ಆಸ್ಟ್ರೇಲಿಯದಲ್ಲಿ ವನಿತಾ ಅಂಪಾಯರ್ಗಳಿಗೆ ಮನ್ನಣೆ
Team Udayavani, Dec 24, 2018, 6:50 AM IST
ಸಿಡ್ನಿ: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ವನಿತಾ “ಬಿಗ್ ಬಾಶ್ ಲೀಗ್’ ಕೂಟ ಕ್ರಿಕೆಟಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ ಕ್ರಿಕೆಟಿನಲ್ಲಿ ವನಿತಾ ಅಂಪಾಯರ್ಗಳ ತಂಡವೊಂದು ಕೂಟದಲ್ಲಿ ಕಾರ್ಯ ನಿರ್ವಹಿಸಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.
ರವಿವಾರ ನಡೆದ ವನಿತಾ ಬಿಗ್ ಬಾಶ್ ಲೀಗ್ನ ಪಂದ್ಯದಲ್ಲಿ ಕ್ಲೇರಿ ಪೊಲೊಸಾಕ್ ಹಾಗೂ ಎಲೋಯಿಸ್ ಶೆರಿಡನ್ ವನಿತಾ ಅಂಪಾಯರ್ಗಳಾಗಿದ್ದರು. ಕ್ರಿಕೆಟ್ ಆಸ್ಟ್ರೇಲಿಯದ ಅಂಪಾಯರ್ ಸಮಿತಿಯ ಸದಸ್ಯರಾಗಿರುವ ಪೊಲೊಸಾಕ್ ಆಸ್ಟ್ರೇಲಿಯದಲ್ಲಿ ನಡೆದ ಪುರುಷರ ಸ್ಥಳೀಯ ಕ್ರಿಕೆಟಿನಲ್ಲಿ ಮೊದಲ ಬಾರಿ ಅಂಪಾಯರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ, ಐಸಿಸಿ ವನಿತಾ ವಿಶ್ವಟಿ20 ಟೂರ್ನಿಯ ಫೈನಲ್ನಲ್ಲಿಯೂ ಅಂಪಾಯರ್ ಆಗಿದ್ದರು. ಫೈನಲ್ನಲ್ಲಿ ವನಿತಾ ಅಂಪಾಯರ್ಗೆ ಅವಕಾಶ ನೀಡಿದ್ದು ಅದೇ ಮೊದಲಾಗಿತ್ತು. ಕ್ರಿಕೆಟಿಗೆ ವಿದಾಯ ಹೇಳಿದ ಅನಂತರ ಶೆರಿಡನ್ ಅಂಪಾಯರಿಂಗ್ಗೆ ಇಳಿದಿದ್ದರು.
“ಕ್ಲೇಹಾಗೂ ಎಲೋಯಿಸ್ ಆಸ್ಟ್ರೇಲಿಯದ ಪ್ರಮುಖ ವನಿತಾ ಅಂಪಾಯರ್ಗಳಾಗಿದ್ದು, ಅವರ ಕಠಿನ ಪರಿಶ್ರಮವನ್ನು ನೋಡಿ ತುಂಬ ಖುಷಿಯಾಗಿದೆ. ಕ್ರಿಕೆಟಿನಲ್ಲಿ ಇದು ಮತ್ತೂಂದು ಪ್ರಮುಖ ಹೆಜ್ಜೆಯಾಗಿದ್ದು, ಆಸ್ಟ್ರೇಲಿಯದ ಬಾಲಕಿಯರಿಗೆ ಹಾಗೂ ವನಿತೆಯರಿಗೆ ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸಲು ಇದು ನೆರವಾಗಲಿದೆ’ ಎಂದು ಕ್ರಿಕೆಟ್ ಆಸ್ಟ್ರೇಲಿದಯ ಸಿಇಒ ಕೆವಿನ್ ರಾಬರ್ಟ್ಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್