ಐಪಿಎಲ್ ಪ್ಲೇ ಆಫ್ ವೇಳೆ ಮಹಿಳಾ ಪ್ರದರ್ಶನ ಪಂದ್ಯ?
Team Udayavani, Feb 26, 2019, 6:19 AM IST
ಮುಂಬೈ: ವರ್ಣರಂಜಿತ ಐಪಿಎಲ್ ಗೆ ದಿನಗಣನೆ ಆರಂಭವಾಗಿದ್ದು, ಇದರ ಮದ್ಯೆ ಮಹಿಳಾ ಐಪಿಎಲ್ ನಡೆಸಬೇಕೆಂಬ ಕೂಗಿಗೆ ಪುಷ್ಠಿ ಸಿಕ್ಕಿದೆ. ಐಪಿಎಲ್ ನ ಪ್ಲೇಆಫ್ ಪಂದ್ಯದ ವೇಳೆ ಮಹಿಳಾ ಪ್ರದರ್ಶನ ಪಂದ್ಯವನ್ನು ನಡೆಸಲು ಬಿಸಿಸಿಐ ಆಲೋಚಿಸಿದೆ.
ಕಳೆದ ವರ್ಷವೂ ಒಂದು ಪ್ರದರ್ಶನ ಪಂದ್ಯ ನಡೆಸಲಾಗಿತ್ತು. ಅದೇ ರೀತಿ ಈ ಸಾಲಿನ ಕೂಟದಲ್ಲೂ ಪಂದ್ಯವನ್ನು ನಡೆಸಲು ಚಿಂತನೆ ನಡೆಸಿದ್ದೇವೆ. ಆದರೆ ಲೋಕಸಭಾ ಚುಣಾವಣೆ ಇರುವುದರಿಂದ, ಚುಣಾವಣಾ ದಿನಾಂಕವನ್ನು ನೋಡಿಕೊಂಡು ಮುಂದಿನ ನಡೆಯ ಬಗ್ಗೆ ಯೋಚಿಸಲಿದ್ದೇವೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
2019ರ ಸಾಲಿನ ಐಪಿಎಲ್ ನಲ್ಲಿ ಸೂಪರ್ ನೋವಾಸ್ ಮತ್ತು ಟ್ರೈಲ್ ಬ್ಲಾಜರ್ಸ್ ತಂಡಗಳ ನಡುವೆ ಒಂದು ಪಂದ್ಯ ನಡೆದಿತ್ತು. ಸೂಪರ್ ನೋವಾಸ್ ತಂಡವನ್ನುಹರ್ಮನ್ ಪ್ರೀತ್ ಕೌರ್ ಮುನ್ನಡೆಸಿದ್ದರೆ, ಸ್ಮೃತಿ ಮಂಧನಾ ಟ್ರೈಲ್ ಬ್ಲಾಜರ್ಸ್ ತಂಡದ ಚುಕ್ಕಾಣಿ ವಹಿಸಿದ್ದರು. ಈ ಪಂದ್ಯ ಮಧ್ಯಾಹ್ನ 2 ಆರಂಭವಾದ ಕಾರಣ ಹೆಚ್ಚಿನ ಪ್ರಮಾಣದ ಅಭಿಮಾನಿಗಳು ಪಂದ್ಯ ನೋಡಲು ಮೈದಾನಕ್ಕಾಗಮಿಸಿರಲಿಲ್ಲ. ಈ ಕಾರಣಕ್ಕಾಗಿ ಈ ವರ್ಷದ ಪಂದ್ಯವನ್ನು ರಾತ್ರಿ 7 ಗಂಟೆಗೆ ಆರಂಭಿಸಲು ಬಿಸಿಸಿಐ ಚಿಂತಿಸಿದೆ.
ಮಾರ್ಚ್ 23ರಿಂದ 2019ನೇ ಸಾಲಿನ ಐಪಿಎಲ್ ಪಂದ್ಯಗಳು ಆರಂಭಗೊಳ್ಳಲಿದೆ. ಬಿಸಿಸಿಐ ಈಗಾಗಲೇ ಮೊದಲ 17 ಪಂದ್ಯಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ