ಶ್ರೀಲಂಕಾ ಬಾಂದಳದಲ್ಲಿ ಜಯ ಸೂರ್ಯ


Team Udayavani, May 22, 2019, 9:31 AM IST

arjuna

ಹೆಚ್ಚು ಕಡಿಮೆ ಒಂದು ದಶಕದ ಬಳಿಕ ಭಾರತ ಮತ್ತು ಪಾಕಿಸ್ಥಾನದ ಜಂಟಿ ಆತಿಥ್ಯದಲ್ಲಿ ಸಾಗಿದ ವಿಶ್ವಕಪ್‌ ಪಂದ್ಯಾವಳಿ ಇದು. ಈ 2 ರಾಷ್ಟ್ರಗಳೊಂದಿಗೆ ಶ್ರೀಲಂಕಾ ಕೂಡ ಕೈಜೋಡಿಸಿತು. ಹೀಗೆ 3 ದೇಶಗಳು ಜಂಟಿಯಾಗಿ ಮೊದಲ ಬಾರಿಗೆ ನಡೆಸಿಕೊಟ್ಟ  ವರ್ಲ್ಡ್ಕಪ್‌ ಟೂರ್ನಿ ಇದಾಗಿತ್ತು.

ಅತ್ಯಧಿಕ 12 ತಂಡಗಳು ಭಾಗವಹಿ ಸಿದ್ದೂ ಈ ಕೂಟದ ವಿಶೇಷ. ಟೆಸ್ಟ್‌ ಮಾನ್ಯತೆ ಪಡೆದ 9 ರಾಷ್ಟ್ರಗಳೊಂದಿಗೆ ಯುಎಇ, ಕೀನ್ಯಾ ಮತ್ತು ನೆದರ್‌ಲ್ಯಾಂಡ್‌ ಅವಕಾಶ ಪಡೆದವು. ಇವುಗಳಲ್ಲಿ ಯುಎಇ ಐಸಿಸಿ ಟ್ರೋಫಿ ಚಾಂಪಿಯನ್‌ ಆಗಿತ್ತು. ಕೀನ್ಯಾ ಮತ್ತು ನೆದರ್‌ಲ್ಯಾಂಡ್‌ 2ನೇ ಹಾಗೂ 3ನೇ ಸ್ಥಾನಿಯಾಗಿದ್ದವು. ರೌಂಡ್‌ ರಾಬಿನ್‌ ಬದಲು ಮತ್ತೆ ಗ್ರೂಪ್‌ ಮಾದರಿಗೆ ಆದ್ಯತೆ ನೀಡಲಾಯಿತು.
ಆತಿಥೇಯ ತಂಡಗಳಲ್ಲಿ ಪಾಕಿಸ್ಥಾನ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಹೊಡೆತ ತಾಳಲಾಗದೆ ಮಗುಚಿತು. ಭಾರತ ಸೆಮಿಪೈನಲ್‌ನಲ್ಲಿ ಕೋಲ್ಕತಾ ವೀಕ್ಷಕರ ಆಕ್ರೋಶಕ್ಕೆ ತುತ್ತಾಗಿ ಹೊರಬಿತ್ತು. ಶ್ರೀಲಂಕಾ ಚಾಂಪಿಯ ನ್‌ ಆಗಿ ಹೊರ ಹೊಮ್ಮಿ ತು! ಆತಿಥೇಯ ರಾಷ್ಟ್ರಕ್ಕೆ ವಿಶ್ವಕಪ್‌ ಒಲಿಯದು ಎಂಬ ನಂಬಿಕೆ ಸುಳ್ಳು ಮಾಡಿದ್ದು ಶ್ರೀಲಂಕಾದ ಹೆಗ್ಗಳಿಕೆ.

ಆಸೀಸ್‌, ವಿಂಡೀಸ್‌ ಹಿಂದೇಟು
ಆಗ ಶ್ರೀಲಂಕಾದಲ್ಲಿ ಎಲ್‌ಟಿಟಿಇ ಭೀತಿ ಇದ್ದುದರಿಂದ ಬಹುತೇಕ ಪ್ರವಾಸಿ ತಂಡಗಳಲ್ಲಿ ಆತಂಕ ಮೂಡಿಸಿತ್ತು. ಹೀಗಾಗಿ ಕೊಲಂಬೋದಲ್ಲಿ ಲೀಗ್‌ ಪಂದ್ಯ ಆಡಬೇಕಿದ್ದ ಆಸ್ಟ್ರೇಲಿಯ ಮತ್ತು ವೆಸ್ಟ್‌ ಇಂಡೀಸ್‌ ಲಂಕೆಗೆ ತೆರಳಲು ಹಿಂದೇಟು ಹಾಕಿದವು. ಲಂಕೆಯಲ್ಲಿ ಆಡಲು ಭೀತಿಪಡಬೇಕಿಲ್ಲ ಎಂದು ಭಾರತ-ಶ್ರೀಲಂಕಾ ಕೊಲಂಬೋದಲ್ಲಿ ಅಭ್ಯಾಸ ಪಂದ್ಯವೊಂದನ್ನು ಆಡಿ ಧೈರ್ಯ ತುಂಬುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಲಂಕಾ ಪುಕ್ಕಟೆಯಾಗಿ 4 ಅಂಕ ಪಡೆಯಿತು.

ಲಂಕಾ ಅಜೇಯ ಅಭಿಯಾನ
ಶ್ರೀಲಂಕಾ ಈ 4 ಅಂಕಗಳ ನೆರವಿನಿಂದಲೇ ಮುಂದಡಿ ಇರಿಸಿ ಇತಿಹಾಸ ನಿರ್ಮಿಸಿತು ಎಂದು ಹೇಳಿದರೆ ತಪ್ಪಾಗುತ್ತದೆ. ಆಗಿನ ಅರ್ಜುನ ರಣ ತುಂಗ ಸಾರಥ್ಯದ ಶ್ರೀಲಂಕಾ ತಂಡದ ಸಾಮರ್ಥ್ಯವೇ ಹಾಗಿತ್ತು. ಆಟಗಾರರೆಲ್ಲರೂ ಅಮೋಘ ಫಾರ್ಮ್ ನಲ್ಲಿದ್ದರು. ಜಯಸೂರ್ಯ, ಕಲುವಿತರಣ, ಅರವಿಂದ ಡಿ ಸಿಲ್ವ, ಗುರುಸಿನ್ಹ, ರಣತುಂಗ, ತಿಲಕರತ್ನೆ, ಮಹಾನಾಮ, ವಾಸ್‌, ಮುರಳೀಧರನ್‌ ಹೀಗೆ ಒಬ್ಬರಿಗಿಂತ ಒಬ್ಬರು ಮಿಗಿಲು.  ಹಾಗೆಯೇ ಆಸೀಸ್‌, ವಿಂಡೀಸ್‌ ತಮ್ಮಲ್ಲಿ ಆಡಲು ಬರಲಿಲ್ಲ ಎಂಬ ಸಂಗತಿ ಅವರ ಛಲವನ್ನು ದೊಡ್ಡ ಮಟ್ಟದಲ್ಲೇ ಬಡಿದೆಬ್ಬಿಸಿತ್ತು.

ಲೀಗ್‌ನಲ್ಲಿ ಜಿಂಬಾಬ್ವೆ, ಭಾರತ ಮತ್ತು ಕೀನ್ಯಾವನ್ನು ಮಣಿಸಿದ ಶ್ರೀಲಂಕಾ, ಫೈಸಲಾಬಾದ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಇಂಗ್ಲೆಂಡನ್ನು ಉರುಳಿಸಿತು. ಸೆಮಿಫೈನಲ್‌ನಲ್ಲಿ ಮತ್ತೆ ಭಾರತದ ಮೇಲೆ ಸವಾರಿ ಮಾಡಿತು. ಲಂಕೆಯಲ್ಲಿ ಲೀಗ್‌ ಪಂದ್ಯ ಆಡಲು ನಿರಾಕರಿಸಿದ ಆಸ್ಟ್ರೇಲಿಯವನ್ನೇ ಲಾಹೋರ್‌ ಫೈನ ಲ್‌ನಲ್ಲಿ ಸದೆಬಡಿದು ಇತಿಹಾಸ ನಿರ್ಮಿಸಿತು.

ವಿಶ್ವಕಪ್‌ ಕೂಟದದಲ್ಲಿ ಒಂದೂ ಸೋಲು ಕಾಣದೆ ಕಪ್‌ ಎತ್ತಿದ ದ್ವಿತೀಯ ರಾಷ್ಟ್ರವೆಂಬ ಹೆಗ್ಗಳಿಕೆ ಲಂಕೆಯದ್ದಾಯಿತು. ಮೊದಲೆರಡು ವಿಶ್ವಕಪ್‌ಗ್ಳಲ್ಲಿ ವೆಸ್ಟ್‌ ಇಂಡೀಸ್‌ ಈ ಸಾಧನೆ ಮಾಡಿತ್ತು.

ಡಿ ಸಿಲ್ವ ಫೈನಲ್‌ ಮಿಂಚು
ಫೈನಲ್‌ನಲ್ಲಿ ಲಂಕಾ ಗೆಲುವಿನ ಹೀರೋ ಆಗಿ ಮೆರೆದವರು ಅರವಿಂದ ಡಿ ಸಿಲ್ವ. 42ಕ್ಕೆ 3 ವಿಕೆಟ್‌ ಮತ್ತು ಅಜೇಯ 107 ರನ್‌ ಡಿ ಸಿಲ್ವ ಅವರ ಆಲ್‌ರೌಂಡ್‌ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಜಯಸೂರ್ಯ ಮತ್ತು ಕಲುವಿತರಣ ಮತ್ತೆ ವಿಫ‌ಲರಾದ ಬಳಿಕ ಗುರುಸಿನ್ಹ, ಡಿ ಸಿಲ್ವ ಮತ್ತು ರಣತುಂಗ ಸೇರಿಕೊಂಡು ಟೇಲರ್‌ ಪಡೆಯ ಮೇಲೆ ಸವಾರಿ ಮಾಡಿದರು.

ಹಲವು ವೈಶಿಷ್ಟಗಳ ವಿಶ್ವಕಪ್‌
* ಮೊದಲ ಸಲ 3 ರಾಷ್ಟ್ರಗಳ ಆತಿಥ್ಯ; ಭಾರತ, ಪಾಕಿಸ್ಥಾನ ಜತೆಗೆ ಶ್ರೀಲಂಕಾ ಪಾಲುದಾರಿಕೆ
* ಅತ್ಯಧಿಕ 12 ತಂಡಗಳು ಭಾಗಿ; ವಿಲ್ಸ್‌ ಪ್ರಾಯೋಜಕತ್ವ; “ಶಾಂತಿಗಾಗಿ ಕ್ರಿಕೆಟ್‌’ ಧ್ಯೇಯ
* ಲಂಕಾದಲ್ಲಿ ಭೀತಿಯ ವಾತಾವರಣ; ಆಡಲು ನಿರಾಕರಿಸಿದ ಆಸ್ಟ್ರೇಲಿಯ, ವೆಸ್ಟ್‌ ಇಂಡೀಸ್‌
* ಅರ್ಜುನ ಸಾರಥ್ಯದಲ್ಲಿ ಮೆರೆದ ಲಂಕಾ; ದ್ವೀಪರಾಷ್ಟ್ರ ಕ್ರಿಕೆಟಿಗರ ಅದ್ವಿತೀಯ ಸಾಧನೆ

ಸ್ಕೊರ್ ಕಾರ್ಡ್

ಆಸ್ಟ್ರೇಲಿಯ
ಮಾರ್ಕ್‌ ಟೇಲರ್‌ ಸಿ ಜಯಸೂರ್ಯ ಬಿ ಡಿ ಸಿಲ್ವ 74
ಮಾರ್ಕ್‌ ವೋ ಸಿ ಜಯಸೂರ್ಯ ಬಿ ವಾಸ್‌ 12
ರಿಕಿ ಪಾಂಟಿಂಗ್‌ ಬಿ ಡಿ ಸಿಲ್ವ 45
ಸ್ಟೀವ್‌ ವೋ ಸಿ ಡಿ ಸಿಲ್ವ ಬಿ ಧರ್ಮಸೇನ 13
ಶೇನ್‌ ವಾರ್ನ್ ಸ್ಟಂಪ್ಡ್ ಕಲುವಿತರಣ ಬಿ ಮುರಳಿ 2
ಸ್ಟುವರ್ಟ್‌ ಲಾ ಸಿ ಡಿ ಸಿಲ್ವ ಬಿ ಜಯಸೂರ್ಯ 22
ಮೈಕಲ್‌ ಬೆವನ್‌ ಔಟಾಗದೆ 36
ಇಯಾನ್‌ ಹೀಲಿ ಬಿ ಡಿ ಸಿಲ್ವ 2
ಪಾಲ್‌ ರೀಫೆಲ್‌ ಔಟಾಗದೆ 13
ಇತರ 22
ಒಟ್ಟು (7 ವಿಕೆಟಿಗೆ) 241
ವಿಕೆಟ್‌ ಪತನ: 1-36, 2-137, 3-152, 4-156, 5-170, 6-202, 5-205.
ಬೌಲಿಂಗ್‌:
ಪ್ರಮೋದಯ ವಿಕ್ರಮಸಿಂಘೆ 7-0-38-0
ಚಮಿಂಡ ವಾಸ್‌ 6-1-30-1
ಮುತ್ತಯ್ಯ ಮುರಳೀಧರನ್‌ 10-0-31-1
ಕುಮಾರ ಧರ್ಮಸೇನ 10-0-47-1
ಸನತ್‌ ಜಯಸೂರ್ಯ 8-0-43-1
ಅರವಿಂದ ಡಿ ಸಿಲ್ವ 9-0-42-3

ಶ್ರೀಲಂಕಾ
ಸನತ್‌ ಜಯಸೂರ್ಯ ರನೌಟ್‌ 9
ರೊಮೇಶ್‌ ಕಲುವಿತರಣ ಸಿ ಬೆವನ್‌ ಬಿ ಫ್ಲೆಮಿಂಗ್‌ 6
ಅಸಂಕ ಗುರುಸಿನ್ಹ ಬಿ ರೀಫೆಲ್‌ 65
ಅರವಿಂದ ಡಿ ಸಿಲ್ವ ಔಟಾಗದೆ 107
ಅರ್ಜುನ ರಣತುಂಗ ಔಟಾಗದೆ 47
ಇತರ 11
ಒಟ್ಟು (46.2 ಓವರ್‌ಗಳಲ್ಲಿ 3 ವಿಕೆಟಿಗೆ) 245
ವಿಕೆಟ್‌ ಪತನ: 1-12, 2-23, 3-148.
ಬೌಲಿಂಗ್‌:
ಗ್ಲೆನ್‌ ಮೆಕ್‌ಗ್ರಾತ್‌ 8.2-1-28-0
ಡೆಮೀನ್‌ ಫ್ಲೆಮಿಂಗ್‌ 6-0-43-1
ಶೇನ್‌ ವಾರ್ನ್ 10-0-58-0
ಪಾಲ್‌ ರೀಫೆಲ್‌ 10-0-49-1
ಮಾರ್ಕ್‌ ವೋ 6-0-35-0
ಸ್ಟೀವ್‌ ವೋ 3-0-15-0
ಮೈಕಲ್‌ ಬೆವನ್‌ 3-0-12-0

ಪಂದ್ಯಶ್ರೇಷ್ಠ: ಅರವಿಂದ ಡಿ ಸಿಲ್ವ
ಸರಣಿಶ್ರೇಷ್ಠ: ಸನತ್‌ ಜಯಸೂರ್ಯ

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.