ದಾಖಲೆಯ ನಿರೀಕ್ಷೆಯಲ್ಲಿ ಸೆರೆನಾ

ವಿಂಬಲ್ಡನ್‌ ಟೆನಿಸ್‌: ಇಂದು ವನಿತಾ ಫೈನಲ್‌

Team Udayavani, Jul 13, 2019, 5:35 AM IST

ಲಂಡನ್‌: ವನಿತಾ ಟೆನಿಸ್‌ನ ಅಗ್ರಮಾನ್ಯ ಆಟಗಾರ್ತಿಯಲ್ಲಿ ಒಬ್ಬರಾದ ಅಮೆರಿಕದ ಸೆರೆನಾ ವಿಲಿಯಮ್ಸ್‌ ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ.

ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಈಗಾಗಲೇ ಏಳು ಬಾರಿ ಪ್ರಶಸ್ತಿ ಗೆದ್ದಿರುವ ಸೆರೆನಾ ಶನಿವಾರ ನಡೆಯುವ ಫೈನಲ್‌ ಹೋರಾಟದಲ್ಲಿ ಸಿಮೋನಾ ಹಾಲೆಪ್‌ ಅವರನ್ನು ಎದುರಿಸಲಿದ್ದಾರೆ. ಮಾರ್ಗರೆಟ್‌ ಕೋರ್ಟ್‌ ಬಳಿಕ 24 ಗ್ರ್ಯಾನ್‌ ಸ್ಲಾಮ್‌ ಕೂಟದ ಪ್ರಶಸ್ತಿ ಗೆದ್ದ ಎರಡನೇ ಆಟಗಾರ್ತಿಯೆಂಬ ಗೌರವ ಪಡೆಯಲು ಸೆರೆನಾ ಹಾತೊರೆಯುತ್ತಿದ್ದಾರೆ. ಒಂದು ವೇಳೆ ಫೈನಲ್‌ ಪಂದ್ಯ ಗೆದ್ದರೆ ಅವರು ಕೋರ್ಟ್‌ ಸಾಧನೆಯನ್ನು ಸಮಗಟ್ಟಲಿದ್ದಾರೆ.

37ರ ಹರೆಯದ ಸೆರೆನಾ ಗ್ರ್ಯಾನ್‌ ಸ್ಲಾಮ್‌ ಕೂಟದ ಫೈನಲ್‌ನಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಹಿರಿಯ ಆಟಗಾರ್ತಿಯಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಬಾಬೊìರಾ ಸ್ಟ್ರೈಕೋವಾ ಅವರನ್ನು ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಫೈನಲಿಗೇರಿದ್ದರು. ಫೈನಲ್‌ನಲ್ಲಿ ಅವರ ಎದುರಾಳಿ ಹಾಲೆಪ್‌ ತನ್ನ ಪಂದ್ಯದಲ್ಲಿ ಉಕ್ರೇನಿನ ಎಲಿನಾ ಸ್ವಿಟೋಲಿನಾ ಅವರನ್ನು ಮಣಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ