ಮಹಿಳಾ ಟಿ20 ಚಾಲೆಂಜ್: ಸೂಪರ್ ನೋವಾಸ್‌ಗೆ ಪ್ರಶಸ್ತಿ
Team Udayavani, May 29, 2022, 2:24 AM IST
ಪುಣೆ: ತೀವ್ರ ಪೈಪೋಟಿನಿಂದ ಸಾಗಿದ ವನಿತೆಯರ ಟಿ20 ಚಾಲೆಂಜ್ ಕೂಟದ ಫೈನಲ್ ಹೋರಾಟದಲ್ಲಿ ವೆಲಾಸಿಟಿ ತಂಡವನ್ನು 4 ರನ್ನಿನಿಂದ ಸೋಲಿಸಿದ ಸೂಪರ್‌ನೋವಾಸ್ ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕೊನೆ ಹಂತದಲ್ಲಿ ಲಾರಾ ವೊಲ್ವಾಡ್‌ಮತ್ತು ಸಿಮ್ರಾನ್ ಬಹದ್ದೂರ್ ಅವರು ಗೆಲುವು ದಾಖಲಿಸಲು ಶಕ್ತಿಮೀರಿ ಪ್ರಯತ್ನಿಸಿದರು. ಆದರೆ ಅಂತಿಮವಾಗಿ ತಂಡ 8 ವಿಕೆಟಿಗೆ 161 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಒಪ್ಪಿ
ಕೊಂಡಿತು. ಈ ಮೊದಲು ವೆಸ್ಟ್‌ಇಂಡೀಸ್‌ನ ಆರಂಭಿಕ ಆಟಗಾರ್ತಿ ಡಿಯಾಂಡ್ರ ಡಾಟಿನ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಉಪಯುಕ್ತ ಆಟದಿಂದಾಗಿ ಸೂಪರ್‌ನೋವಾಸ್ ತಂಡವು 7 ವಿಕೆಟಿಗೆ 165 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.
13 ರನ್ ಗಳಿಸಿದ ವೇಳೆ ಜೀವದಾನ ಪಡೆದ 30ರ ಹರೆಯದ ಡಾಟಿನ್ ಅವರು ಆಬಳಿಕ ಉತ್ತಮವಾಗಿ ಆಡಿ ತಂಡದ ಉತ್ತಮ ಮೊತ್ತಕ್ಕೆ ನೆರವಾದರು. 44 ಎಸೆತ ಎದುರಿಸಿದ ಅವರು 62 ರನ್ ಗಳಿಸಿದರು.
ಎರಡು ಉತ್ತಮ ಜತೆಯಾಟ
ಅನುಭವಿ ಆಟಗಾರ್ತಿಯಾಗಿರುವ ಡಾಟಿನ್ ಅವರು ಪ್ರಿಯಾ ಪೂನಿಯಾ ಜತೆ ಮೊದಲ ವಿಕೆಟಿಗೆ 73 ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಜತೆ ದ್ವಿತೀಯ ವಿಕೆಟಿಗೆ 58 ರನ್ ಪೇರಿಸಿದ್ದರು. ಹರ್ಮನ್‌ಪ್ರೀತ್ ಕೌರ್ 29 ಎಸೆತಗಳಿಂದ 43 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರು
ಸೂಪರ್‌ನೋವಾಸ್ 7 ವಿಕೆಟಿಗೆ 165 (ಪ್ರಿಯಾ ಪೂನಿಯಾ 28, ಡಿಯಾಂಡ್ರಾ ಡಾಟಿನ್ 62, ಹರ್ಮನ್‌ಪ್ರೀತ್ ಕೌರ್ 43, ದೀಪ್ತಿ ಶರ್ಮ 20ಕ್ಕೆ 2, ಕೇಟ್ ಕ್ರಾಸ್ 29ಕ್ಕೆ 2, ಸಿಮ್ರಾನ್ ಬಹದ್ದೂರ್ 30ಕ್ಕೆ 2);
ವೆಲಾಸಿಟಿ 8 ವಿಕೆಟಿಗೆ 161 (ಲಾರಾ ವೊಲ್ವಾರ್ಡ್ಸ್ 65 ಔಟಾಗದೇ, ಸಿಮ್ರಾನ್ ಬಹದ್ದೂರ್ 20 ಔಟಾಗದೆ, ಅಲನಾ ಕಿಂಗ್ 32ಕ್ಕೆ 3, ಡಾಟಿನ್ 28ಕ್ಕೆ 2, ಎಕ್ಲೆಸ್ಟೋನ್ 28ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೇರು ಬಿಟ್ಟ ರೂಟ್ -ಬೆರಿಸ್ಟೋ: ಎಜ್ ಬಾಸ್ಟನ್ ಟೆಸ್ಟ್ ಗೆದ್ದ ಇಂಗ್ಲೆಂಡ್
ಟಿ20 ಪಂದ್ಯ: ಪೊವೆಲ್ ಪರಾಕ್ರಮ; ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ ವಿಜಯ
ವಿಂಬಲ್ಡನ್-2022: ರಿಬಾಕಿನಾ, ಗಾರಿನ್ ಕ್ವಾ.ಫೈನಲ್ ಪ್ರವೇಶ
ಬರ್ಮಿಂಗ್ಹ್ಯಾಮ್ ಟೆಸ್ಟ್: ಟಾರ್ಗೆಟ್ 378; ಗೆಲುವಿಗೆ ಪೈಪೋಟಿ
ಮಂಧನಾ-ಶಫಾಲಿ ಅಜೇಯ ಜೊತೆಯಾಟ: ಲಂಕಾ ವಿರುದ್ದ ಏಕದಿನ ಸರಣಿ ಗೆದ್ದ ವನಿತೆಯರು