ಭಾರತಕ್ಕೆ ಇಂದು ಅಂತಿಮ ಅವಕಾಶ

Team Udayavani, Jul 29, 2018, 11:35 AM IST

indian-women-hockey.jpg

*ಒಂದೂ ಗೆಲುವು ಕಾಣದ ಭಾರತಕ್ಕೆ ಇಂದು ಅಮೆರಿಕ ಎದುರಾಳಿ * ಗೆದ್ದರೆ ಅಥವಾ ಕನಿಷ್ಠ ಡ್ರಾ ಸಾಧಿಸಿದರಷ್ಟೇ ನಾಕೌಟ್‌ ಅವಕಾಶ

ಲಂಡನ್‌: ಇಂಗ್ಲೆಂಡ್‌ ವಿರುದ್ಧ ಗೆಲುವನ್ನು ಕೈಚೆಲ್ಲಿ, ಅಷ್ಟೇನೂ ಪ್ರಬಲವಲ್ಲದ ಅಯರ್‌ಲ್ಯಾಂಡ್‌ ವಿರುದ್ಧ ಆಘಾತಕಾರಿ ಸೋಲುಂಡ ಭಾರತೀಯ ವನಿತೆಯರ ವಿಶ್ವ ಕಪ್‌ ಹಾಕಿ ಭವಿಷ್ಯ ರವಿವಾರ ನಿರ್ಧಾರವಾಗಲಿದೆ. “ಬಿ’ ಗ್ರೂಪ್‌ನ ಅಂತಿಮ ಲೀಗ್‌ ಪಂದ್ಯದಲ್ಲಿ ರಾಣಿ ರಾಮ್‌ಪಾಲ್‌ ಬಳಗ ಅಮೆರಿಕವನ್ನು ಎದುರಿಸಲಿದೆ. ನಾಕೌಟ್‌ ಪ್ರವೇಶಿಸಲು ಭಾರತದ ಪಾಲಿಗೆ ಇದು ಮಹತ್ವದ ಪಂದ್ಯವಾಗಿದ್ದು, ಗೆಲುವು ಅಥವಾ ಕನಿಷ್ಠ ಡ್ರಾ ಅನಿವಾರ್ಯವಾಗಿದೆ. ಆದರೆ ಅಮೆರಿಕ ವಿರುದ್ಧ ಎಡವಿದರೆ ಭಾರತ ಕೂಟದಿಂದ ಹೊರಬೀಳಲಿದೆ. 

ಕ್ರಾಸ್‌-ಓವರ್‌ ಸ್ಟೇಜ್‌
4 ವಿಭಾಗಗಳ ಅಗ್ರ ತಂಡಗಳಷ್ಟೇ ಕ್ವಾರ್ಟರ್‌ ಫೈನಲ್‌ಗೆ ನೇರ ಅರ್ಹತೆ ಸಂಪಾದಿಸುತ್ತವೆ. ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದ ತಂಡ ಕೂಟದಿಂದ ಹೊರಬೀಳಲಿದೆ. 2ನೇ ಹಾಗೂ 3ನೇ ಸ್ಥಾನ ಪಡೆದ ತಂಡಗಳ ನಡುವೆ ಇನ್ನೊಂದು ಸುತ್ತಿನ ಹಣಾಹಣಿ ಏರ್ಪಡಲಿದೆ. ಇದಕ್ಕೆ “ಕ್ರಾಸ್‌-ಓವರ್‌ ಸ್ಟೇಜ್‌’ ಎಂದು ಹೆಸರಿಸಲಾಗಿದೆ. ಇದರಂತೆ ಪ್ರತಿಯೊಂದು ವಿಭಾಗದಲ್ಲಿ 2ನೇ ಹಾಗೂ 3ನೇ ಸ್ಥಾನ ಪಡೆದ ತಂಡಗಳು ಮತ್ತೂಂದು ಸುತ್ತಿನ ಕದನಕ್ಕೆ ಅಣಿಯಾಗಬೇಕಿದೆ. ಇಲ್ಲಿ ಗೆದ್ದರೆ ಕ್ವಾರ್ಟರ್‌ ಫೈನಲ್‌ ಬಾಗಿಲು ತೆರೆಯುತ್ತದೆ. ಸೋತರೆ ನಿರ್ಗಮನದ ಹಾದಿ ಎದುರಾಗುತ್ತದೆ. ಉದಾಹರಣೆಗೆ, ಭಾರತ “ಬಿ’ ವಿಭಾಗದಲ್ಲಿ 2ನೇ ಸ್ಥಾನ ಪಡೆದರೆ “ಎ’ ವಿಭಾಗದ ತೃತೀಯ ಸ್ಥಾನಿಯೊಂದಿಗೆ ಸೆಣಸಬೇಕು. ಭಾರತ ಗ್ರೂಪ್‌ನಲ್ಲಿ 3ನೇ ಸ್ಥಾನ ಪಡೆದರೆ “ಎ’ ವಿಭಾಗದ ದ್ವಿತೀಯ ಸ್ಥಾನಿ ತಂಡದ ಜತೆ ಕಾದಾಡಬೇಕು. ಗೆದ್ದರಷ್ಟೇ ಕ್ವಾರ್ಟರ್‌ ಫೈನಲ್‌ ಟಿಕೆಟ್‌ ಸಿಗುತ್ತದೆ.

“ಬಿ’ ವಿಭಾಗದಲ್ಲಿ ಸದ್ಯ ಎರಡೂ ಪಂದ್ಯ ಗೆದ್ದಿರುವ ಅಯರ್‌ಲ್ಯಾಂಡ್‌ ಅಗ್ರಸ್ಥಾನದಲ್ಲಿದೆ (6 ಅಂಕ). ಇಂಗ್ಲೆಂಡ್‌ ದ್ವಿತೀಯ ಸ್ಥಾನದಲ್ಲಿದೆ (2). ಒಂದು ಸೋಲು ಮತ್ತು ಡ್ರಾ ಸಾಧಿಸಿರುವ ಭಾರತ ಮತ್ತು ಅಮೆರಿಕ ಕೇವಲ ಒಂದಂಕವನ್ನಷ್ಟೇ ಹೊಂದಿವೆ. ಗೋಲು ವ್ಯತ್ಯಾಸದ ಪ್ರಕಾರ ಭಾರತ 3ನೇ ಸ್ಥಾನ, ಅಮೆರಿಕ ಅಂತಿಮ ಸ್ಥಾನದಲ್ಲಿದೆ. ರವಿವಾರ ಡ್ರಾ ಸಾಧಿಸಿದರೂ ಭಾರತಕ್ಕೇನೂ ಆತಂಕವಿಲ್ಲ. ಆದರೆ ಗೆದ್ದು ಕ್ರಾಸ್‌-ಓವರ್‌ ಸ್ಟೇಜ್‌ನಲ್ಲಿ ಸೆಣಸುವುದು ಮರ್ಯಾದೆ.  “ಹೌದು, ನಮ್ಮ ಕಾರ್ಯತಂತ್ರದ ಬಗ್ಗೆ ಯಾವುದೇ ತಕರಾರಿಲ್ಲ. ತಂಡದ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. ಆದರೆ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸದಿರುವುದೇ ಹಿನ್ನಡೆಗೆ ಕಾರಣ. ಅಮೆರಿಕ ವಿರುದ್ಧ ಇದಕ್ಕೆ ಅವಕಾಶ ಕೊಡಬಾರದು’ ಎಂದಿದ್ದಾರೆ ಕೋಚ್‌ ಸೋರ್ಡ್‌ ಮರಿನ್‌.

ಪೆನಾಲ್ಟಿ  ವೈಫ‌ಲ್ಯ
ಭಾರತ ಅಯರ್‌ಲ್ಯಾಂಡ್‌ ವಿರುದ್ಧ ಪೆನಾಲ್ಟಿ ಕಾರ್ನರ್‌ ವೈಫ‌ಲ್ಯದಿಂದ ತತ್ತರಿಸಿತ್ತು. ಹೀಗಾಗಿ ಗೆಲುವಿನ ಅವಕಾಶ ಕಳೆದುಕೊಂಡಿತ್ತು. ಇಲ್ಲಿ ಲಭಿಸಿದ 7 ಪೆನಾಲ್ಟಿ ಅವಕಾಶಗಳಲ್ಲಿ ಭಾರತಕ್ಕೆ ಒಂದನ್ನೂ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ. ಅಮೆರಿಕ ವಿರುದ್ಧ ಈ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು.

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.