ವನಿತಾ ಏಷ್ಯಾ ಕಪ್ ಕ್ರಿಕೆಟ್; ಹರ್ಮನ್ಪ್ರೀತ್ ಕೌರ್ ನಾಯಕಿ
Team Udayavani, Sep 22, 2022, 8:30 AM IST
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಅ. ಒಂದರಿಂದ 15ರ ತನಕ ನಡೆಯಲಿರುವ ಏಷ್ಯಾ ಕಪ್ ಟಿ20 ಪಂದ್ಯಾವಳಿಗಾಗಿ ಭಾರತ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ.
ಹರ್ಮನ್ಪ್ರೀತ್ ಕೌರ್ ನೇತೃತ್ವದ ಈ ತಂಡದಲ್ಲಿ ಗಮನಾರ್ಹ ಬದಲಾವಣೆಯೇನೂ ಕಂಡುಬಂದಿಲ್ಲ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಆಯ್ದ ಬಳಗವನ್ನೇ ಉಳಿಸಿಕೊಳ್ಳಲಾಗಿದೆ.
ತನಿಯಾ ಭಾಟಿಯಾ ಮತ್ತು ಸಿಮ್ರಾನ್ ದಿಲ್ ಬಹಾದೂರ್ ಮೀಸಲು ಆಟಗಾರ್ತಿಯರ ಯಾದಿಯಲ್ಲಿದ್ದಾರೆ.
ಇದು 7 ತಂಡಗಳ ನಡುವಿನ ರೌಂಡ್ ರಾಬಿನ್ ಲೀಗ್ ಮುಖಾಮುಖಿ. 6 ಬಾರಿಯ ಚಾಂಪಿಯನ್ ಭಾರತ ತನ್ನ ಮೊದಲ ಪಂದ್ಯವನ್ನು ಅ. ಒಂದರಂದು ಶ್ರೀಲಂಕಾ ವಿರುದ್ಧ ಆಡಲಿದೆ.
ಭಾರತ ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧನಾ (ಉಪ ನಾಯಕಿ), ದೀಪ್ತಿ ಶರ್ಮ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್, ಎಸ್. ಮೇಘನಾ, ರಿಚಾ ಘೋಷ್ (ವಿ.ಕೀ.), ಸ್ನೇಹ್ ರಾಣಾ, ಡಿ. ಹೇಮಲತಾ, ಮೇಘನಾ ಸಿಂಗ್, ರೇಣುಕಾ ಠಾಕೂರ್, ಪೂಜಾ ವಸ್ತ್ರಾಕರ್, ರಾಜೇ ಶ್ವರಿ ಗಾಯಕ್ವಾಡ್, ರಾಧಾ ಯಾದವ್, ಕಿರಣ್ ಪ್ರಭು .
ಮೀಸಲು ಆಟಗಾರ್ತಿಯರು: ತನಿಯಾ ಭಾಟಿಯಾ, ಸಿಮ್ರಾನ್ ದಿಲ್ ಬಹಾದೂರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!