ಐಸಿಸಿ ಟಿ20 ರ್ಯಾಂಕಿಂಗ್; ಅಗ್ರ 10ರಲ್ಲಿ ಭಾರತದ ಮೂವರು
Team Udayavani, Oct 5, 2022, 10:36 AM IST
ಹೊಸದಿಲ್ಲಿ: ಐಸಿಸಿ ವನಿತಾ ಟಿ20 ರ್ಯಾಂಕಿಂಗ್ ಪ್ರಕಟವಾಗಿದ್ದು ಅಗ್ರ 10ರಲ್ಲಿ ಭಾರತದ ಮೂವರು ಆಟಗಾರ್ತಿಯರಿದ್ದಾರೆ. ಭಾರತದ ಜೆಮಿಮಾ ರೋಡ್ರಿಗಸ್ ಉತ್ತಮ ರೀತಿಯಲ್ಲಿ ತಮ್ಮ ರ್ಯಾಂಕಿಂಗ್ ಅನ್ನು ಏರಿಸಿಕೊಂಡರು.
ಸಿಲ್ಹೆಟ್ನಲ್ಲಿ ಸಾಗುತ್ತಿರುವ ಏಷ್ಯಾ ಕಪ್ ಕೂಟದಲ್ಲಿ ಜೆಮಿಮಾ ರೋಡ್ರಿಗಸ್ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು 53 ಎಸೆತಗಳಿಂದ 76 ರನ್ ಗಳಿಸಿದ್ದರು. ಈ ಸಾಧನೆಯಿಂದಾಗಿ ಅವರು ನಾಲ್ಕು ಸ್ಥಾನ ಮೇಲಕ್ಕೇರಿದ್ದು ಎಂಟನೇ ಸ್ಥಾನದಲ್ಲಿದ್ದಾರೆ. ಅವರು ಮಂಗಳವಾರ ನಡೆದ ಯುಎಇ ವಿರುದ್ಧದ ಪಂದ್ಯದಲ್ಲಿ 75 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
ಇದನ್ನೂ ಓದಿ:ಕ್ಯಾಚ್ ಹಿಡಿದು ಬೌಂಡರಿ ಗೆರೆ ತುಳಿದ ಸಿರಾಜ್ ಗೆ ನಿಂದಿಸಿದ ದೀಪಕ್; ವಿಡಿಯೋ ನೋಡಿ
ಭಾರತದ ಸ್ಮತಿ ಮಂಧನಾ ಮತ್ತು ಶಫಾಲಿ ವರ್ಮ ಅಗ್ರ ಹತ್ತರೊಳಗೆ ಇರುವ ಇನ್ನಿಬ್ಬರು ಭಾರತೀಯ ಆಟಗಾರ್ತಿಯರಾಗಿದ್ದಾರೆ. ಸ್ಮತಿ ಮಂಧನಾ ಮೂರನೇ ಸ್ಥಾನದಲ್ಲಿದ್ದರೆ ಶಫಾಲಿ ವರ್ಮ ಏಳನೇ ಸ್ಥಾನದಲ್ಲಿದ್ದಾರೆ. ಮುಂಬಯಿಯ ರೋಡ್ರಿಗಸ್ ನಾಲ್ಕು ರ್ಯಾಂಕ್ ಮೇಲೇರಿ ಎಂಟನೇ ಸ್ಥಾನದಲ್ಲಿದ್ದಾರೆ.
ನಾಯಕಿ ಹರ್ಮನ್ಪ್ರೀತ್ ಕೌರ್ ಎರಡು ಸ್ಥಾನ ಮೇಲಕ್ಕೇರಿದ್ದು 13ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ಬೆತ್ ಮೂನಿ ಮತ್ತು ಮೆಗ್ ಲ್ಯಾನಿಂಗ್ ಮೊದಲೆರಡು ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ