ಸ್ಕ್ವಾಷ್ ದಿಗ್ಗಜೆ ವಿರುದ್ಧ ಗೆದ್ದ ಜೋತ್ಸ್ನಾ
Team Udayavani, Mar 13, 2019, 12:30 AM IST
ಕೈರೋ: ಭಾರತದ ಪ್ರಮುಖ ಸ್ಕ್ವಾಷ್ ಆಟಗಾರ್ತಿ ಜೋತ್ಸ್ನಾ ಚಿನ್ನಪ್ಪ “ವನಿತಾ ಬ್ಲ್ಯಾಕ್ ಬಾಲ್ಸ್ಕ್ವಾಷ್ ಓಪನ್’ ಕೂಟದ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಕ್ವಾಷ್ ದಿಗ್ಗಜೆ, ಮಲೇಶ್ಯದ ನಿಕೋಲ್ ಡೇವಿಡ್ ವಿರುದ್ಧ ಗೆದ್ದು ಸಂಭ್ರಮಿಸಿದ್ದಾರೆ.
ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಜೋತ್ಸ್ನಾ ಅವರು ನಿಕೋಲ್ ವಿರುದ್ಧ 11-8, 11-6, 12-10 ಗೇಮ್ಗಳಿಂದ ಜಯ ಸಾಧಿಸಿದರು. ಮೊದಲೆರಡು ಗೇಮ್ಗಳಲ್ಲಿ ಸುಲಭ ಜಯ ಸಾಧಿಸಿದ ಜೋತ್ಸ್ನಾ ಅವರಿಗೆ 3ನೇ ಗೇಮ್ನಲ್ಲಿ ನಿಕೋಲ್ ತೀವ್ರ ಪೈಪೋಟಿ ನೀಡಿದರು. ಇಲ್ಲಿ ಗೆಲುವಿಗಾಗಿ ಇವರಿಬ್ಬರ ನಡುವೆ ಸಮಬಲದ ಹೋರಾಟ ನಡೆಯಿತು. ಆದರೆ ಕೊನೆಯಲ್ಲಿ ಜೋತ್ಸ್ನಾ 12-10 ಅಂಕಗಳ ಅಂತರದಿಂದ ಗೆದ್ದು ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.
ಜೋತ್ಸ್ನಾ ಅವರಿಗಿದು 8 ಬಾರಿಯ ಚಾಂಪಿಯನ್ ನಿಕೋಲ್ ವಿರುದ್ಧ 3ನೇ ಗೆಲುವಾಗಿದೆ. 16ನೇ ರ್ಯಾಂಕಿನ ಜೋತ್ಸ್ನಾ 2018ರ ಏಶ್ಯನ್ ಗೇಮ್ಸ್ನಲ್ಲೂ ನಿಕೋಲ್ ವಿರುದ್ಧ ಗೆದ್ದಿದ್ದರು. ಮುಂದಿನ ಪಂದ್ಯದಲ್ಲಿ ಜೋತ್ಸ್ನಾ 6ನೇ ಶ್ರೇಯಾಂಕಿತೆ ಇಂಗ್ಲೆಂಡ್ನ ಸಾರಾ-ಜೇನ್ ಪೆರ್ರಿ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ಟಿಕೆಟ್ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು
Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ: ರಾಜಸ್ಥಾನಿ ಮಹಿಳೆ !
Kolkata Raiders ಕೋಚ್ ಬಗ್ಗೆ ಆಟಗಾರ ಡೇವಿಡ್ ವೀಸ್ ಆರೋಪ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ