ವನಿತಾ ಏಷ್ಯಾ ಕಪ್‌ ಕ್ರಿಕೆಟ್‌: ಮಲೇಷ್ಯಾದ ಮಳೆ ಪಂದ್ಯ ಗೆದ್ದ ಭಾರತ

Team Udayavani, Oct 3, 2022, 10:37 PM IST

ವನಿತಾ ಏಷ್ಯಾ ಕಪ್‌ ಕ್ರಿಕೆಟ್‌: ಮಲೇಷ್ಯಾದ ಮಳೆ ಪಂದ್ಯ ಗೆದ್ದ ಭಾರತ

ಬಾಂಗ್ಲಾದೇಶ: ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ಸತತ ಎರಡು ಪಂದ್ಯಗಳನ್ನು ಗೆದ್ದು ತನ್ನ ಓಟ ಮುಂದುವರಿಸಿದೆ. ಸೋಮವಾರ ಮಲೇಷ್ಯಾ ಎದುರಿನ ಮಳೆಪೀಡಿತ ಮುಖಾಮುಖಿಯನ್ನು ಹರ್ಮನ್‌ಪ್ರೀತ್‌ ಕೌರ್‌ ಬಳಗ ಡಿ-ಎಲ್‌ ನಿಯಮದಂತೆ 30 ರನ್ನುಗಳಿಂದ ಜಯಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 4 ವಿಕೆಟಿಗೆ 161 ರನ್‌ ಪೇರಿಸಿದರೆ, ಮಲೇಷ್ಯಾ ಚೇಸಿಂಗ್‌ ವೇಳೆ ಮಳೆ ಸುರಿಯಿತು. ಪಂದ್ಯ 5.2 ಓವರ್‌ಗಳಿಗೆ ನಿಂತಿತು. ಮಲೇಷ್ಯಾ 2 ವಿಕೆಟ್‌ ಕಳೆದುಕೊಂಡು 16 ರನ್‌ ಮಾಡಿತ್ತು. ಆಗ ಅದು 46 ರನ್‌ ಗಳಿಸಬೇಕಿತ್ತು.

ಅಂಕಪಟ್ಟಿಯಲ್ಲೀಗ ಭಾರತ ದ್ವಿತೀಯ ಸ್ಥಾನದಲ್ಲಿದೆ (4 ಅಂಕ, +2.803 ರನ್‌ರೇಟ್‌). ಪಾಕಿಸ್ಥಾನ ಅಗ್ರಸ್ಥಾನಿಯಾಗಿದೆ. ಅದು ಕೂಡ 4 ಅಂಕ ಹೊಂದಿದ್ದರೂ ರನ್‌ರೇಟ್‌ನಲ್ಲಿ ಭಾರತಕ್ಕಿಂತ ಮುಂದಿದೆ (+3.059).

ಮೇಘನಾ ಮಿಂಚಿನಾ ಆಟ
ಉಪನಾಯಕಿ ಸ್ಮತಿ ಮಂಧನಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇವರ ಬದಲು ಇನ್ನಿಂಗ್ಸ್‌ ಆರಂಭಿಸಿದ ಎಸ್‌. ಮೇಘನಾ ಮಿಂಚಿನ ಆಟವಾಡಿದರು. 53 ಎಸೆತಗಳಿಂದ 69 ರನ್‌ ಬಾರಿಸಿದರು (11 ಬೌಂಡರಿ, 1 ಸಿಕ್ಸರ್‌).
ತೀವ್ರ ಬ್ಯಾಟಿಂಗ್‌ ಬರಗಾಲದಲ್ಲಿದ್ದ ಶಫಾಲಿ ವರ್ಮ 46 ರನ್‌ ಹೊಡೆದು ಲಯ ಕಂಡುಕೊಂಡರು (1 ಬೌಂಡರಿ, 3 ಸಿಕ್ಸರ್‌). ರಿಚಾ ಘೋಷ್‌ ಅಜೇಯ 33 ರನ್‌ ಮಾಡಿದರು. ಆದರೆ ಕಿರಣ್‌ ಪ್ರಭು “ಗೋಲ್ಡನ್‌ ಡಕ್‌’ ಸಂಕಟಕ್ಕೆ ಸಿಲುಕಿದರು. ಕಳೆದ ಪಂದ್ಯದಲ್ಲಿ ಸಿಡಿದಿದ್ದ ಜೆಮಿಮಾ ರೋಡ್ರಿಗಸ್‌, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕ್ರೀಸ್‌ ಇಳಿಯಲಿಲ್ಲ.

ಮಲೇಷ್ಯಾದ 2 ವಿಕೆಟ್‌ಗಳನ್ನು ರಾಜೇಶ್ವರಿ ಗಾಯಕ್ವಾಡ್‌ ಮತ್ತು ದೀಪ್ತಿ ಶರ್ಮ ಉರುಳಿಸಿದರು.

ಭಾರತ ಮಂಗಳವಾರ ಯುಎಇ ವಿರುದ್ಧ ಆಡಲಿದೆ.

ಸಂಕ್ಷಿಪ್ತ ಸ್ಕೋರ್‌: ಭಾರತ-4 ವಿಕೆಟಿಗೆ 181 (ಮೇಘನಾ 69, ಶಫಾಲಿ 46, ರಿಚಾ 33, ನುರ್‌ ದಾನಿಯಾ 9ಕ್ಕೆ 2). ಮಲೇಷ್ಯಾ-5.2 ಓವರ್‌ಗಳಲ್ಲಿ 2 ವಿಕೆಟಿಗೆ 16. ಪಂದ್ಯಶ್ರೇಷ್ಠ: ಎಸ್‌. ಮೇಘನಾ.

ಪಾಕ್‌ಗೆ 9 ವಿಕೆಟ್‌ ಜಯ
ದಿನದ ಮೊದಲ ಪಂದ್ಯದಲ್ಲಿ ಪಾಕಿಸ್ಥಾನ ಆತಿಥೇಯ ಬಾಂಗ್ಲಾದೇಶವನ್ನು 9 ವಿಕೆಟ್‌ಗಳಿಂದ ಪರಾಭವಗೊಳಿಸಿತು. ಬಾಂಗ್ಲಾ 8 ವಿಕೆಟಿಗೆ ಗಳಿಸಿದ್ದು 70 ರನ್‌ ಮಾತ್ರ. ಪಾಕಿಸ್ಥಾನ 12.2 ಓವರ್‌ಗಳಲ್ಲಿ ಒಂದು ವಿಕೆಟಿಗೆ 72 ರನ್‌ ಮಾಡಿತು. ಪಾಕ್‌ ಮೊದಲ ಪಂದ್ಯದಲ್ಲಿ ಮಲೇಷ್ಯಾವನ್ನೂ 9 ವಿಕೆಟ್‌ಗಳಿಂದ ಸೋಲಿಸಿತ್ತು.

ಟಾಪ್ ನ್ಯೂಸ್

16 ಹೊಸ ಮಸೂದೆ ಮಂಡನೆ ಮಂಡಿಸಲು ಕೇಂದ್ರ ಸರಕಾರ ಸಿದ್ಧತೆ?

16 ಹೊಸ ಮಸೂದೆ ಮಂಡನೆ ಮಂಡಿಸಲು ಕೇಂದ್ರ ಸರಕಾರ ಸಿದ್ಧತೆ?

1

ಭಾನುವಾರದ ರಾಶಿ ಫಲ; ನಿರಂತರ ಧನಾರ್ಜನೆ, ಉದ್ಯೋಗ ವ್ಯವಹಾರಗಳಲ್ಲಿ ವಾಕ್‌ ಚತುರತೆಯಿಂದ ಪ್ರಗತಿ

ಸಾವಯವ ಕೃಷಿಗೆ ಸರಕಾರದ ಪ್ರೋತ್ಸಾಹ ಇಳಿಮುಖ

ಸಾವಯವ ಕೃಷಿಗೆ ಸರಕಾರದ ಪ್ರೋತ್ಸಾಹ ಇಳಿಮುಖ

ಬದಲಾದೀತೇ ಗುಜರಾತ್‌ ಗಾದಿ?ನಾಳೆ ಮೋದಿ ತವರಿನಲ್ಲಿ 2ನೇ ಹಂತದ ಮತದಾನ

ಬದಲಾದೀತೇ ಗುಜರಾತ್‌ ಗಾದಿ? ನಾಳೆ ಮೋದಿ ತವರಿನಲ್ಲಿ 2ನೇ ಹಂತದ ಮತದಾನ

ಸಿ.ಟಿ. ರವಿ ಮನೆ ಮುಂದೆ ಹೈಡ್ರಾಮಾ: ಮನೆ ಮುತ್ತಿಗೆಗೆ ಕಾಂಗ್ರೆಸ್‌ ಕಾರ್ಯಕರ್ತರ ಪ್ರಯತ್ನ

ಸಿ.ಟಿ. ರವಿ ಮನೆ ಮುಂದೆ ಹೈಡ್ರಾಮಾ: ಮನೆ ಮುತ್ತಿಗೆಗೆ ಕಾಂಗ್ರೆಸ್‌ ಕಾರ್ಯಕರ್ತರ ಪ್ರಯತ್ನ

ರೌಡಿಗಳನ್ನು ಕಟ್ಟಿಕೊಂಡು ಚುನಾವಣೆ ಗೆಲ್ಲಲು ತಂತ್ರ: ಸಿದ್ದು

ರೌಡಿಗಳನ್ನು ಕಟ್ಟಿಕೊಂಡು ಚುನಾವಣೆ ಗೆಲ್ಲಲು ತಂತ್ರ: ಸಿದ್ದು

ಬೆಳಗಾವಿ ಪ್ರಭಾವಿಗಳ ಮೌನ ಮಹಾರಾಷ್ಟ್ರಕ್ಕೆ ವರ; ಸಿಎಂ ಅವರನ್ನು ಕಟ್ಟಿಹಾಕುವ ಸಲುವಾಗಿ ತಟಸ್ಥರಾದರೇ?

ಬೆಳಗಾವಿ ಪ್ರಭಾವಿಗಳ ಮೌನ ಮಹಾರಾಷ್ಟ್ರಕ್ಕೆ ವರ; ಸಿಎಂ ಅವರನ್ನು ಕಟ್ಟಿಹಾಕುವ ಸಲುವಾಗಿ ತಟಸ್ಥರಾದರೇ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

ಬ್ರೆಝಿಲ್‌, ಸ್ವಿಜರ್ಲೆಂಡ್‌ಗೆ ನಾಕೌಟ್‌ ಅರ್ಹತೆ

ಬ್ರೆಝಿಲ್‌, ಸ್ವಿಜರ್ಲೆಂಡ್‌ಗೆ ನಾಕೌಟ್‌ ಅರ್ಹತೆ

ಫಿಫಾ ವಿಶ್ವಕಪ್‌: ಸೆರ್ಬಿಯದೆದುರು ಸ್ವಿಸ್‌ಗೆ ರೋಚಕ ಜಯ

ಫಿಫಾ ವಿಶ್ವಕಪ್‌: ಸೆರ್ಬಿಯದೆದುರು ಸ್ವಿಸ್‌ಗೆ ರೋಚಕ ಜಯ

ಪ್ರೊ ಕಬಡ್ಡಿ: ಮತ್ತೆ ಅಗ್ರಸ್ಥಾನಕ್ಕೆ ನೆಗೆದ ಪುನೇರಿ ಪಲ್ಟಾನ್‌

ಪ್ರೊ ಕಬಡ್ಡಿ: ಮತ್ತೆ ಅಗ್ರಸ್ಥಾನಕ್ಕೆ ನೆಗೆದ ಪುನೇರಿ ಪಲ್ಟಾನ್‌

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

16 ಹೊಸ ಮಸೂದೆ ಮಂಡನೆ ಮಂಡಿಸಲು ಕೇಂದ್ರ ಸರಕಾರ ಸಿದ್ಧತೆ?

16 ಹೊಸ ಮಸೂದೆ ಮಂಡನೆ ಮಂಡಿಸಲು ಕೇಂದ್ರ ಸರಕಾರ ಸಿದ್ಧತೆ?

1

ಭಾನುವಾರದ ರಾಶಿ ಫಲ; ನಿರಂತರ ಧನಾರ್ಜನೆ, ಉದ್ಯೋಗ ವ್ಯವಹಾರಗಳಲ್ಲಿ ವಾಕ್‌ ಚತುರತೆಯಿಂದ ಪ್ರಗತಿ

ಸಾವಯವ ಕೃಷಿಗೆ ಸರಕಾರದ ಪ್ರೋತ್ಸಾಹ ಇಳಿಮುಖ

ಸಾವಯವ ಕೃಷಿಗೆ ಸರಕಾರದ ಪ್ರೋತ್ಸಾಹ ಇಳಿಮುಖ

ಬದಲಾದೀತೇ ಗುಜರಾತ್‌ ಗಾದಿ?ನಾಳೆ ಮೋದಿ ತವರಿನಲ್ಲಿ 2ನೇ ಹಂತದ ಮತದಾನ

ಬದಲಾದೀತೇ ಗುಜರಾತ್‌ ಗಾದಿ? ನಾಳೆ ಮೋದಿ ತವರಿನಲ್ಲಿ 2ನೇ ಹಂತದ ಮತದಾನ

ಸಿ.ಟಿ. ರವಿ ಮನೆ ಮುಂದೆ ಹೈಡ್ರಾಮಾ: ಮನೆ ಮುತ್ತಿಗೆಗೆ ಕಾಂಗ್ರೆಸ್‌ ಕಾರ್ಯಕರ್ತರ ಪ್ರಯತ್ನ

ಸಿ.ಟಿ. ರವಿ ಮನೆ ಮುಂದೆ ಹೈಡ್ರಾಮಾ: ಮನೆ ಮುತ್ತಿಗೆಗೆ ಕಾಂಗ್ರೆಸ್‌ ಕಾರ್ಯಕರ್ತರ ಪ್ರಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.