Udayavni Special

4ನೇ ಪ್ರಯತ್ನದಲ್ಲಿ ವಿಂಡೀಸ್‌ ವಿಜಯ

ಸರಣಿ ಗೆದ್ದ ಬಳಿಕ ಎಡವಿದ ಭಾರತ 'ಎ' ;ರೋಚಕ ಪಂದ್ಯದಲ್ಲಿ 5 ರನ್‌ ಸೋಲು

Team Udayavani, Jul 21, 2019, 5:06 AM IST

WI

ಕೂಲಿಜ್‌ (ಆ್ಯಂಟಿಗುವಾ): ಪ್ರವಾಸಿ ಭಾರತ ‘ಎ’ ವಿರುದ್ಧದ ಏಕದಿನ ಸರಣಿಯಲ್ಲಿ ವೆಸ್ಟ್‌ ಇಂಡೀಸ್‌ ‘ಎ’ ಗೆಲುವಿನ ಖಾತೆ ತೆರೆದಿದೆ. ಶುಕ್ರವಾರ ಇಲ್ಲಿನ ‘ಕೂಲಿಜ್‌ ಕ್ರಿಕೆಟ್ ಗ್ರೌಂಡ್‌’ನಲ್ಲಿ ನಡೆದ 4ನೇ ಪಂದ್ಯವನ್ನು ವಿಂಡೀಸ್‌ 5 ರನ್ನುಗಳಿಂದ ರೋಚಕವಾಗಿ ಜಯಿಸಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಸುನೀಲ್ ಆ್ಯಂಬ್ರಿಸ್‌ ಪಡೆ 9 ವಿಕೆಟಿಗೆ 298 ರನ್ನುಗಳ ಬೃಹತ್‌ ಮೊತ್ತ ಪೇರಿಸಿದರೆ, ಅಕ್ಷರ್‌ ಪಟೇಲ್ ಪರಾಕ್ರಮದಿಂದ ದಿಟ್ಟ ರೀತಿಯಲ್ಲಿ ಚೇಸಿಂಗ್‌ ನಡೆಸಿದ ಭಾರತ ‘ಎ’ 9 ವಿಕೆಟಿಗೆ 293 ರನ್‌ ಗಳಿಸಿ ಶರಣಾಯಿತು. ಮೊದಲ 3 ಪಂದ್ಯಗಳನ್ನು ಗೆದ್ದ ಮನೀಷ್‌ ಪಾಂಡೆ ಸಾರಥ್ಯದ ಭಾರತ ತಂಡ ಸರಣಿ ವಶಪಡಿಸಿಕೊಂಡಿತ್ತು. 5ನೇ ಹಾಗೂ ಅಂತಿಮ ಪಂದ್ಯ ರವಿವಾರ ನಡೆಯಲಿದೆ.

ಅಗ್ರ ಕ್ರಮಾಂಕದ ಕುಸಿತ
ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಭಾರತ ಭರ್ಜರಿ ಆರಂಭ ಪಡೆಯಲು ವಿಫ‌ಲವಾಯಿತು. ಋತುರಾಜ್‌ ಗಾಯಕ್ವಾಡ್‌ (20), ಅನ್ಮೋಲ್ಪ್ರೀತ್‌ ಸಿಂಗ್‌ (11) 36 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಹನುಮ ವಿಹಾರಿ (20), ಕೃಣಾಲ್ ಪಾಂಡ್ಯ (45), ಮನೀಷ್‌ ಪಾಂಡೆ (24) ಕೂಡ ಬೇಗನೇ ವಾಪಸಾದರು. 26ನೇ ಓವರ್‌ ವೇಳೆ 127 ರನ್ನಿಗೆ 5 ವಿಕೆಟ್ ಹಾರಿ ಹೋಯಿತು.

ಆದರೆ 8ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಅಕ್ಷರ್‌ ಪಟೇಲ್ ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶಿಸಿದಾಗ ಪಂದ್ಯ ರೋಚಕ ಘಟ್ಟ ತಲುಪಿತು; ಭಾರತಕ್ಕೂ ಗೆಲುವಿನ ಅವಕಾಶ ತೆರೆಯಲ್ಪಟ್ಟಿತು. ಆದರೆ ಸ್ವಲ್ಪದರಲ್ಲೇ ಅದೃಷ್ಟ ಕೈಕೊಟ್ಟಿತು. ಆಗ ಅಕ್ಷರ್‌ ಪಟೇಲ್ 63 ಎಸೆತಗಳಿಂದ 81 ರನ್‌ ಮಾಡಿ ಅಜೇಯರಾಗಿದ್ದರು (8 ಬೌಂಡರಿ, 1 ಸಿಕ್ಸರ್‌).

ವಿಂಡೀಸ್‌ ಸರದಿಯಲ್ಲಿ ಚೇಸ್‌ 84, ಡೆವೋನ್‌ ಥಾಮಸ್‌ 70, ಕಾರ್ಟರ್‌ 50 ರನ್‌ ಹೊಡೆದರು. ಭಾರತದ ಪರ ಖಲೀಲ್ ಅಹ್ಮದ್‌ 4, ಆವೇಶ್‌ ಖಾನ್‌ 3 ವಿಕೆಟ್ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌ : ವೆಸ್ಟ್‌ ಇಂಡೀಸ್‌ ‘ಎ’-9 ವಿಕೆಟಿಗೆ 298 (ರೋಸ್ಟನ್‌ ಚೇಸ್‌ 84, ಥಾಮಸ್‌ 70, ಕಾರ್ಟರ್‌ 50, ಖಲೀಲ್ ಅಹ್ಮದ್‌ 67ಕ್ಕೆ 4, ಆವೇಶ್‌ ಖಾನ್‌ 62ಕ್ಕೆ 3). ಭಾರತ ‘ಎ’-9 ವಿಕೆಟಿಗೆ 293 (ಅಕ್ಷರ್‌ ಔಟಾಗದೆ 81, ಕೆ. ಪಾಂಡ್ಯ 45, ವಾಷಿಂಗ್ಟನ್‌ 45, ಪೊವೆಲ್ 47ಕ್ಕೆ 2, ಪೌಲ್ 61ಕ್ಕೆ 2). ಪಂದ್ಯಶ್ರೇಷ್ಠ: ರೋಸ್ಟನ್‌ ಚೇಸ್‌.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಫಲಿತಾಂಶಕ್ಕೆ ತಡೆ

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಫಲಿತಾಂಶಕ್ಕೆ ತಡೆ

ಅದಾನಿ ಸಮೂಹಕ್ಕೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

ಅದಾನಿ ಸಮೂಹ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

000

77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ : ಬೆಂಗಳೂರು ತರಕಾರಿ ವ್ಯಾಪಾರಿಗೆ 42,000 ಸಾವಿರ ದಂಡ.!

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

ಹಾವೇರಿ ಜಿಲ್ಲೆಯಲ್ಲಿ 28 ಜನರಿಗೆ ಕೋವಿಡ್ ಸೋಂಕು; 25 ಜನರು ಗುಣಮುಖ

ಹಾವೇರಿ ಜಿಲ್ಲೆಯಲ್ಲಿ 28 ಜನರಿಗೆ ಕೋವಿಡ್ ಸೋಂಕು; 25 ಜನರು ಗುಣಮುಖ

ಉಚಿತ ಲಸಿಕೆ ಘೋಷಣೆ ನೀತಿ ಸಂಹಿತೆ ಉಲ್ಲಂಘನೆಯಲ್ಲ : ಚುನಾವಣಾ ಆಯೋಗ ಸ್ಪಷ್ಟನೆ

ಉಚಿತ ಲಸಿಕೆ ಘೋಷಣೆ ನೀತಿ ಸಂಹಿತೆ ಉಲ್ಲಂಘನೆಯಲ್ಲ : ಚುನಾವಣಾ ಆಯೋಗ ಸ್ಪಷ್ಟನೆ

jamess-bond

ಜೇಮ್ಸ್‌ ಬಾಂಡ್‌ ಖ್ಯಾತಿಯ ನಟ ಸೀನ್ ಕಾನೆರಿ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rcb

ಬೆಂಗಳೂರು-ಹೈದರಾಬಾದ್ ಬಿಗ್ ಫೈಟ್: ಟಾಸ್ ಗೆದ್ದ ವಾರ್ನರ್ ಪಡೆ ಬೌಲಿಂಗ್ ಆಯ್ಕೆ

01

ಮುಂಬೈ vs ಡೆಲ್ಲಿ ಬಲಾಢ್ಯರ ಕಾಳಗ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಗೇಲ್ ಈಗ ಸಾವಿರ ಸಿಕ್ಸರ್ ಒಡೆಯ:ಆರ್ ಸಿಬಿ, ಪಂಜಾಬ್ ಪರ ಗೇಲ್ ಎಷ್ಟು ಸಿಕ್ಸರ್ ಬಾರಿಸಿದ್ದಾರೆ?

ಗೇಲ್ ಈಗ ಸಾವಿರ ಸಿಕ್ಸರ್ ಒಡೆಯ:ಆರ್ ಸಿಬಿ, ಪಂಜಾಬ್ ಪರ ಗೇಲ್ ಎಷ್ಟು ಸಿಕ್ಸರ್ ಬಾರಿಸಿದ್ದಾರೆ?

ಪ್ಲೇ ಆಫ್ ಸ್ಥಾನ: ರಾಜಸ್ಥಾನ್‌ ವಿರುದ್ಧ ಪಂಜಾಂಬ್‌ ಸೋತಿದರಿಂದ ಶುರುವಾಗಿದೆ ತೀವ್ರ ಲೆಕಾಚಾರ

ಪ್ಲೇ ಆಫ್ ಸ್ಥಾನ: ರಾಜಸ್ಥಾನ್‌ ವಿರುದ್ಧ ಪಂಜಾಬ್‌ ಸೋತಿದ್ದರಿಂದ ಶುರುವಾಗಿದೆ ತೀವ್ರ ಲೆಕ್ಕಾಚಾರ

IPL-22 ಅಂಕದ ಹುಡುಕಾಟದಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌

2 ಅಂಕದ ಹುಡುಕಾಟದಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌

MUST WATCH

udayavani youtube

ಈ ಮತ್ಸ್ಯಪ್ರೇಮಿಗೆ ಮನೆಯ ಬಾವಿಯೇ ಅಕ್ವೇರಿಯಂ

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

ಹೊಸ ಸೇರ್ಪಡೆ

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಫಲಿತಾಂಶಕ್ಕೆ ತಡೆ

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಫಲಿತಾಂಶಕ್ಕೆ ತಡೆ

ಅದಾನಿ ಸಮೂಹಕ್ಕೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

ಅದಾನಿ ಸಮೂಹ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

ಬಸ್ರೂರು: ಕುಸಿದ ಮೋರಿಯಿಂದ ಸಂಚಾರ ದುಸ್ತರ

ಬಸ್ರೂರು: ಕುಸಿದ ಮೋರಿಯಿಂದ ಸಂಚಾರ ದುಸ್ತರ

ಮುಂಡ್ಕೂರಿನಲ್ಲಿ ಇನ್ನೂ ಆಗದ ಹೊಸ ಮೀನು ಮಾರುಕಟ್ಟೆ

ಮುಂಡ್ಕೂರಿನಲ್ಲಿ ಇನ್ನೂ ಆಗದ ಹೊಸ ಮೀನು ಮಾರುಕಟ್ಟೆ

000

77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ : ಬೆಂಗಳೂರು ತರಕಾರಿ ವ್ಯಾಪಾರಿಗೆ 42,000 ಸಾವಿರ ದಂಡ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.