ವನಿತಾ ಟಿ20 ಚಾಲೆಂಜ್‌: ವೆಲಾಸಿಟಿಗೆ 7 ವಿಕೆಟ್‌ ವಿಕ್ಟರಿ

Team Udayavani, May 24, 2022, 10:43 PM IST

ವನಿತಾ ಟಿ20 ಚಾಲೆಂಜ್‌: ವೆಲಾಸಿಟಿಗೆ 7 ವಿಕೆಟ್‌ ವಿಕ್ಟರಿ

ಪುಣೆ: ಓಪನರ್‌ ಶಫಾಲಿ ವರ್ಮ ಮತ್ತು ಮಧ್ಯಮ ಕ್ರಮಾಂಕದ ಆಟಗಾರ್ತಿ ಲಾರಾ ವೋಲ್ವಾರ್ಟ್‌ ಸಿಡಿಸಿದ ಆಕರ್ಷಕ ಅರ್ಧ ಶತಕ ಸಾಹಸದಿಂದ ವನಿತಾ ಟಿ20 ಚಾಲೆಂಜರ್‌ ಸರಣಿಯ ಮಂಗಳವಾರದ ಪಂದ್ಯದಲ್ಲಿ ವೆಲಾಸಿಟಿ ತಂಡ 7 ವಿಕೆಟ್‌ಗಳಿಂದ ಸೂಪರ್‌ ನೋವಾವನ್ನು ಮಣಿಸಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಸೂಪರ್‌ ನೋವಾ 5 ವಿಕೆಟಿಗೆ 150 ರನ್‌ ಪೇರಿಸಿದರೆ, ವೆಲಾಸಿಟಿ 18.2 ಓವರ್‌ಗಳಲ್ಲಿ ಮೂರೇ ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಸೂಪರ್‌ ನೋವಾ ತನ್ನ ಮೊದಲ ಮುಖಾಮುಖಿಯಲ್ಲಿ . ಟ್ರೈಬ್ಲೇಜರ್ ತಂಡವನ್ನು ಮಣಿಸಿತ್ತು. ವೆಲಾಸಿಟಿ-ಟ್ರೈಬ್ಲೇಜರ್ ಗುರುವಾರ ಮುಖಾಮುಖಿಯಲ್ಲಿಯಾಗಲಿವೆ.

ಸೂಪರ್‌ ನೋವಾ 18 ರನ್ನಿಗೆ 3 ವಿಕೆಟ್‌ ಕಳೆದುಕೊಂಡ ಬಳಿಕ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮತ್ತು ಕೀಪರ್‌ ತನಿಯಾ ಭಾಟಿಯಾ ಸೇರಿಕೊಂಡು ತಂಡವನ್ನು ಆಧರಿಸತೊಡಗಿದರು. 4ನೇ ವಿಕೆಟಿಗೆ 82 ರನ್‌ ಪೇರಿಸಿದರು. ನಾಯಕಿಯ ಆಟವಾಡಿದ ಕೌರ್‌ 51 ಎಸೆತ ಎದುರಿಸಿ ಪಂದ್ಯದಲ್ಲೇ ಸರ್ವಾಧಿಕ 71 ರನ್‌ ಬಾರಿಸಿದರು. ಸಿಡಿಸಿದ್ದು 7 ಬೌಂಡರಿ ಹಾಗೂ 3 ಸಿಕ್ಸರ್‌. ಭಾಟಿಯಾ ಗಳಿಕೆ 32 ಎಸೆತಗಳಿಂದ 36 ರನ್‌. ಸುನೆ ಲುಸ್‌ ಔಟಾಗದೆ 20 ರನ್‌ ಮಾಡಿದರು.

ಚೇಸಿಂಗ್‌ ವೇಳೆ ಶಫಾಲಿ ವರ್ಮ ಸಿಡಿದು ನಿಂತರು. 33 ಎಸೆತ ನಿಭಾಯಿಸಿದ ಅವರು 9 ಬೌಂಡರಿ, ಒಂದು ಸಿಕ್ಸರ್‌ ನೆರವಿನಿಂದ 51 ರನ್‌ ಹೊಡೆದರು. ವೋಲ್ವಾರ್ಟ್‌ ತಮ್ಮ ಏಕೈಕ ಸಿಕ್ಸರ್‌ ಮೂಲಕ ಅರ್ಧ ಶತಕ ಪೂರ್ತಿಗೊಳಿಸಿದರು.

ಅವರ ಅಜೇಯ 51 ರನ್‌ 35 ಎಸೆತಗಳಿಂದ ಬಂತು. 7 ಬೌಂಡರಿ, ಒಂದು ಸಿಕ್ಸರ್‌ ಇದರಲ್ಲಿ ಸೇರಿತ್ತು. ನಾಯಕಿ ದೀಪ್ತಿ ಶರ್ಮ 24 ರನ್‌ ಮಾಡಿ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರ್‌: ಸೂಪರ್‌ ನೋವಾ-5 ವಿಕೆಟಿಗೆ 150 (ಕೌರ್‌ 71, ತನಿಯಾ 36, ಲುಸ್‌ ಔಟಾಗದೆ 20. ಕೇಟ್‌ ಕ್ರಾಸ್‌ 24ಕ್ಕೆ 2). ವೆಲಾಸಿಟಿ-18.2 ಓವರ್‌ಗಳಲ್ಲಿ 3 ವಿಕೆಟಿಗೆ 151 (ಶಫಾಲಿ 51, ವೋಲ್ಟಾರ್ಟ್‌ ಔಟಾಗದೆ 51, ದೀಪ್ತಿ ಔಟಾಗದೆ 24, ಡಿಯಾಂಡ್ರ ಡಾಟಿನ್‌ 21ಕ್ಕೆ 2).

ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್‌ ಕೌರ್‌.

ಟಾಪ್ ನ್ಯೂಸ್

dr-sdk

ಹೆಣ್ಣುಮಕ್ಕಳಿಗೆ ಉಚಿತವಾಗಿ ಮುಟ್ಟಿನ ಕಪ್‌ ವಿತರಿಸುವ ಚಿಂತನೆ: ಡಾ.ಕೆ.ಸುಧಾಕರ್‌

ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ

ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ

somashekar st

ಚಾಮುಂಡಿ ಬೆಟ್ಟದಲ್ಲಿರುವವರನ್ನು ಒಕ್ಕಲೆಬ್ಬಿಸುವ ಯಾವುದೇ ಪ್ರಸ್ತಾಪ ಇಲ್ಲ; ಸ್ಪಷ್ಟನೆ

ಕೇರಳ:ಸಂವಿಧಾನ ವಿರೋಧಿ ಹೇಳಿಕೆ:ಭಾರೀ ಆಕ್ರೋಶದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಸಾಜಿ ರಾಜೀನಾಮೆ

ಕೇರಳ: ಸಂವಿಧಾನ ವಿರೋಧಿ ಹೇಳಿಕೆ:ಭಾರೀ ಆಕ್ರೋಶದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಸಾಜಿ ರಾಜೀನಾಮೆ

ಸಾರ್ವಜನಿಕರ ಸೇವೆಗೆ ಲಭ್ಯವಿರಬೇಕಿದ್ದ ಅಂಬುಲೆನ್ಸ್‌ಗೇ ಅರೋಗ್ಯ ಸಮಸ್ಯೆ :4 ದಿನಗಳಿಂದ ತಟಸ್ಥ!

ತುರ್ತು ಅಗತ್ಯ ಸೇವೆಗೆ ಸಿಗಬೇಕಾದ ಅಂಬ್ಯುಲೆನ್ಸ್ ಗೇ ಆರೋಗ್ಯ ಸಮಸ್ಯೆ : 4 ದಿನಗಳಿಂದ ತಟಸ್ಥ!

ಮುಂಬಯಿಯಲ್ಲಿ ಮುಂದುವರಿದ ವರ್ಷಧಾರೆ; ಭೂಕುಸಿತ-ತಗ್ಗುಪ್ರದೇಶ ಜಲಾವೃತ, ಟ್ರಾಫಿಕ್ ಜಾಮ್

ಮುಂಬಯಿಯಲ್ಲಿ ಮುಂದುವರಿದ ವರ್ಷಧಾರೆ; ಭೂಕುಸಿತ-ತಗ್ಗುಪ್ರದೇಶ ಜಲಾವೃತ, ಟ್ರಾಫಿಕ್ ಜಾಮ್

1-dsdddd

ಉತ್ತರ ಕನ್ನಡದಲ್ಲಿ ಭಾರೀ ಮಳೆ: ಗುರುವಾರವೂ ಶಾಲಾ ಕಾಲೇಜಿಗೆ ರಜೆ ಘೋಷಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kohli 2

ವಿಂಡೀಸ್ ಪ್ರವಾಸ: ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಸಾಧ್ಯತೆ

ವಿಂಬಲ್ಡನ್‌ ಟೆನಿಸ್‌ : ನೊವಾಕ್‌ ಜೊಕೋವಿಕ್‌, ತಾಟ್ಜಾನಾ ಮರಿಯಾ ಸೆಮಿಗೆ

ವಿಂಬಲ್ಡನ್‌ ಟೆನಿಸ್‌ : ನೊವಾಕ್‌ ಜೊಕೋವಿಕ್‌, ತಾಟ್ಜಾನಾ ಮರಿಯಾ ಸೆಮಿಗೆ

thumb 1 badmiton

ಮಾನವ ದೋಷ: ಸಿಂಧು ಕ್ಷಮೆ ಕೇಳಿದ ಬ್ಯಾಡ್ಮಿಂಟನ್‌ ಏಷ್ಯಾ ತಾಂತ್ರಿಕ ಸಮಿತಿ

ವಿಶ್ವದ ಅಗ್ರ 20ರಲ್ಲಿ ಸ್ಥಾನ ಪಡೆದ ಭಾರತದ ಖ್ಯಾತ ಶಟ್ಲರ್‌ ಪ್ರಣಯ್‌

ವಿಶ್ವದ ಅಗ್ರ 20ರಲ್ಲಿ ಸ್ಥಾನ ಪಡೆದ ಭಾರತದ ಖ್ಯಾತ ಶಟ್ಲರ್‌ ಪ್ರಣಯ್‌

ಸಮಾನ ಪಂದ್ಯ ಶುಲ್ಕ; ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿ ನಿರ್ಧಾರ

ಸಮಾನ ಪಂದ್ಯ ಶುಲ್ಕ; ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿ ನಿರ್ಧಾರ

MUST WATCH

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

ಹೊಸ ಸೇರ್ಪಡೆ

dr-sdk

ಹೆಣ್ಣುಮಕ್ಕಳಿಗೆ ಉಚಿತವಾಗಿ ಮುಟ್ಟಿನ ಕಪ್‌ ವಿತರಿಸುವ ಚಿಂತನೆ: ಡಾ.ಕೆ.ಸುಧಾಕರ್‌

ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ

ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ

ಹೈಕೋರ್ಟ್ ಸೂಚನೆಯಂತೆ ವಿರೂಪಾಪೂರಗಡ್ಡಿ ಹಳೆ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ

ಹೈಕೋರ್ಟ್ ಸೂಚನೆಯಂತೆ ವಿರೂಪಾಪೂರಗಡ್ಡಿ ಹಳೆ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ

ಸೈನಿಕ ಹುಳುವಿನ ಕೀಟ ಬಾಧೆ ತಡೆಯಲು ಪರಿಹಾರ

ಸೈನಿಕ ಹುಳುವಿನ ಕೀಟ ಬಾಧೆ ತಡೆಯಲು ಪರಿಹಾರ

ಜುಲೈ 08 ರಿಂದ ಗಿರ್ಕಿಯಾಟ

ಜುಲೈ 08 ರಿಂದ ಗಿರ್ಕಿಯಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.