ವನಿತಾ ಟಿ20 ವಿಶ್ವಕಪ್: ಭಾರತ-ಪಾಕಿಸ್ಥಾನ ಮೊದಲ ಫೈಟ್
Team Udayavani, Oct 3, 2022, 10:53 PM IST
ದುಬಾೖ: ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 8ನೇ ಆವೃತ್ತಿಯ ವನಿತಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ಥಾನ ವಿರುದ್ಧ ಆಡಲಿದೆ. ಫೆ. 12ರಂದು ಕೇಪ್ಟೌನ್ನಲ್ಲಿ ಈ ಪಂದ್ಯ ನಡೆಯಲಿದೆ.
ಭಾರತ ಗ್ರೂಪ್ ಎರಡರಲ್ಲಿ ಸ್ಥಾನ ಪಡೆದಿದೆ. ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಅರ್ಹತಾ ಸುತ್ತಿನಿಂದ ಬಂದ ಐರ್ಲೆಂಡ್ ಈ ಗುಂಪಿನ ಉಳಿದ ತಂಡಗಳು.
ಭಾರತ ತನ್ನ ದ್ವಿತೀಯ ಪಂದ್ಯವನ್ನು ಫೆ. 15ರಂದು ವೆಸ್ಟ್ ಇಂಡೀಸ್ ವಿರುದ್ಧ ಕೇಪ್ಟೌನ್ನಲ್ಲೇ ಆಡಲಿದೆ. ಬಳಿಕ ಇಂಗ್ಲೆಂಡ್ (ಫೆ. 18) ಮತ್ತು ಐರ್ಲೆಂಡ್ (ಫೆ. 20) ವಿರುದ್ಧ ಸೆಣಸಲಿದೆ.
ಉದ್ಘಾಟನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ-ಶ್ರೀಲಂಕಾ ಮುಖಾಮುಖಿ ಆಗಲಿವೆ. ಇವೆರಡು ಮೊದಲ ಗ್ರೂಪ್ನಲ್ಲಿವೆ. ಇಲ್ಲಿನ ಉಳಿದ ತಂಡಗಳೆಂದರೆ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ.