ವಿಶ್ವಕಪ್‌ ಶೂಟಿಂಗ್‌ : ಒಂದಂಕದಿಂದ ಫೈನಲಿಗೇರಲು ಸಂಜೀವ್‌ ವಿಫ‌ಲ

Team Udayavani, Nov 19, 2019, 11:44 PM IST

ಹೊಸದಿಲ್ಲಿ: ಭಾರತದ ಸಂಜೀವ್‌ ರಜಪೂತ್‌ ಅವರು ಕೇವಲ ಒಂದಂಕದಿಂದ ಪ್ರತಿಷ್ಠಿತ ಐಎಸ್‌ಎಸ್‌ಎಫ್ ವಿಶ್ವಕಪ್‌ ಫೈನಲ್ಸ್‌ನ ಶೂಟಿಂಗ್‌ನ ಫೈನಲ್‌ ಹಂತಕ್ಕೇರಲು ವಿಫ‌ಲರಾಗಿದ್ದಾರೆ. ವರ್ಷದ ಅಗ್ರ ರ್‍ಯಾಂಕಿನ ರೈಫ‌ಲ್‌ ಮತ್ತು ಪಿಸ್ತೂಲ್‌ ಶೂಟರ್‌ಗಳು ಈ ಕೂಟದಲ್ಲಿ ಭಾಗವಹಿಸುತ್ತಿದ್ದು ಚೆಕ್‌ ಗಣರಾಜ್ಯದ ಫಿಲಿಪ್‌ ನೆಪೆಚಾಲ್‌ ಮತ್ತು ಬ್ರಿಟನ್‌ನ ಸಿಯೊನೈಡ್‌ ಮೆಸಿಂತೋಷ್‌ ಚಿನ್ನ ಗೆಲ್ಲುವ ಮೂಲಕ ದಿನದ ಗೌರವ ಸಂಪಾದಿಸಿದರು.

ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ರಜಪೂತ್‌ 50 ಮೀ. ರೈಫ‌ಲ್‌ ತ್ರಿ ಪೊಸಿಷನ್‌ನ ಅರ್ಹತಾ ಸುತ್ತಿನಲ್ಲಿ 1153 ಅಂಕ ಗಳಿಸಿ 9ನೇ ಸ್ಥಾನ ಪಡೆದರು. ಪೋಲ್ಯಾಂಡ್‌ನ‌ ಶೂಟರ್‌ ತೊಮಾಜ್‌ ಬಾರ್ಟ್ನಿಕ್‌ 1154 ಅಂಕ ಪಡೆದು ಎಂಟನೇ ಸ್ಥಾನಿಯಾಗಿ ಫೈನಲಿಗೇರಿದ್ದರು. ಒಂದು ವೇಳೆ ತೊಮಾಜ್‌ ಜತೆ ಸಂಜೀವ್‌ ಅಂಕ ಸಮಬಲಗೊಳಿಸಿದ್ದರೆ ಪೋಲ್ಯಾಂಡಿನ ಶೂಟರ್‌ಗಿಂತ ಉತ್ತಮ ನಿರ್ವಹಣೆಯ ಆಧಾರದಲ್ಲಿ ಸಂಜೀವ್‌ ಫೈನಲಿಗೇರುವ ಸಾಧ್ಯತೆಯಿತ್ತು.

ಐಎಸ್‌ಎಸ್‌ಎಫ್ನ ವರ್ಷಾಂತ್ಯದ ಈ ಪ್ರತಿಷ್ಠಿತ ಕೂಟದಲ್ಲಿ ಭಾರತದ ಅಖೀಲ್‌ ಶೆರಾನ್‌ ಕೂಡ ಭಾಗವಹಿಸಿದ್ದರು. ಆದರೆ 1147 ಅಂಕ ಗಳಿಸಿದ್ದ ಅವರು 13ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ವನಿತೆಯರ ತ್ರಿ ಪೊಸಿಷನ್‌ನಲ್ಲಿ ಭಾರತದ ಅಂಜುಮ್‌ ಮೌದ್ಗಿಲ್‌ ಅವರು ಒಟ್ಟಾರೆ 13ನೇ ಸ್ಥಾನ ಪಡೆಯಲಷ್ಟೇ ಶಕ್ತರಾಗಿ ನಿರಾಸೆ ಮೂಡಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ