ಇಂದಿನಿಂದ ಬೆಂಗಳೂರಿನಲ್ಲಿ ಮಹಿಳಾ ಏಷ್ಯಾ ಕಪ್ ಬಾಸ್ಕೆಟ್ಬಾಲ್
Team Udayavani, Jul 23, 2017, 6:10 AM IST
ಬೆಂಗಳೂರು: ಉದ್ಯಾನನಗರಿಯಲ್ಲಿ ಫಿಬಾ ಏಷ್ಯಾ ಕಪ್ ಮಹಿಳಾ ಬಾಸ್ಕೆಟ್ಬಾಲ್ ಕೂಟಕ್ಕೆ ಶನಿವಾರ ರಾಜ್ಯಪಾಲ ವಜುಭಾಯಿ ವಾಲಾ ಚಾಲನೆ ನೀಡಿದರು.
ಜು.23ರಿಂದ 29ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಕೂಟ ನಡೆಯಲಿದೆ. ಭಾರತ ತಂಡ ಗುಂಪಿನಲ್ಲಿ ಸ್ಥಾನ ಪಡೆದಿದೆ. ಗುಂಪಿನ ಭಾರತ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಳಿದ ಪಂದ್ಯಗಳು ಕೋರಮಂಗಲದಲ್ಲಿ ನಡೆಯಲಿದೆ. ಭಾರತ ಶನಿವಾರ ರಾತ್ರಿ 8 ಗಂಟೆಗೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಉಸ್ಬೇಕಿಸ್ತಾನವನ್ನು ಎದುರಿಸಲಿದೆ.
ಉಳಿದಂತೆ ಸಿಂಗಾಪುರ, ಲೆಬನಾನ್, ಕಜಕೀಸ್ಥಾನ, ಶ್ರೀಲಂಕಾ ಈ ಗುಂಪಿನಲ್ಲಿರುವ ಪ್ರಮುಖ ತಂಡಗಳಾಗಿವೆ. ವಿಭಾಗದಲ್ಲಿ ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಫಿಲಿಪ್ಪಿನ್ಸ್, ಜಪಾನ್, ಚೈನೀಸ್ ತೈಪೆ, ಡಿಪಿಆರ್ ಕೊರಿಯಾ, ನ್ಯೂಜಿಲೆಂಡ್ ಹಾಗೂ ಚೀನಾದ ಪ್ರಬಲ ತಂಡಗಳು ಇವೆ ಎನ್ನುವುದು ವಿಶೇಷ.
ಪ್ರಬಲ ಚಾಂಪಿಯನ್ ಜಪಾನ್: ಹಾಲಿ ಚಾಂಪಿಯನ್ ಜಪಾನ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ. ಉಳಿದಂತೆ ಚೀನಾ, ನ್ಯೂಜಿಲೆಂಡ್ ತಂಡಗಳು ಕೂಡ ಕೂಟದ ಅಪಾಯಕಾರಿ ತಂಡಗಳಾಗಿವೆ. ಆದರೆ ಭಾರತ ತಂಡದ ಆಟಗಾರ್ತಿಯರು ಪ್ರಬಲ ಹೋರಾಟ ನೀಡುವ ಮೂಲಕ ಪ್ರಶಸ್ತಿ ಗೆಲುವಿನ ಕನಸಿನಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?