Udayavni Special

ವರ್ಷಕ್ಕೊಂದು ವಿಶ್ವಕಪ್‌: ಬಿಸಿಸಿಐ ವಿರೋಧ

ಐಸಿಸಿಗೆ ಸವಾಲು: ಕೂಟದ ಆಯೋಜನೆ ಹಕ್ಕನ್ನು ಪಡೆದುಕೊಳ್ಳಲು ಬಿಸಿಸಿಐ ಹಿಂದೇಟು?

Team Udayavani, Feb 20, 2020, 5:36 AM IST

BCCI-ICC

ಮುಂಬಯಿ: 2023-2031ರ ಅವಧಿಯಲ್ಲಿ ಪ್ರತೀ ವರ್ಷಕ್ಕೊಂದು ವಿಶ್ವಮಟ್ಟದ ಕ್ರಿಕೆಟ್‌ ಕೂಟ ನಡೆಸುವ ಐಸಿಸಿ ಯೋಜನೆಗೆ ಬಿಸಿಸಿಐ ವಿರೋಧ ಮುಂದುವರಿದಿದೆ. ಈಗಾಗಲೇ ಈ ಪ್ರಸ್ತಾವಕ್ಕೆ ಐಸಿಸಿ ತಾತ್ಕಾಲಿಕ ಒಪ್ಪಿಗೆ ನೀಡಿದೆ ಎಂದು ಕೆಲವು ಮೂಲಗಳು ಹೇಳಿವೆ. ಆದರೆ ಬಿಸಿಸಿಐ, ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ, ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಈ ಕೂಟದ ಬಗ್ಗೆ ಆಕ್ರೋಶ ಹೊಂದಿವೆ. ಹೀಗಿರುವಾಗ ಹೇಗೆ ಕೂಟಕ್ಕೆ ತಾತ್ಕಾಲಿಕ ಒಪ್ಪಿಗೆ ಸಿಕ್ಕಿದೆ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ.

ಈಗಾಗಲೇ ವಿಪರೀತ ಕ್ರಿಕೆಟ್‌ ಕಾರಣಕ್ಕೆ ಅಭಿಮಾನಿಗಳು ಕ್ರಿಕೆಟ್‌ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಈಗ ಮೊದಲಿನ ಜನಪ್ರಿಯತೆ ಹೊಂದಿಲ್ಲ, ಏಕದಿನವೂ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಟಿ20 ಒಂದೇ ಜನರನ್ನು ಸೆಳೆಯುತ್ತಿದೆ. ಹೀಗಿರುವಾಗ ಐಸಿಸಿ, 8 ವರ್ಷಗಳಲ್ಲಿ ವಿಶ್ವಕಪ್‌ ಹೋಲುವ 8 ಕೂಟಗಳನ್ನು ನಡೆಸುವ ಯೋಜನೆ ಹಾಕಿಕೊಂಡಿದೆ. ಅಭಿಮಾನಿಗಳಿಂದ ಇದು ಸ್ವೀಕಾರಾರ್ಹವೇ, ಆಗ ವಿಶ್ವಕಪ್‌ ಮಹತ್ವ ಎಂದಿನಂತೆ ಉಳಿದುಕೊಳ್ಳುವುದೇ ಎಂಬೆಲ್ಲ ಪ್ರಶ್ನೆಗಳ ಮಹತ್ವ ಗೊತ್ತಿದ್ದರೂ, ಐಸಿಸಿ ಬರೀ ಹಣಕ್ಕಾಗಿ ಕೂಟಗಳನ್ನು ನಡೆಸಲು ಮುಂದಾಗಿದೆ ಎನ್ನುವುದು ಸ್ಪಷ್ಟ.

ಐಸಿಸಿಗೆ ಬಿಸಿಸಿಐ ಸವಾಲು
ಇದರಿಂದ ಸದಸ್ಯ ರಾಷ್ಟ್ರಗಳು ಸಿಟ್ಟಾಗಿವೆ. ಈ ರಾಷ್ಟ್ರಗಳ ಆದಾಯ ಕಡಿಮೆಯಾಗಲಿದೆ ಎನ್ನುವುದು ಒಂದು ಕಡೆಯಾದರೆ, ಎಲ್ಲಿ ಜನ ಕ್ರಿಕೆಟ್‌ನಿಂದ ದೂರ ಸರಿಯುತ್ತಾರೋ ಎನ್ನುವ ಆತಂಕ ಇನ್ನೊಂದು ಕಡೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌, ಐಸಿಸಿಗೆ ಸವಾಲು ಒಡ್ಡುವ ಮಾತನ್ನಾಡಿದ್ದಾರೆ. “ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್‌ನ‌ಂತಹ ಕ್ರಿಕೆಟ್‌ ಮಂಡಳಿಗಳು ಐಸಿಸಿಯ ಈ ಕೂಟಗಳನ್ನು ಆಯೋಜಿಸಲು ಮುಂದಾಗದಿದ್ದರೆ ಏನಾಗುತ್ತದೆ, ಈ ಕೂಟಗಳನ್ನು ಐಸಿಸಿ ಎಲ್ಲಿ ನಡೆಸುತ್ತದೆ… ಎಂದು ಪ್ರಶ್ನಿಸಿದ್ದಾರೆ. ಪರೋಕ್ಷವಾಗಿ ಈ ಕೂಟಗಳಿಂದ ಅಂತರ ಕಾಯ್ದುಕೊಳ್ಳುವ ಸುಳಿವು ನೀಡಿದ್ದಾರೆ.

ಕಡಿಮೆಯಾಗಲಿದೆ ಆದಾಯ
ಸದ್ಯದಲ್ಲೇ ಈ ಕೂಟಗಳ ಮಾಧ್ಯಮ ಹಕ್ಕನ್ನು ಐಸಿಸಿ ಮಾರುವುದರಿಂದ, ಅದಕ್ಕೂ ಮುನ್ನ ಕೂಟ ನಡೆಸುವ ಸ್ಥಳ ನಿಗದಿ ಮಾಡಬೇಕಾಗುತ್ತದೆ. ಒಂದು ವೇಳೆ ಈ ಕೂಟಗಳ ಬಗ್ಗೆ ಪ್ರಮುಖ ರಾಷ್ಟ್ರಗಳು ನಿರಾಸಕ್ತಿ ತೋರಿದರೆ ನೇರಪ್ರಸಾರ ಮಾಡುವ ವಾಹಿನಿಗಳು ಬಹಳ ಹಣ ನೀಡಲಾರವು. ಜತೆಗೆ ಜಾಹೀರಾತುದಾರರೂ ಹಿಂದೇಟು ಹಾಕುತ್ತಾರೆ. ಅಷ್ಟೇ ಅಲ್ಲ, ಪ್ರೇಕ್ಷಕರಿಂದ ಬರಬೇಕಾದ ಆದಾಯಕ್ಕೂ ಕತ್ತರಿ ಬೀಳುತ್ತದೆ!

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಧಾರವಾಡ: 2 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ: 2 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ

ದೇಶದಾದ್ಯಂತ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ

ದೇಶದಾದ್ಯಂತ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ!

ಕೋವಿಡ್‌ ವಾರಿಯರ್ಸ್ ಗಳಿಗೆ ಶೌರ್ಯ ಪುರಸ್ಕಾರ, ವಿಶೇಷ ನಗದು ಬಹುಮಾನ ನೀಡಿ: ದೇಶಪಾಂಡೆ.

ಕೋವಿಡ್‌ ವಾರಿಯರ್ಸ್ ಗಳಿಗೆ ಶೌರ್ಯ ಪುರಸ್ಕಾರ, ವಿಶೇಷ ನಗದು ಪುರಸ್ಕಾರ ನೀಡಿ: ದೇಶಪಾಂಡೆ.

ರಾಜ್ಯ ಸರಕಾರ ಪಿಯುಸಿ ಮೌಲ್ಯ ಮಾಪನಕ್ಕೆ ಉಪನ್ಯಾಸಕರ ಮೇಲೆ ಒತ್ತಡ ಹೇರುತ್ತಿರುವುದು ಖಂಡನೀಯ

ರಾಜ್ಯ ಸರಕಾರ ಪಿಯುಸಿ ಮೌಲ್ಯ ಮಾಪನಕ್ಕೆ ಉಪನ್ಯಾಸಕರ ಮೇಲೆ ಒತ್ತಡ ಹೇರುತ್ತಿರುವುದು ಖಂಡನೀಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತಿ ಹೆಚ್ಚು ಸಂಭಾವನೆ ಪಡೆಯುವ ಫೋರ್ಬ್ಸ್ ನೂರರ ಪಟ್ಟಿಯಲ್ಲಿ ಏಕೈಕ ಕ್ರಿಕೆಟಿಗ

ಅತಿ ಹೆಚ್ಚು ಸಂಭಾವನೆ ಪಡೆಯುವ ಫೋರ್ಬ್ಸ್ ನೂರರ ಪಟ್ಟಿಯಲ್ಲಿ ಏಕೈಕ ಕ್ರಿಕೆಟಿಗ

ಜೆಪಿ ಡ್ಯುಮಿನಿಯ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಜಾಗವಿಲ್ಲ!

ಜೆಪಿ ಡ್ಯುಮಿನಿಯ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಜಾಗವಿಲ್ಲ!

“ಭಾರತ ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆ ಇದೆ’

“ಭಾರತ ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆ ಇದೆ’

ಜೂ. 10: ಐಸಿಸಿಗೆ ನೂತನ ಅಧ್ಯಕ್ಷರ ನೇಮಕ?

ಜೂ. 10: ಐಸಿಸಿಗೆ ನೂತನ ಅಧ್ಯಕ್ಷರ ನೇಮಕ?

55 ಕ್ರಿಕೆಟಿಗರ ಅಭ್ಯಾಸಕ್ಕೆ ಇಸಿಬಿ ಅನುಮತಿ

55 ಕ್ರಿಕೆಟಿಗರ ಅಭ್ಯಾಸಕ್ಕೆ ಇಸಿಬಿ ಅನುಮತಿ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಧಾರವಾಡ: 2 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ: 2 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ

ಉಳಿದದ್ದು ಆಕಾಶ ; ಹೊಸ ಮಳೆಗಾಲಕ್ಕೆ ಹಳೆ ಬೆನ್ನುಡಿ

ಉಳಿದದ್ದು ಆಕಾಶ ; ಹೊಸ ಮಳೆಗಾಲಕ್ಕೆ ಹಳೆ ಬೆನ್ನುಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.