Udayavni Special

ವಿಶ್ವ ಬ್ಯಾಡ್ಮಿಂಟನ್‌: ಸಿಂಧು, ಸೈನಾ ಮೊದಲ ಸುತ್ತಿನಲ್ಲಿ ಬೈ


Team Udayavani, Aug 10, 2017, 11:47 AM IST

10-SPORTS-5.jpg

ಹೊಸದಿಲ್ಲಿ: ಒಲಿಂಪಿಕ್‌ ಬೆಳ್ಳಿ ವಿಜೇತೆ ಪಿವಿ ಸಿಂಧು ಮತ್ತು ಮಾಜಿ ನಂ. ವನ್‌ ಸೈನಾ ನೆಹ್ವಾಲ್‌ ಅವರಿಗೆ ಆ. 21ರಿಂದ ಸ್ಕಾಟ್ಲೆಂಡ್‌ನ‌ ಗ್ಲಾಸ್ಕೋದಲ್ಲಿ ಆರಂಭವಾಗುವ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಬೈ ಲಭಿಸಿದೆ. 

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿಯ ಕಂಚು ವಿಜೇತೆ ಸಿಂಧು ದ್ವಿತೀಯ ಸುತ್ತಿನಲ್ಲಿ ಕೊರಿಯದ ಕಿಮ್‌ ಹ್ಯೂ ಮಿನ್‌ ಅಥವಾ ಈಜಿಪ್ಟ್ನಹಾಡಿಯಾ ಹೋಸ್ನಿ ಅವರನ್ನು ಎದುರಿಸಲಿದ್ದಾರೆ ಮತ್ತು ಚೀನದ ಸನ್‌ ಯು ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಎದುರಿಸುವ ಸಾಧ್ಯತೆಯಿದೆ.

2015ರ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ವಿಜೇತೆ ಸೈನಾ ಅವರು ದ್ವಿತೀಯ ಸುತ್ತಿನಲ್ಲಿ ಸ್ವಿಟ್ಸರ್‌ಲ್ಯಾಂಡಿನ ಸಬ್ರಿನಾ ಜಾಕ್ವೆಟ್‌ ಮತ್ತು ಉಕ್ರೆನ್‌ನ ನಟಾಲ್ಯಾ ವಾಯ್‌ಟೆಕ್‌ ಅವರ ನಡುವಣ ವಿಜೇತರನ್ನು ಎದು ರಿಸಲಿದ್ದಾರೆ. ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಅವರು ದ್ವಿತೀಯ ಶ್ರೇಯಾಂಕದ ಕೊರಿಯದ ಸಂಗ್‌ ಜಿ ಹ್ಯುನ್‌ ಅವರನ್ನು ಎದುರಿಸುವ ಸಂಭವವಿದೆ.

ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್‌ ರೆಡ್ಡಿ, ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ  ಮತ್ತು ಚಿರಾಗ್‌ ಶೆಟ್ಟಿ, ಮಿಕ್ಸೆಡ್‌ ಡಬಲ್ಸ್‌ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ ಮತ್ತು ಎನ್‌. ಸಿಕ್ಕಿ ರೆಡ್ಡಿ, ವನಿತೆಯರ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ ಮತ್ತು ಸಿಕ್ಕಿ ಅವರು ಕಣದಲ್ಲಿದ್ದಾರೆ.

ಭಾರತದ ಅಗ್ರ ಕ್ರಮಾಂಕದ ಪುರುಷ ಶಟ್ಲರ್‌ ಕಿದಂಬಿ ಶ್ರೀಕಾಂತ್‌ ರಶ್ಯದ ಸರ್ಗೆ ಸಿರಾಂಟ್‌ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಇಂಡೋನೇಶ್ಯ ಮತ್ತು ಆಸ್ಟ್ರೇಲಿಯದಲ್ಲಿ ನಡೆದ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದ ಪ್ರಶಸ್ತಿ ಗೆದ್ದಿರುವ ಅವರು ಸಿಂಗಾಪುರ ಓಪನ್‌ನಲ್ಲಿ ಫೈನಲಿಗೇರಿದ್ದು ಭಾರೀ ಫಾರ್ಮ್ನಲ್ಲಿದ್ದಾರೆ. 

ಸಿಂಗಾಪುರದಲ್ಲಿ ಶ್ರೀಕಾಂತ್‌ ಅವರನ್ನು ಕೆಡಹಿ ಚೊಚ್ಚಲ ಸೂಪರ್‌ ಸೀರೀಸ್‌ನ ಪ್ರಶಸ್ತಿ ಜಯಿಸಿದ್ದ 15ನೇ ಶ್ರೇಯಾಂಕದ ಬಿ.ಎಸ್‌. ಪ್ರಣಯ್‌ ಮೊದಲ ಸುತ್ತಿನಲ್ಲಿ ಹಾಂಕಾಂಗ್‌ನ ವೆಯಿ ನಾನ್‌ ಅವರನ್ನು ಹಾಗೂ ಅಜಯ್‌ ಜಯರಾಮ್‌ ಅವರು ಆಸ್ಟ್ರೀಯದ ಲುಕಾ ವ್ರಾಬರ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ಚೊಚ್ಚಲ ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿರುವ ಸಮೀರ್‌ ವರ್ಮ ಅವರಿಗೆ ಮುಖ್ಯ ಡ್ರಾಕ್ಕೆ ನೇರ ಪ್ರವೇಶ ನೀಡಲಾಗಿದ್ದು ಮೊದಲ ಸುತ್ತಿನಲ್ಲಿ ಸ್ಪೇನ್‌ನ ಪಾಬ್ಲೊ ಅಬಿಯನ್‌ ಅವರೊಂದಿಗೆ ಮುಖಾಮುಖೀಯಾಗಲಿದ್ದಾರೆ.

ಟಾಪ್ ನ್ಯೂಸ್

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

d-k-shi

ಮೋದಿ ಹೆಬ್ಬೆಟ್ಟ್ ಗಿರಾಕಿ ಎಂದ ಕಾಂಗ್ರೆಸ್ ಟ್ವೀಟ್ ಗೆ ಡಿಕೆ ಶಿವಕುಮಾರ್ ವಿಷಾದ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

gjhgfds

ಓಟಿಟಿಯಲ್ಲಿ ‘ಸಲಗ’ ದರ್ಶನವಿಲ್ಲ

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ್ವಿತೀಯ ಪ್ರಯತ್ನದಲ್ಲಿ ಕಪ್‌ ಗೆದ್ದ ಪಾಕ್‌

ದ್ವಿತೀಯ ಪ್ರಯತ್ನದಲ್ಲಿ ಕಪ್‌ ಗೆದ್ದ ಪಾಕ್‌

ಸಯ್ಯದ್‌ ಮುಷ್ತಾಕ್‌ ಅಲಿ’ ಟಿ20: ರಹಾನೆ ಮುಂಬಯಿ ನಾಯಕ

ಸಯ್ಯದ್‌ ಮುಷ್ತಾಕ್‌ ಅಲಿ’ ಟಿ20: ರಹಾನೆ ಮುಂಬಯಿ ನಾಯಕ

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶನ್‌, ರಾಹುಲ್‌

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

ಬಿಎಂಡಬ್ಲ್ಯು ಕಾರು ಖರೀದಿಸಿದ ಕ್ರಿಕೆಟಿಗ ಪೃಥ್ವಿ ಶಾ

ಬಿಎಂಡಬ್ಲ್ಯು ಕಾರು ಖರೀದಿಸಿದ ಕ್ರಿಕೆಟಿಗ ಪೃಥ್ವಿ ಶಾ

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

4

ಮೆರವಣಿಗೆಗೆ ತಡೆ; ಮುಸ್ಲಿಮರ ಆಕ್ರೋಶ

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

3

ನಿಯಮ ಪಾಲಿಸಿ ಜಾತ್ರೆ ನಡೆಸಿ

2

ಪುನರ್ವಸತಿ-ಕಾಳಜಿ ಕೇಂದ್ರ ಪ್ರಾರಂಭಕ್ಕೆ ಮನವಿ

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.