ಸಾಧನೆಯ ಶಿಖರದಲ್ಲಿ ಸಿಂಧು ಸ್ವರ್ಣ ಪತಾಕೆ


Team Udayavani, Aug 26, 2019, 2:57 PM IST

sindhu

ಆಕೆ ಛಲ ಬಿಡದ ಆಟಗಾರ್ತಿ. ಪ್ರತೀ ಪಂದ್ಯ ಗೆಲ್ಲಬೇಕೆಂದು ಹೋರಾಡುವ ದಿಟ್ಟೆ, ಆದರೂ ವಿಶ್ವ ಚಾಂಪಿಯನ್‌ ಶಿಪ್ ಫೈನಲ್‌ ಪ್ರಶಸ್ತಿ ಮಾತ್ರ ಮರೀಚಿಕೆಯೇ ಆಗಿತ್ತು. ಕಳೆದ ಎರಡು ಬಾರಿ ಫೈನಲ್‌ ಗೆ ಬಂದರೂ ಎದುರಾಳಿಯು ಸ್ವರ್ಣ ಕಿರೀಟ ತೊಡುವುದನ್ನೇ ನೋಡಬೇಕಾಗಿತ್ತು. ಆದರೆ ಈ ಬಾರಿ ಮಾತ್ರ ಎದುರಾಳಿಗೆ ಯಾವ ಕ್ಷಣದಲ್ಲೂ ಅವಕಾಶವೇ ನೀಡದೇ ಆಡಿ ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್‌  ಅಂಗಳದಲ್ಲಿ ಮೆರೆದಾಡಿದರು. ಪುಸರ್ಲ ವೆಂಕಟ ಸಿಂಧು ಈಗ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್.‌

ರವಿವಾರ ಬಸೆಲ್‌ ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಸಿಂಧು, ವಿಶ್ವ ಶ್ರೇಷ್ಠ ಅಟಗಾರ್ತಿ ಜಪಾನಿನ ನೊಜೋಮಿ ಒಕುಹಾರಾರನ್ನು ಕೇವಲ 38 ನಿಮಿಷಗಳ ಆಟದಲ್ಲಿ ಸೋಲಿಸಿ ಹಳೇಯ ಸೋಲಿಗೆ ಸೇಡು ತೀರಿಸಿದರು. 2017ರ ವಿಶ್ವ ಚಾಂಪಿಯನ್‌ ಶಿಪ್‌ ಫೈನಲ್‌ ನಲ್ಲಿ ಸಿಂಧು ಇದೇ ನೊಜೊಮಿ ಒಕುಹಾರಾ ವಿರುದ್ದದ ಸೋಲನುಭವಿಸಿದ್ದರು. ಅಂದು ಬೇಸರದಿಂದ ಕೋರ್ಟ್‌ ಬಿಟ್ಟು ನಡೆದಿದ್ದ ಸಿಂಧು ಈ ಬಾರಿ ಸ್ವರ್ಣ ಮುಕುಟದೊಂದಿಗೆ ಭಾರತದ ಧ್ವಜವನ್ನು ಸ್ವಿಸ್‌ ನೆಲದಲ್ಲಿ ಹಾರಾಡುವಂತೆ ಮಾಡಿದರು.

2009ರಲ್ಲಿ ಸಬ್‌ ಜೂನಿಯರ್‌ ಏಶ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ ನಲ್ಲಿ ಕಂಚು ಗೆದ್ದ ಪಿ.ವಿ. ಸಿಂಧು ಎಂಬ ಹೈದರಾಬಾದ್‌ ನ ಹುಡುಗಿಯ ವಿಶ್ವ ಚಾಂಪಿಯನ್‌ ಆಗುವ ಪಯಣ ಸುಖದ ಹಾದಿಯಲ್ಲ. ಅದು ಹತ್ತು ವರ್ಷದ ಕಠಿಣ ತಪಸ್ಸು. 2013ರ ಮಲೇಶ್ಯಾ ಓಪನ್‌, ಮಕಾವ್‌ ಗ್ರಾಂಡ್‌ ಪಿಕ್ಸ್‌, 2014ರ  ಕಾಮನ್‌ ವೆಲ್ತ್‌ ಸೆಮಿ ಮಫೈನಲ್‌ ಪ್ರವೇಶ, ವಿಶ್ವ ಚಾಂಪಿಯನ್‌ ಶಿಪ್‌ ಕಂಚು, 2015ರಲ್ಲಿ ಮತ್ತೆ ಮಕಾವ್‌ ಗ್ರಾಂಡ್‌ ಪಿಕ್ಸ್‌ ಕಿರೀಟ, 2016ರ ಒಲಿಂಪಿಕ್ಸ್‌ ಬೆಳ್ಳಿ ಪದಕ. ಹೀಗೆ ಎಷ್ಟೂ ಪದಕ ಗೆದ್ದರೂ ಸಿಂಧುಗೆ ವಿಶ್ವ ಚಾಂಪಿಯನ್‌ ಶಿಪ್‌ ಕಿರೀಟ ಮಾತ್ರ ಕೈಗೆಟುಕದ ಮುತ್ತಾಗಿತ್ತು.

2017ರಲ್ಲಿ ವಿಶ್ವ ಚಾಂಪಿಯನ್‌ ಶಿಪ್‌ ಫೈನಲ್‌ ಗೇರಿದರೂ ಅಲ್ಲಿ ನೊಜೊಮಿ ಒಕುಹಾರಾ ವಿರುದ್ದ ಕಠಿಣ ಹೋರಾಟ ನೀಡಿದರೂ ಪ್ರಶಸ್ತಿ ಮಾತ್ರ ಜಪಾನಿ ಆಟಾಗಾರ್ತಿಯ ಪಾಲಾಗಿತ್ತು. 2018ರ ಚಾಂಪಿಯನ್‌ ಶಿಪ್‌ ನಲ್ಲಿ ಮತ್ತೆ ಅದೇ ಜಪಾನಿ ಆಟಗಾರ್ತಿ ಸಿಂಧು ಎದುರಾಳಿಯಾಗಿ ಸಿಕ್ಕರು. ಆದರೆ ಈ ಬಾರಿ ಕ್ವಾರ್ಟರ್ ಫೈನಲ್‌ ನಲ್ಲಿ. 21-17, 21-19ರ ನೇರ ಸೆಟ್‌ ಗಳಿಂದ ಒಕುಹಾರಾರನ್ನು ಸೋಲಿಸಿದ ಸಿಂಧು ಮತ್ತೆ ಫೈನಲ್‌ ಗೇರಿದರು. ಈ ಬಾರಿ ಖಂಡಿತ ಚಾಂಪಿಯನ್‌ ಆಗುತ್ತಾರೆಂದು ಭಾರತೀಯ ಕ್ರೀಡಾಭಿಮಾನಿಗಳು ನಿರೀಕ್ಷೆ ಇಟ್ಟಿದ್ದರು. ಆದರೆ 2017ರಲ್ಲಿ ಇಂಡಿಯನ್‌ ಓಪನ್‌ ನಲ್ಲಿ ತಾನು ಸೋಲಿಸಿದ್ದ ಕ್ಯಾರೋಲಿನಾ ಮರಿನ್‌ ವಿರುದ್ಧ ಸೋತು ಮತ್ತೆ ಬೆಳ್ಳಿಪದಕಕ್ಕೆ ತೃಪ್ತಿ ಪಡಬೇಕಾಯಿತು.

ಹೀಗೆ ಹತ್ತು ವರ್ಷಗಳ ಕಠಿಣ ಪರಿಶ್ರಮ, ನಿರಂತರ ಸಾಧನೆಯಿಂದ ಇಂದು ಭಾರತದ ಹೆಮ್ಮೆಯ ಪಿ.ವಿ ಸಿಂಧು ವಿಶ್ವ ಚಾಂಪಿಯನ್‌ ಆಗಿ ಮೂಡಿದ್ದಾರೆ.

ಟಾಪ್ ನ್ಯೂಸ್

ಪಿಯು: ಈ ಬಾರಿ ಹೆಚ್ಚುವರಿ ಪ್ರಶ್ನೆಗಳು

ಪಿಯು: ಈ ಬಾರಿ ಹೆಚ್ಚುವರಿ ಪ್ರಶ್ನೆಗಳು

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ಪಂಚ ಚುನಾವಣೆಗೆ ಕಣ ಬಿರುಸು

ಪಂಚ ಚುನಾವಣೆಗೆ ಕಣ ಬಿರುಸು

2021: ಅತೀ ಉಷ್ಣದ ವರ್ಷ

2021: ಅತೀ ಉಷ್ಣದ ವರ್ಷ

ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಅಗತ್ಯ

ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಅಗತ್ಯ

ಪ್ರಜಾತಂತ್ರದ ಪಂಚಾಂಗದಲ್ಲಡಗಿದೆ ದೇಶದ ಭವಿಷ್ಯ

ಪ್ರಜಾತಂತ್ರದ ಪಂಚಾಂಗದಲ್ಲಡಗಿದೆ ದೇಶದ ಭವಿಷ್ಯ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌: ನಾಕೌಟ್‌ ಹಂತಕ್ಕೆ ಸಿಂಧು, ಪ್ರಣಯ್‌

ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌: ನಾಕೌಟ್‌ ಹಂತಕ್ಕೆ ಸಿಂಧು, ಪ್ರಣಯ್‌

Kane Williamson

ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟ: 3 ಭಾರತೀಯರಿಗೆ ಸ್ಥಾನ, ವಿರಾಟ್ ಗೆ ಜಾಗವಿಲ್ಲ

babar azam

ವರ್ಷದ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತೀಯರಿಗೆ ಸ್ಥಾನವಿಲ್ಲ! ಬಾಬರ್ ಗೆ ನಾಯಕತ್ವ

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

kl-rahul

ಮೊದಲ ಏಕದಿನ ಪಂದ್ಯದ ಸೋಲಿಗೆ ಇವರೇ ಕಾರಣ ಎಂದ ನಾಯಕ ರಾಹುಲ್

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಪಿಯು: ಈ ಬಾರಿ ಹೆಚ್ಚುವರಿ ಪ್ರಶ್ನೆಗಳು

ಪಿಯು: ಈ ಬಾರಿ ಹೆಚ್ಚುವರಿ ಪ್ರಶ್ನೆಗಳು

ಈ ವರ್ಷವೂ ಸಿಇಟಿ ಅನುಮಾನ

ಈ ವರ್ಷವೂ ಸಿಇಟಿ ಅನುಮಾನ

Untitled-1

ಕೋವಿಡ್ ಪ್ರಕರಣ ಏರಿಕೆ: ದ.ಕ. ಜಿಲ್ಲೆಯ 5 ಶಾಲೆಗಳಿಗೆ ರಜೆ

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ವಾರಾಂತ್ಯ ಕರ್ಫ್ಯೂ: ನಿಯಮ ಉಲ್ಲಂಘನೆ ಚಳವಳಿ: ಕೆನರಾ ಉದ್ಯಮಿಗಳ ಒಕ್ಕೂಟ ಎಚ್ಚರಿಕೆ

ವಾರಾಂತ್ಯ ಕರ್ಫ್ಯೂ: ನಿಯಮ ಉಲ್ಲಂಘನೆ ಚಳವಳಿ: ಕೆನರಾ ಉದ್ಯಮಿಗಳ ಒಕ್ಕೂಟ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.