ಆತಿಥೇಯ ರಶ್ಯ ತಂಡ ಅಧಿಕೃತ ಪ್ರಕಟ

Team Udayavani, Jun 6, 2018, 6:00 AM IST

z-16.jpg

ಮಾಸ್ಕೊ: 2018ರ ಫಿಫಾ ವಿಶ್ವಕಪ್‌ ಆರಂಭವಾಗಲು ಇನ್ನು ಕೇವಲ 10 ದಿನಗಳು ಬಾಕಿ ಉಳಿದಿದ್ದು ಭಾಗವಹಿಸುತ್ತಿರುವ 32 ತಂಡಗಳ 23 ಸದಸ್ಯರ ಪೂರ್ಣ ತಂಡ ಅಧಿಕೃತಗೊಂಡಿದೆ. ಈ ತಂಡಗಳ ಪಟ್ಟಿಯ ಅಧಿಕೃತ ಪ್ರಕಟನೆಯಿಂದಾಗಿ ಫಿಫಾ ವಿಶ್ವಕಪ್‌ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಒಟ್ಟಾರೆ 736 ಆಟಗಾರರು ತಮ್ಮ ತಂಡದ ಗೆಲುವಿಗಾಗಿ ಹೋರಾಡಲಿದ್ದಾರೆ. 

ಜೂನ್‌ 14ರಂದು ಇಲ್ಲಿನ ಲುಝಿ°ಕಿ ಕ್ರೀಡಾಂಗಣದಲ್ಲಿ ಆತಿಥೇಯ ರಷ್ಯಾ ತಂಡವು ಸೌದಿ ಅರೇಬಿಯಾ ತಂಡವನ್ನು ಎದುರಿಸುವ ಮೂಲಕ 21ನೇ ಫಿಫಾ ವಿಶ್ವಕಪ್‌ ಫ‌ುಟ್ಬಾಲ್‌ ಹಬ್ಬ ಆರಂಭವಾಗಲಿದೆ. 

ಆರ್ಜೆಂಟೀನಾದ ನಂಬರ್‌ ವನ್‌ ಗೋಲ್‌ಕೀಪರ್‌ ನಹುಯೆಲ್‌ ಗುಜ್ಮಾನ್‌ ಅವರಿಂದ ಹಿಡಿದು ಉರುಗ್ವೆಯ 23ನೇ ರ್‍ಯಾಂಕಿನ ಮಾರ್ಟಿನ್‌ ಸಿಲ್ವ ಅವರು ಈಗಾಗಲೇ ರಶ್ಯದ ನೆಲದಲ್ಲಿದ್ದು ಕಠಿನ ತರಬೇತಿಯಲ್ಲಿ ತೊಡಗಿದ್ದಾರೆ. ಇವರೆಲ್ಲರ ಆಟವನ್ನು ವಿಶ್ವಕಪ್‌ ಆರಂಭವಾಗುತ್ತಿದ್ದಂತೆ ನೋಡಬಹುದು. ಪ್ರತಿಯೊಂದು ತಂಡದಲ್ಲಿಯೂ ವಿಶ್ವಖ್ಯಾತಿಯ ಆಟಗಾರರು ಇರುವ ಕಾರಣ ಯಾವ ತಂಡ ಪ್ರಶಸ್ತಿ ಗೆಲ್ಲುತ್ತದೆ ಎಂದು ಹೇಳುವುದು ಕಷ್ಟ.

2014ರಲ್ಲಿ ಬ್ರಝಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಜರ್ಮನಿ ಪ್ರಶಸ್ತಿ ಜಯಿಸಿತ್ತು. ಪ್ರಶಸ್ತಿ ಗೆದ್ದ ತಂಡದಲ್ಲಿದ್ದ 9 ಮಂದಿ ರಶ್ಯದಲ್ಲಿಯೂ ಆಡಲಿದ್ದಾರೆ. ಇದೇ ವೇಳೆ ಆತಿಥ್ಯ ತಂಡವಾದ ರಷ್ಯಾದಲ್ಲಿ 16 ಮಂದಿಗಿದು ಚೊಚ್ಚಲ ಬಾರಿ ವಿಶ್ವಕಪ್‌ ಫೈನಲ್‌ನಲ್ಲಿ ಆಡುವ ಸಂಭ್ರಮವಾಗಿದೆ.

ಪೆನಾಲ್ಟಿ  ಕಾರ್ನರ್‌
ಅತೀ ಹಿರಿಯ ಆಟಗಾರ

45ರ ಹರೆಯದಲ್ಲೂ ವಿಶ್ವಕಪ್‌ ಫ‌ುಟ್ಬಾಲ್‌ ಕೂಟದಲ್ಲಿ ಆಡುತ್ತಾರೆಯೆ. ಯಾಕಾಗಬಾರದು ? ಈಜಿಪ್ಟ್ನ ಗೋಲ್‌ಕೀಪರ್‌ ಎಸ್ಸಾಮ್‌ ಎಲ್‌ ಹಾದರಿ ಅವರಿಗೆ ಪ್ರಾಯ ಒಂದು ಸಂಖ್ಯೆ ಮಾತ್ರ. ಒಂದು ವೇಳೆ ಅವರು ರಶ್ಯದಲ್ಲಿ ನಡೆಯುವ ವಿಶ್ವಕಪ್‌ ಫ‌ುಟ್ಬಾಲ್‌ ಕೂಟದ ಅಂತಿಮ ತಂಡದಲ್ಲಿ ಕಾಣಿಸಿಕೊಂಡರೆ ಅವರು ವಿಶ್ವಕಪ್‌ ಫ‌ುಟ್ಬಾಲ್‌ನಲ್ಲಿ ಆಡಿದ ಅತ್ಯಂತ ಹಿರಿಯ ಆಟಗಾರ ಎಂದೆನಿಸಿಕೊಳ್ಳಲಿದ್ದಾರೆ. ಈಜಿಪ್ಟ್ ಪರ 156 ಪಂದ್ಯಗಳಲ್ಲಿ ಆಡಿರುವ ಹಾದರ್‌ ತಂಡಕ್ಕೆ ಆಯ್ಕೆಯಾಗುವ ಸಮರ್ಥ ಗೋಲ್‌ಕೀಪರ್‌ ಆಗಿದ್ದಾರೆ. ಸದ್ಯ ಕೊಲಂಬಿಯದ ಗೋಲ್‌ಕೀಪರ್‌ ಫ‌ರೀದ್‌ ಮೊಂಡ್ರಾಗನ್‌ ವಿಶ್ವಕಪ್‌ ಫ‌ುಟ್ಬಾಲ್‌ನಲ್ಲಿ ಆಡಿದ ಅತೀ ಹಿರಿಯ ಆಟಗಾರರಾಗಿದ್ದರು. 2014ರಲ್ಲಿ ಬ್ರಝಿಲ್‌ನಲ್ಲಿ ಜಪಾನ್‌ ವಿರುದ್ಧದ ಪಂದ್ಯವನ್ನಾಡಿದಾಗ ಅವರಿಗೆ 43 ವರ್ಷ ಮತ್ತು 3 ದಿನವಾಗಿತ್ತು. 

32 ತಂಡಗಳ 23 ಆಟಗಾರರ ಪಟ್ಟಿ  ಲಭ್ಯ
ವಿಶ್ವಕಪ್‌ನಲ್ಲಿ ಆಡಲಿರುವ 736 ಆಟಗಾರರು

ಟಾಪ್ ನ್ಯೂಸ್

ವೈರಲ್ ಆಗುತ್ತಿದೆ ಕತ್ರಿನಾ ಕೈಫ್ ಮೆಹಂದಿ ಫೋಟೋ: ಅಸಲಿಯತ್ತೇನು?

ವೈರಲ್ ಆಗುತ್ತಿದೆ ಕತ್ರಿನಾ ಕೈಫ್ ಮೆಹಂದಿ ಫೋಟೋ: ಅಸಲಿಯತ್ತೇನು?

ಭಾರತದಲ್ಲಿ 24ಗಂಟೆಯಲ್ಲಿ 9,419 ಕೋವಿಡ್ ಪ್ರಕರಣ ಪತ್ತೆ, 159 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 9,419 ಕೋವಿಡ್ ಪ್ರಕರಣ ಪತ್ತೆ, 159 ಮಂದಿ ಸಾವು

2shasti

ನಾಗ‌ ಶ್ರೇಷ್ಠ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ: ಇಂದು ಚಂಪಾ ಷಷ್ಠೀ

ಎಂಐ-17ವಿ5 ದಾರಿ ತಪ್ಪಿದ ಶೂರ; ಈ ಹೆಲಿಕಾಪ್ಟರ್‌ನ ವಿಶೇಷತೆಗಳೇನು?

ಎಂಐ-17ವಿ5 ದಾರಿ ತಪ್ಪಿದ ಶೂರ; ಈ ಹೆಲಿಕಾಪ್ಟರ್‌ನ ವಿಶೇಷತೆಗಳೇನು?

ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಸಕಲೇಶಪುರದಲ್ಲೂ ನಡೆದಿತ್ತು ಹೆಲಿಕಾಪ್ಟರ್‌ ದುರಂತ

29 ವರ್ಷಗಳ ಹಿಂದೆ ಸಕಲೇಶಪುರದಲ್ಲೂ ಸೇನಾ ಹೆಲಿಕಾಪ್ಟರ್ ಪತನ

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ಟೀಮ್ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ

ಏಕದಿನ ನಾಯಕತ್ವ , ಟೆಸ್ಟ್‌ ಉಪನಾಯಕತ್ವ ರೋಹಿತ್‌ ಪಾಲು

ಆ್ಯಶಸ್‌: ಗಬ್ಟಾದಲ್ಲಿ ಅಬ್ಬರಿಸಿದ ಪ್ಯಾಟ್‌ ಕಮಿನ್ಸ್‌

ಆ್ಯಶಸ್‌: ಗಬ್ಟಾದಲ್ಲಿ ಅಬ್ಬರಿಸಿದ ಪ್ಯಾಟ್‌ ಕಮಿನ್ಸ್‌

ಒಲಿಂಪಿಕ್ಸ್‌: ರಾಜತಾಂತ್ರಿಕರ ಬಹಿಷ್ಕಾರ

ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ರಾಜತಾಂತ್ರಿಕ ಬಹಿಷ್ಕಾರಕ್ಕೆ ಆಸ್ಟ್ರೇಲಿಯಾ,ಅಮೆರಿಕ ನಿರ್ಧಾರ

ಆಸ್ಟ್ರೇಲಿಯನ್‌ ಓಪನ್‌: ಸೆರೆನಾ ವಿಲಿಯಮ್ಸ್‌ ಗೈರು

ಆಸ್ಟ್ರೇಲಿಯನ್‌ ಓಪನ್‌: ಸೆರೆನಾ ವಿಲಿಯಮ್ಸ್‌ ಗೈರು

MUST WATCH

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

udayavani youtube

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಹೊಸ ಸೇರ್ಪಡೆ

ವೈರಲ್ ಆಗುತ್ತಿದೆ ಕತ್ರಿನಾ ಕೈಫ್ ಮೆಹಂದಿ ಫೋಟೋ: ಅಸಲಿಯತ್ತೇನು?

ವೈರಲ್ ಆಗುತ್ತಿದೆ ಕತ್ರಿನಾ ಕೈಫ್ ಮೆಹಂದಿ ಫೋಟೋ: ಅಸಲಿಯತ್ತೇನು?

6pepole

ಪುಣೆ-ಸೊಲ್ಲಾಪುರ ಗುಳೆ ಹೊರಟ ಜನ

5aids

ಏಡ್ಸ್ ಮುಕ್ತ ವಿಶ್ವಕ್ಕೆ ಮುನ್ನೆಚ್ಚರಿಕೆ ಅವಶ್ಯ

ಭಾರತದಲ್ಲಿ 24ಗಂಟೆಯಲ್ಲಿ 9,419 ಕೋವಿಡ್ ಪ್ರಕರಣ ಪತ್ತೆ, 159 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 9,419 ಕೋವಿಡ್ ಪ್ರಕರಣ ಪತ್ತೆ, 159 ಮಂದಿ ಸಾವು

4toilet

ಶೌಚಾಲಯ ಕಟ್ಟಲು ಇಒ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.