ವನಿತಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಕ್ವಾ.ಫೈನಲ್‌ಗೆ ಜಮುನಾ, ಲವ್ಲಿನಾ

Womens World Boxing Championship

Team Udayavani, Oct 10, 2019, 5:14 AM IST

ಹೊಸದಿಲ್ಲಿ: ರಶ್ಯದಲ್ಲಿ ನಡೆಯುತ್ತಿರುವ ವನಿತಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೇನ್‌ (69 ಕೆಜಿ) ಮತ್ತು ಜಮುನಾ ಬೋರೊ (54 ಕೆಜಿ) ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ಮೊದಲ ಸಲ ವಿಶ್ವ ಚಾಂಪಿ ಯನ್‌ಶಿಪ್‌ನಲ್ಲಿ ಕಣಕ್ಕಿಳಿದ ಜಮುನಾ ಬೋರೊ ಆಲ್ಜೀರಿಯಾದ 5ನೇ ಶ್ರೇಯಾಂಕಿತ ಬಾಕ್ಸರ್‌ ಔದಾದ್‌ ಫೌ ಅವರನ್ನು ಮಣಿಸಿದರು. ಫೌ ಆಫ್ರಿಕನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಸಾಧಕಿಯಾಗಿದ್ದಾರೆ. 3ನೇ ಶ್ರೇಯಾಂಕದ ಲವ್ಲಿನಾ ಬೊರ್ಗೊ ಹೇನ್‌ ಮೊರೊಕ್ಕೋದ ಔಮಾಯಾ¾ ಬೆಲ್‌ ಅಬಿಬ್‌ ವಿರುದ್ಧ 5-0 ಗೆಲುವು ಸಾಧಿಸಿದರು.

ಇಂದು ಕ್ವಾರ್ಟರ್‌ ಫೈನಲ್‌
ಗುರುವಾರ ನಡೆಯುವ ಕ್ವಾರ್ಟರ್‌ ಫೈನಲ್‌ ಕಾಳಗದಲ್ಲಿ ಜಮುನಾ ಬೋರೊ ಜರ್ಮನಿಯ ಉರ್ಸುಲಾ ಗೋತ್ಲಾಬ್‌ ಅವರನ್ನು ಎದುರಿಸಲಿದ್ದಾರೆ. ದಿನದ ಇನ್ನೊಂದು ಸ್ಪರ್ಧೆಯಲ್ಲಿ ಉರ್ಸುಲಾ ಯುರೋಪಿಯನ್‌ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತೆ, 4ನೇ ಶ್ರೇಯಾಂಕದ ಬೆಲರೂಸ್‌ ಎದುರಾಳಿ ಯುಲಿಯಾ ಅಪನಾಸೋವಿಕ್‌ ವಿರುದ್ಧ 3-2 ಅಂತರದ ಮೇಲುಗೈ ಸಾಧಿಸಿದರು.

ಕಳೆದ ಸಲ ಕಂಚಿನ ಪದಕ ಜಯಿಸಿದ್ದ ಲವಿÉನಾ ಬೊರ್ಗೊಹೇನ್‌ ಪೋಲೆಂಡ್‌ನ‌ 6ನೇ ಶ್ರೇಯಾಂಕದ ಬಾಕ್ಸರ್‌ ಕ್ಯಾರೋಲಿನಾ ಕೊಸೆjàವ್‌ಸ್ಕಾ ವಿರುದ್ಧ ಸೆಣಸಲಿದ್ದಾರೆ. ಕಳೆದ ವರ್ಷದ ಯುರೋಪಿಯನ್‌ ಗೇಮ್ಸ್‌ನಲ್ಲಿ ಕೊಸೆjàವ್‌ಸ್ಕಾ ಚಿನ್ನದ ಪದಕ ಜಯಿಸಿದ್ದರು.

ಭಾರತದ 5 ಮಂದಿ…
ಇವರಿಬ್ಬರ ಮುನ್ನಡೆಯೊಂದಿಗೆ ಭಾರತದ ಒಟ್ಟು 5 ಮಂದಿ ಈ ಪ್ರತಿಷ್ಠಿತ ಕೂಟದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ದಂತಾಯಿತು. ಉಳಿದ ವರೆಂದರೆ, 6 ಬಾರಿಯ ಚಾಂಪಿಯನ್‌ ಎಂ.ಸಿ. ಮೇರಿ ಕೋಮ್‌ (51 ಕೆಜಿ), ಮಂಜುರಾಣಿ (48 ಕೆಜಿ) ಮತ್ತು ಕವಿತಾ ಚಹಲ್‌ (+81 ಕೆಜಿ).

+81 ಕೆಜಿ ವಿಭಾಗದಲ್ಲಿ ಕವಿತಾ ಚಹಲ್‌ಒಂದೂ ಪಂದ್ಯವಾಡದೆ ನೇರವಾಗಿ ಕ್ವಾ. ಫೈನಲ್‌ ತಲುಪಿರುವುದು ವಿಶೇಷ. ಅವರ ವಿಭಾಗದಲ್ಲಿ ಹೆಚ್ಚು ಮಂದಿ ಸ್ಪರ್ಧಿಗಳಿಲ್ಲದಿರುವುದೇ ಇದಕ್ಕೆ ಕಾರಣ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮನೆಯ ಹೃದಯಭಾಗವಾದ ಲಿವಿಂಗ್‌ ರೂಮ್‌ನಲ್ಲಿ ಬಹುತೇಕ ಸಮಯವನ್ನು ಕಳೆಯಲಾಗುತ್ತದೆ. ಊಟ, ಹರಟೆ, ಮಾತುಕತೆ ಸಹಿತ ಮತ್ತಿತರ ಸಂಗತಿಗಳು ಜರಗುವುದು ಲಿವಿಂಗ್‌ ರೂಮ್‌ನಲ್ಲಿ....

  • ಬೆಂಗಳೂರು: ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಆಧುನಿಕ ಸ್ಪರ್ಶ ಕೊಟ್ಟು, ಅವುಗಳನ್ನು ಓದುಗ ಸ್ನೇಹಿ ಮತ್ತು ಜನಸ್ನೇಹಿ ಜ್ಞಾನ ಕೇಂದ್ರಗಳನ್ನಾಗಿ ಮಾಡಲು ಗ್ರಾಮೀಣಾಭಿವೃದ್ಧಿ...

  • ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ನಡೆಗೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ....

  • ಧಾರವಾಡ: ವಿದ್ಯಾನಗರಿಯ ವಿದ್ಯಾಕೇಂದ್ರ ಕರ್ನಾಟಕ ಕಲಾ ಕಾಲೇಜಿನ ಮೈದಾನದಲ್ಲೀಗ ಕೆಮ್ಮಣ್ಣಿನ ಕುಸ್ತಿ ಅಖಾಡ ಸಜ್ಜಾಗಿದೆ. ತೊಡೆ ತಟ್ಟುವ ಎದುರಾಳಿಗಳ ಕುಸ್ತಿಯ...

  • ಶಿವರಾತ್ರಿ ಪ್ರಯುಕ್ತ ರಾಜ್ಯದ ಹಲವೆಡೆ ಶುಕ್ರವಾರ ಮುಂಜಾನೆಯಿಂದಲೇ ಶಿವ ದೇಗುಲಗಳಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಪುರಾಣ ಪ್ರಸಿದ್ಧ ಗೋಕರ್ಣ...