ವನಿತಾ ಹಾಕಿ ಸರಣಿ: ಕೊರಿಯಾವನ್ನು ಕೆಡವಿದ ಭಾರತ
Team Udayavani, May 21, 2019, 6:00 AM IST
ಜಿಂಚಾನ್ (ದಕ್ಷಿಣ ಕೊರಿಯಾ): ಆತಿಥೇಯ ದಕ್ಷಿಣ ಕೊರಿಯಾ ವಿರುದ್ಧದ 3 ಪಂದ್ಯಗಳ ವನಿತಾ ಹಾಕಿ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಸೋಮವಾರದ ಮೊದಲ ಪಂದ್ಯದಲ್ಲಿ 2-1 ಗೋಲುಗಳ ಜಯ ದಾಖಲಿಸಿದೆ.
ಯುವ ಸ್ಟ್ರೈಕರ್ ಲಾಲ್ರೆಮ್ಸಿಯಾಮಿ (20ನೇ ನಿಮಿಷ) ಮತ್ತು ನವನೀತ್ ಕೌರ್ (40ನೇ ನಿಮಿಷ) ಗೋಲು ಬಾರಿಸಿದರು. ಭಾರತದ ಆಕ್ರಮಣದ ಬಳಿಕ, ಪಂದ್ಯದ 48ನೇ ನಿಮಿಷದಲ್ಲಿ ಹೀಜಿಯಾಂಗ್ ಅವರಿಂದ ದಕ್ಷಿಣ ಕೊರಿಯಾದ ಏಕೈಕ ಗೋಲು ದಾಖಲಾಯಿತು. ಆತಿಥೇಯರ ಮೇಲುಗೈಗೆ ಗೋಲ್ಕೀಪರ್ ಸವಿತಾ ತಡೆಯಾಗಿ ನಿಂತರು.
ಸರಣಿಯ ದ್ವಿತೀಯ ಪಂದ್ಯ ಬುಧವಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ