ವನಿತಾ ಬಿಗ್‌ ಬಾಶ್‌ ಕ್ರಿಕೆಟ್‌ ಲೀಗ್‌: ಬ್ರಿಸ್ಬೇನ್‌ ಹೀಟ್‌ ಮತ್ತೆ ಚಾಂಪಿಯನ್‌

Team Udayavani, Dec 9, 2019, 12:05 AM IST

ಬ್ರಿಸ್ಬೇನ್‌: “ಬ್ರಿಸ್ಬೇನ್‌ ಹೀಟ್‌’ ತಂಡ ವನಿತಾ ಬಿಗ್‌ ಬಾಶ್‌ ಟಿ20 ಕ್ರಿಕೆಟ್‌ ಲೀಗ್‌ ಕೂಟದಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ. ರವಿವಾರ “ಅಲನ್‌ ಬೋರ್ಡರ್‌ ಫೀಲ್ಡ್‌’ನಲ್ಲಿ ನಡೆದ ಫೈನಲ್‌ನಲ್ಲಿ ಅದು ಅಡಿಲೇಡ್‌ ಸ್ಟ್ರೈಕರ್ಗೆ 6 ವಿಕೆಟ್‌ಗಳ ಬಿಸಿ ಮುಟ್ಟಿಸಿತು.
ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಅಡಿಲೇಡ್‌ 7 ವಿಕೆಟಿಗೆ 161 ರನ್‌ ಗಳಿಸಿದರೆ, ಹಾಲಿ ಚಾಂಪಿಯನ್‌ ಬ್ರಿಸ್ಬೇನ್‌ 18.1 ಓವರ್‌ಗಳಲ್ಲಿ 4 ವಿಕೆಟಿಗೆ 162 ರನ್‌ ಬಾರಿಸಿತು.

ವಿಜೇತ ತಂಡದ ಪರ ಆರಂಭಿಕ ಆಟಗಾರ್ತಿ ಬೆಥ್‌ ಮೂನಿ ಔಟಾಗದೆ 56 ರನ್‌ ಬಾರಿಸಿದರು (45 ಎಸೆತ, 5 ಬೌಂಡರಿ). ಜೆಸ್‌ ಜೊಹಾಸೆನ್‌ ಆಲೌರೌಂಡ್‌ ಪ್ರದರ್ಶನ ನೀಡಿ ಮಿಂಚಿದರು (2 ವಿಕೆಟ್‌ ಮತ್ತು 33 ರನ್‌).

ಬೆಥ್‌ ಮೂನಿ ಪಂದ್ಯಶ್ರೇಷ್ಠ, ಸೋಫಿ ಡಿವೈನ್‌ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ