇನ್ನುಳಿದ ಟೆನಿಸ್ ಋತುವಿನಲ್ಲಿ ನಡೆಯುವ ಟೆನಿಸ್ ಕೂಟಗಳು ರದ್ದಾಗುವ ಸಾಧ್ಯತೆಯಿದೆ ಎಂದು ವಿಂಬಲ್ಡನ್ ಮುಖ್ಯಸ್ಥ ರಿಚರ್ಡ್ ಲೂಯಿಸ್ ಹೇಳಿದ್ದಾರೆ.
ಕೋವಿಡ್ 19 ದಿಂದಾಗಿ ಜುಲೈ 13ರ ವರೆಗೆ ಮತ್ತು ಇದೀಗ ವಿಂಬಲ್ಡನ್ ಟೆನಿಸ್ ಕೂಟ ರದ್ದಾದ ಹಿನ್ನೆಲೆಯಲ್ಲಿ ಲೂಯಿಸ್ ಈ ಹೇಳಿಕೆ ನೀಡಿದ್ದಾರೆ. ಎರಡನೇ ವಿಶ್ವಯುದ್ಧದ ಬಳಿಕ ಇದೇ ಮೊದಲ ಬಾರಿ ವಿಂಬಲ್ಡನ್ ಕೂಟವನ್ನು ರದ್ದುಮಾಡಲಾಗಿದೆ.
ಕೋವಿಡ್ 19 ಉಂಟುಮಾಡುತ್ತಿರುವ ವ್ಯಾಪಕ ಹಾನಿಯಿಂದಾಗಿ ಈ ವರ್ಷದ ಆವೆ ಮತ್ತು ಹುಲ್ಲುಹಾಸಿನ ಟೆನಿಸ್ ಕೂಟಗಳು ರದ್ದಾಗುವ ಸಾಧ್ಯತೆಯಿದೆ. ಸದ್ಯದ ಸ್ಥಿತಿಯನ್ನು ಗಮನಿಸಿದರೆ ಈ ವರ್ಷ ಯಾವುದೇ ಟೆನಿಸ್ ಆಟ ನಡೆಯುವ ಸಾಧ್ಯತೆಯಿಲ್ಲ ಎಂದವರು ವಿವರಿಸಿದರು.