ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಜೋತ್ಸ್ನಾ
Team Udayavani, Mar 14, 2019, 12:35 AM IST
ಕೈರೊ (ಈಜಿಪ್ಟ್): ವನಿತೆಯರ “ಬ್ಲ್ಯಾಕ್ ಬಾಲ್ ಸ್ಕ್ವಾಷ್ ಓಪನ್’ ಕೂಟದಲ್ಲಿ ಓಟ ಮುಂದುವರಿಸಿರುವ ಭಾರತದ ತಾರಾ ಆಟಗಾರ್ತಿ ಜೋತ್ಸ್ನಾ ಚಿನ್ನಪ್ಪ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಇಲ್ಲಿ ನಡೆದ ಪಂದ್ಯದಲ್ಲಿ ಜೋತ್ಸ್ನಾ 6ನೇ ಶ್ರೇಯಾಂಕಿತೆ, ಇಂಗ್ಲೆಂಡಿನ ಸಾರಾ ಜೇನ್ ಪೆರ್ರಿ ಅವರನ್ನು 11-4, 6-11, 14-12, 11-9 ಗೇಮ್ಗಳಿಂದ ಸೋಲಿಸಿದರು. ಇದಕ್ಕೂ ಮುನ್ನ ಜೋತ್ಸ್ನಾ ಸ್ಕ್ವಾಷ್ ದಿಗ್ಗಜೆ, ಮಲೇಶ್ಯದ ನಿಕೋಲ್ ಡೇವಿಡ್ ಅವರನ್ನು ಮೊದಲ ಸುತ್ತಿನಲ್ಲಿ ಹಿಮ್ಮೆಟ್ಟಿಸಿದ್ದರು.
2012 ಚೆನ್ನೈ ಓಪನ್ ಕೂಟದಲ್ಲಿ ಸಾರಾ ವಿರುದ್ಧ ಗೆಲುವು ದಾಖಲಿಸಿದ ಜೋತ್ಸ್ನಾ, ಸುಮಾರು 7 ವರ್ಷಗಳ ಅನಂತರ ಸಾರಾ ಅವರನ್ನು ಸೋಲಿಸಿದರು. ಅದು ಕೂಡ 4 ಗೇಮ್ಗಳ ಪಂದ್ಯವಾಗಿತ್ತು. ಈ ಬಾರಿಯ ಹೆಚ್ಚಿನ ಹಿಡಿತ ಸಾಧಿಸಿದ ಜೋತ್ಸ್ನಾ ಮೊದಲ ಗೇಮ್ನಲ್ಲೇ ಪ್ರಾಬಲ್ಯ ಮೆರೆದರು. ಆದರೆ ದ್ವಿತೀಯ ಗೇಮ್ನಲ್ಲಿ ಸಾರಾ ಎಚ್ಚರಿಕೆ ಆಟವಾಡಿದ ಗೆದ್ದರು. ಮುಂದಿನ ಎರಡೂ ಗೇಮ್ಗಳಲ್ಲೂ ಮೇಲುಗೈ ಸಾಧಿಸಿದ ಜೋತ್ಸ್ನಾ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ಕ್ವಾರ್ಟರ್ ಫೈನಲ್ನಲ್ಲಿ ಜೋತ್ಸ್ನಾ ಎದುರಾಳಿ ನ್ಯೂಜಿಲ್ಯಾಂಡಿನ ಜೋಯೆಲ್ ಕಿಂಗ್.