ಬ್ರಾವೊ, ಪೊಲಾರ್ಡ್ ಮೀಸಲು ಆಟಗಾರರು
Team Udayavani, May 20, 2019, 10:47 AM IST
ಕಿಂಗ್ಸ್ಟನ್: ವೆಸ್ಟ್ ಇಂಡೀಸ್ನ ಅನುಭವಿ ಕ್ರಿಕೆಟಿಗರಾದ ಡ್ವೇನ್ ಬ್ರಾವೊ ಮತ್ತು ಕೈರನ್ ಪೊಲಾರ್ಡ್ ವಿಶ್ವಕಪ್ ತಂಡದ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ.
ಈಗಾಗಲೇ ವೆಸ್ಟ್ ಇಂಡೀಸ್ 15 ಮಂದಿ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದೆ. ಇದಕ್ಕೆ ಇಬ್ಬರು ಮೀಸಲು ಆಟಗಾರರನ್ನು ಸೇರಿಸಿದೆ.
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿರುವ ಡ್ವೇನ್ ಬ್ರಾವೊ ಆಯ್ಕೆಯಾಗಿರುವುದು ಅಚ್ಚರಿಯ ಸಂಗತಿಯಾಗಿದೆ. ಬ್ರಾವೊ 2016ರಿಂದ ವೆಸ್ಟ್ ಇಂಡೀಸ್ ಏಕದಿನ ತಂಡದ ಪರ ಆಡಿಲ್ಲ. ಇತ್ತೀಚೆಗೆ ಅವರು ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಕೈರನ್ ಪೊಲಾರ್ಡ್ ಕೂಡ ವಿಂಡೀಸ್ ಪರ ಕಳೆದ ಕೆಲವು ತಿಂಗಳಿನಿಂದ ಏಕದಿನ ಪಂದ್ಯವನ್ನು ಆಡಿಲ್ಲ. ಅವರು ಐಪಿ ಎಲ್ನಲ್ಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದರು.